ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕನ್ನು ಹೆಚ್ಚು ಹರಡದಂತೆ ಕಟ್ಟಿ ಹಾಕಲು ಲಾಕ್ಡೌನ್ ಅಸ್ತ್ರ ಪ್ರಯೋಗ ಮಾಡಲಾಗಿತ್ತು. ಇದೀಗ ಹಂತ ಹಂತವಾಗಿ ಅನ್ಲಾಕ್ ಮಾಡಲಾಗಿದ್ದು, ಇತರೆ ಚಟುವಟಿಕೆಗಳು ಚುರುಕುಗೊಂಡಿದೆ. ಆದರೆ ಶೈಕ್ಷಣಿಕ ಚಟುವಟಿಕೆಗೆ ಮಾತ್ರ ಕಡಿವಾಣ ಹಾಕಲಾಗಿದೆ.
ಶಿಕ್ಷಣ ಇಲಾಖೆಯ ಆಯುಕ್ತ ಅನ್ಬುಕುಮಾರ್ ನೇತೃತ್ವದಲ್ಲಿ 20 ಸದಸ್ಯರನ್ನೊಳಗೊಂಡ ಕಾರ್ಯಪಡೆಯನ್ನ ರಚನೆ ಮಾಡಲಾಗಿದೆ. ಭೌತಿಕ ತರಗತಿ ಹೇಗೆ ಆರಂಭ ಮಾಡಬೇಕು, ವಿದ್ಯಾಗಮ ನಡೆಸಬೇಕಾ?, ಬೇಡ್ವಾ? ವಿದ್ಯಾರ್ಥಿಗಳ ಸುರಕ್ಷತೆ ಹೇಗೆ? ಎಂಬುದರ ಕುರಿತು ಚರ್ಚೆ ನಡೆಯುತ್ತಿದೆ. ಈಗಾಗಲೇ ರಾಜ್ಯದಲ್ಲಿ ಜುಲೈ ಒಂದರಿಂದ ದಾಖಲಾತಿ ಪ್ರಕ್ರಿಯೆ ಹಾಗೂ ಶೈಕ್ಷಣಿಕ ಚಟುವಟಿಕೆಯೂ ಶುರುವಾಗಿದೆ.
ಇತ್ತ ಐಸಿಎಂಆರ್ ಪ್ರಾಥಮಿಕ ತರಗತಿಗೂ ಅವಕಾಶ ಕೊಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಸುರೇಶ್ ಕುಮಾರ್, ಸದ್ಯಕ್ಕೆ 8,9,10ನೇ ತರಗತಿಯನ್ನ ಆರಂಭಿಸಬೇಕೆಂಬ ಚರ್ಚೆ ನಡೆಯುತ್ತಿದೆ. ಈ ಕುರಿತು ಮುಂದಿನ ಸೋಮವಾರ ಅಥವಾ ಮಂಗಳವಾರ ಸಭೆ ನಡೆಸಿ ತಿಳಿಸಲಾಗುವುದು. ಎಲ್ಲ ಆಯಾಮಗಳಲ್ಲಿ ಚರ್ಚಿಸಿ ಸೂಕ್ತ ತೀರ್ಮಾನಗಳನ್ನ ತೆಗೆದುಕೊಳ್ಳಲಾಗುವುದೆಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಮಕ್ಕಳ ಸುರಕ್ಷತೆಗಾಗಿ ಆದ್ಯತೆಯ ಮೇರೆಗೆ ಶಾಲಾ ಸಿಬ್ಬಂದಿಗೆ ಕೋವಿಡ್ ಲಸಿಕೆ: ಡಾ.ಕೆ.ಸುಧಾಕರ್