ಬೆಂಗಳೂರು: ಎಲ್ಲೆಡೆ ಸುದ್ದಿಯಾಗಿದ್ದ ಎಂಟು ಕೋಟಿ ಮೌಲ್ಯದ ಶ್ವಾನ ನಾಪತ್ತೆ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದ್ದು, ಶ್ವಾನವನ್ನು ಪತ್ತೆ ಹಚ್ಚಿರುವ ಹನುಮಂತ ನಗರ ಪೊಲೀಸರು ಮಾಲೀಕನ ಕೈಗೆ ಅದನ್ನು ಒಪ್ಪಿಸಿದ್ದಾರೆ.
ಶ್ರೀನಗರದ ನಿವಾಸಿ ಸತೀಶ್ ಎಂಬುವರ 8 ಕೋಟಿ ಮೌಲ್ಯದ್ದು ಎನ್ನಲಾಗಿರುವ ಅಪರೂಪದ ಅಲಸ್ಕಾನ್ ಮಾಲಾಮೂಟ್ ತಳಿಯ ಶ್ವಾನ ಡಿ.12ರಂದು ಮನೆಯಲ್ಲಿ ಕಟ್ಟಿ ಹಾಕಿದ್ದ ಸ್ಥಳದಿಂದಲೇ ನಾಪತ್ತೆಯಾಗಿತ್ತು. ಈ ಬಗ್ಗೆ ಶ್ವಾನದ ಮಾಲೀಕ ಸತೀಶ್ ಅವರು ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅಲ್ಲದೆ ಶ್ವಾನವನ್ನು ಹುಡುಕಿ ಕೊಟ್ಟವರಿಗೆ ಒಂದು ಲಕ್ಷ ಬಹುಮಾನವನ್ನು ಸಹ ಘೋಷಿಸಿದ್ದರು.

ಇದನ್ನೂ ಓದಿ: ಕೋಟಿ ಬೆಲೆಬಾಳುವ ಈ ಶ್ವಾನ ಕಾಣೆ: ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಸದ್ಯ ಶ್ವಾನವನ್ನು ಹನುಮಂತ ನಗರ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು, ಮಾಲೀಕನ ಕೈಗೆ ತಲುಪಿಸಿದ್ದಾರೆ. ಕೋಟಿ ಬೆಲೆ ಬಾಳುವ ಶ್ವಾನವನ್ನು ಸತೀಶ್ ಪರಿಚಯಸ್ಥ ಆಟೋ ಚಾಲಕನೋರ್ವ ಅಪಹರಿಸಿರುವ ಸಂಶಯವಿದೆ ಎನ್ನಲಾಗಿದೆ. ಆ ಆಟೋ ಚಾಲಕನಿಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ. ಸದ್ಯ ಶ್ವಾನದ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ.