ETV Bharat / state

ಮೆಟ್ರೋ ರೈಲಿನ ಮೇಲೆ ಕಿಡಿಗೇಡಿಗಳಿಂದ ಕಲ್ಲು ತೂರಾಟ - ಸಿಲಿಕಾನ್​ ಸಿಟಿ

ಚಲಿಸುತ್ತಿದ್ದ ನಮ್ಮ ಮೆಟ್ರೋ ರೈಲಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ರೈಲಿನ ಗಾಜಿನ ಪರದೆ ಜಖಂ ಮಾಡಿರುವ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ.

ನಮ್ಮ ಮೆಟ್ರೋ
author img

By

Published : Aug 4, 2019, 9:02 AM IST

ಬೆಂಗಳೂರು: ಸಾಮಾನ್ಯ ರೈಲುಗಳು ಚಲಿಸುತ್ತಿದ್ದರೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ಮಾಡುತ್ತಿದ್ದ ವರದಿಗಳನ್ನ ನಾವು ಸಾಮಾನ್ಯವಾಗಿ ಗಮನಿಸಿದ್ದೇವೆ. ಆದರೆ, ಕಿಡಿಗೇಡಿಗಳ ಕೃತ್ಯ ಇಷ್ಟಕ್ಕೆ ನಿಲ್ಲದೆ ನಮ್ಮ ಮೆಟ್ರೋ ರೈಲಿನ ಮೇಲೂ ಸಹ ಕಲ್ಲು ತೂರಾಟ ನಡೆಸಿರುವ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ.

namma metro
ನಮ್ಮ ಮೆಟ್ರೋ

ಹೌದು, ಮೂರು ಬೋಗಿಯುಳ್ಳ ರೈಲಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದು, ಪರಿಣಾಮ ರೈಲಿನ ಗಾಜಿನ ಪರದೆ ಜಖಂ ಆಗಿದೆ. ಶ್ರೀರಾಂಪುರ, ಮಂತ್ರಿ ಸ್ಕ್ವೈರ್​ ಮತ್ತು ಸುರಂಗದಿಂದ ಹೊರ ಬರುತ್ತಿದ್ದಂತೆ ಹಲವೆಡೆ ಕಲ್ಲು ತೂರಾಟ ನಡೆಸಿದ್ದಾರೆ. ಪ್ರಯಾಣಿಕರನ್ನ ಹೊತ್ತೊಯ್ಯುವ ವೇಳೆ ಕಲ್ಲು ತೂರಿದ ಕಿಡಿಗೇಡಿಗಳ ಕೃತ್ಯದಿಂದ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ.

ಹಾಗೇ ಮೆಟ್ರೋ ರೈಲು ಮಾರ್ಗದ ಮಧ್ಯೆ ಕಸದ ಬ್ಯಾಗ್ ಬಿಸಾಡುತ್ತಿದ್ದು, ರೈಲು ನಿಲ್ಲಿಸಿ ಬ್ಯಾಗ್​ಗಳ ತೆರವುಗೊಳಿಸಿ ನಂತರ ರೈಲು ಓಡಿಸುವ ಪರಿಸ್ಥಿತಿ ಉಂಟಾಗಿದೆ. ಕಿಡಿಗೇಡಿಗಳ ಕೃತ್ಯದಿಂದ ನಮ್ಮ ಮೆಟ್ರೋ ಕಂಗೆಟ್ಟಿದ್ದು, ಈಗಾಲೇ ಲಕ್ಷಾಂತರ ರೂಪಾಯಿ ಹಾನಿ‌ ಆಗಿದೆ. ಹಾಗಾಗಿ ನಮ್ಮ ಮೆಟ್ರೋ ಅಧಿಕಾರಿಗಳು ಈ ಕುರಿತಂತೆ ಸ್ಥಳೀಯ ಪೊಲೀಸರಿಗೆ ದೂರು‌ ನೀಡಿದ್ದಾರೆ.

Intro:ಚಲಿಸುತ್ತಿದ್ದ ಮೆಟ್ರೋ ರೈಲುಗಳ ಮೇಲೆ ಕಲ್ಲು ತೂರಾಟ; ರೈಲಿನ ಗಾಜಿನ ಪರದೆ ಜಖಂ..

ಬೆಂಗಳೂರು: ಸಾಮಾನ್ಯ ರೈಲುಗಳು ಚಲಿಸುತ್ತಿದ್ದರೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ಮಾಡುತ್ತಿದ್ದ ವರದಿಗಳು ಬರುತ್ತಿದ್ದವು.‌..ಈಗ ಅದು ಮೆಟ್ರೋ ರೈಲುಗಳನ್ನು ಬಿಡುತ್ತಿಲ್ಲ.. ಮೂರು ಬೋಗಿಯುಳ್ಳ ರೈಲುಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ..ಕಲ್ಲು ತೂರಾಟದ ಪರಿಣಾಮ ರೈಲಿನ ಗಾಜಿನ ಪರದೆ ಜಖಂ ಆಗಿದೆ.. ಶ್ರೀರಾಂಪು, ಮಂತ್ರಿ ಸ್ಕ್ವೈಕ್ ಮತ್ತು ಸುರಂಗದಿಂದ ಹೊರ ಬರ್ತಿದ್ದಂಗೆ ಕಲ್ಲು ತೂರಾಟ ನಡೆಸಿದ್ದಾರೆ.. ಪ್ರಯಾಣಿಕರನ್ನ ಹೊತ್ತೊಯ್ಯುವ ವೇಳೆ ಕಲ್ಲು ತೂರಿದ ಕಿಡಿಗೇಡಿಗಳ ಕೆಲಸಕ್ಕೆ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ..

ಇತ್ತ ಮೆಟ್ರೋ ರೈಲು ಮಾರ್ಗದ ಮಧ್ಯೆ ಕಸದ ಬ್ಯಾಗ್ ಬಿಸಾಡುತ್ತಿದ್ದು, ರೈಲು ನಿಲ್ಲಿಸಿ ಬ್ಯಾಗ್ ಗಳ ತೆರವು ಮಾಡಿ ನಂತರ ರೈಲು ಓಡಾಟ ಮಾಡುವ ಪರಿಸ್ಥಿತಿ ಉಂಟಾಗಿದೆ..‌ ಕಿಡಿಗೇಡಿಗಳ ಕೃತ್ಯದಿಂದ ನಮ್ಮ ಮೆಟ್ರೋ ಕಂಗೆಟ್ಟಿದ್ದು, ಈಗಾಲೇ ಲಕ್ಷಾಂತರ ರೂಪಾಯಿ ಹಾನಿ‌ ಆಗಿದ್ದು ಸ್ಥಳೀಯ ಪೊಲೀಸ್ರೀಗೆ ದೂರು‌ ನೀಡಿದ್ದಾರೆ ನಮ್ಮ ಮೆಟ್ರೋ ಅಧಿಕಾರಿಗಳು.. ಒಟ್ಟಾರೆ, ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸುವ ಸ್ಥಿತಿ ನಿರ್ಮಾಣವಾಗಿದೆ..

KN_BNG_01_METRO_GLASS_JAKAM_SCRIPT_7201801

Body:.Conclusion:.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.