ETV Bharat / state

ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವ ಸುಧಾಕರ್ - bengaluru latest News

ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್​ ಯೋಜನೆಯ ಅಡಿಯಲ್ಲಿ ಹೊಸ ರಸ್ತೆಗಳ ಕಾಮಗಾರಿಗೆ ಸಚಿವ ಡಾ. ಕೆ.ಸುಧಾಕರ್ ಚಾಲನೆ ನೀಡಿದರು. ಇನ್ನು ಇದೇ ವೇಳೆ ವಾಣಿ ವಿಲಾಸ ಆಸ್ಪತ್ರೆಯಲ್ಲಿ ನೂತನ ಪ್ರಸೂತಿ ಟ್ರಯೇಜ್ ವಲಯ ಹಾಗೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೇಲ್ದರ್ಜೆಗೇರಿಸಿರುವ ರೆಸ್ಪಿರೇಟರಿ ಐಸಿಯುಗಳ ಉದ್ಘಾಟನೆ ಮಾಡಲಾಯಿತು.

victoria-hospital
ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವ ಸುಧಾಕರ್
author img

By

Published : Feb 10, 2021, 5:17 PM IST

ಬೆಂಗಳೂರು: ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಆವರಣದಲ್ಲಿರುವ ವಾಣಿ ವಿಲಾಸ ಆಸ್ಪತ್ರೆಯಲ್ಲಿ ನೂತನ ಪ್ರಸೂತಿ ಟ್ರಯೇಜ್ ವಲಯ ಹಾಗೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೇಲ್ದರ್ಜೆಗೇರಿಸಿರುವ ರೆಸ್ಪಿರೇಟರಿ ಐಸಿಯುಗಳ ಉದ್ಘಾಟನೆ ಮಾಡಲಾಯಿತು. ಅಷ್ಟೇ ಅಲ್ಲದೆ ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್​ ಯೋಜನೆಯ ಅಡಿಯಲ್ಲಿ ಹೊಸ ರಸ್ತೆಗಳ ಕಾಮಗಾರಿಗೆ ಸಚಿವ ಡಾ. ಕೆ.ಸುಧಾಕರ್ ಚಾಲನೆ ನೀಡಿದರು.

ಶ್ವಾಸಕೋಶ ರೋಗಿಗಳ ಆರೈಕೆಗೆ ತೀವ್ರ ನಿಗಾ ಘಟಕ ಸ್ಥಾಪನೆ: 30 ಹಾಸಿಗೆಗಳ ಸಾಮರ್ಥ್ಯದ ಶ್ವಾಸಕೋಶ ತೀವ್ರ ನಿಗಾ ಘಟಕವನ್ನು ವಿಕ್ಟೋರಿಯಾ ಆಸ್ಪತ್ರೆಯ ಶತಮಾನೋತ್ಸವ ಕಟ್ಟಡದಲ್ಲಿ ಪ್ರಾರಂಭಿಸಲಾಗುತ್ತಿದೆ. ಇದು ಶ್ವಾಸಕೋಶ ರೋಗಿಗಳಿಗಾಗಿಯೇ ವಿಶೇಷ ಕಾಳಜಿಯನ್ನು ನೀಡಲು ಉಪಯೋಗವಾಗುತ್ತದೆ. ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳಲ್ಲಿ ಸಂಖ್ಯೆ ಹೆಚ್ಚಾಗುತ್ತಿದೆ. ಅಂತಹ ರೋಗಿಗಳಿಗೆ ವಿಶೇಷ ಕಾಳಜಿಯಿಂದ ಚಿಕಿತ್ಸೆಯನ್ನು ನೀಡುವ ಅವಶ್ಯಕತೆಯಿದೆ.

ಶ್ವಾಸಕೋಶ ಪರಿಸ್ಥಿತಿಗಳಾದ ಅಕ್ಯೂಟ್​ ರೆಸ್ಪಿರೇಟರಿ ಫೈಲ್ಯೂರ್​, ಅಡಲ್ಟ್​ ಆನ್​ಸೆಟ್ ರೆಸ್ಪಿರೇಟರಿ ಡಿಸ್ಟ್ರೆಸ್​ ಸಿಂಡ್ರೋಮ್​, ಅಕ್ಯೂಟ್​ ಎಕ್ಸರ್​ಬೃಷನ್​ ಆಫ್​ ಸಿಒಪಿಡಿ, ಅಸ್ತಮಾ, ಇಂಟರ್​ಸ್ಟೀಷಿಯಲ್​ ಲಂಗ್​ ಡಿಸೀಸ್​, ನ್ಯುಮೋನಿಯಾಸ್​ (ವೈರಸ್, ಬ್ಯಾಕ್ಟೀರಿಯಾ, ಫಂಗಸ್​, ಇತ್ಯಾದಿ), ನ್ಯುಮೋತ್ರ್ಯಾಕ್ಸ್​ ಇವುಗಳಿಗೆ ಶ್ವಾಸಕೋಶ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುವುದು.

ಶ್ವಾಸಕೋಶ ತೀವ್ರ ನಿಗಾ ಘಟಕದಲ್ಲಿ ಪುಲ್ಮೋನೊಲೊಜಿಸ್ಟ್​, ಇಂಟೆನ್ಸ್​ವಿಸ್ಟ್​ (Pulmonologists, Intensivists,) ಟ್ರೈನ್ ನರ್ಸಿಂಗ್ ಆಫೀಸರ್ 24/7 ಕಾರ್ಯನಿರ್ವಹಿಸುತ್ತಾರೆ. ಸುಮಾರು ರೂ. 200 ಲಕ್ಷಗಳ ಅನುದಾನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಾಗೂ ಕೋವಿಡ್ ಸಂದರ್ಭದಲ್ಲಿ ಕೇಂದ್ರಿಕೃತವಾಗಿ ಸರಬರಾಜು ಆಗಿರುವ ಉಪಕರಣಗಳಿಂದ ಐಸಿಯುನ್ನು ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಶ್ವಾಸಕೋಶ ವಿಭಾಗವನ್ನು ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸುವ ಮೂಲಕ ನಿರಂತರವಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಸಚಿವ ಸುಧಾಕರ್ ತಿಳಿಸಿದರು. ಫೆಲೋಶಿಪ್​​ ಕೋರ್ಸ್ ಅನ್ನು “Respiratory Critical Care” ವಿಷಯದಲ್ಲಿ ಸ್ನಾತಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಯೋಜನೆ ಮಾಡಲಾಗಿದೆ.

ಸ್ಮಾರ್ಟ್ ಸಿಟಿ ಯೋಜನೆಯಡಿ ಹೊಸ ರಸ್ತೆಗಳ ಕಾಮಗಾರಿ: ಇನ್ನು ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸುಸಜ್ಜಿತ ರಸ್ತೆಗಳನ್ನು ಅಭಿವೃದ್ಧಿಪಡಿಸಲು, ಪಾರ್ಕಿಂಗ್​ಗೆ ವ್ಯವಸ್ಥೆ, ಫುಟ್​ಪಾತ್ ಅಭಿವೃದ್ಧಿ, ಪ್ರವೇಶ ದ್ವಾರ ಮತ್ತು ಟ್ರಸ್ ನಿರ್ಮಾಣ ಸೇರಿದಂತೆ ಬೀದಿ ದೀಪ ಅಳವಡಿಸಲು ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ (BMCRI Mobility Plan Project) ಕಾಮಗಾರಿಯನ್ನು ರೂ. 10.65 ಕೋಟಿಗಳ ಅನುದಾನದಲ್ಲಿ ಕೈಗೆತ್ತಿಕೊಳ್ಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.