ETV Bharat / state

ಸೋನಿಯಾ, ರಾಹುಲ್ ಮನೆ ಮುಂದೆ ಕಾಯುವಾಗ ನೀವು ನಾಯಿ ಮರಿ, ಬೆಕ್ಕಿನ ಮರಿ ಆಗಿದ್ದರಾ?: ಸಿದ್ದರಾಮಯ್ಯ ವಿರುದ್ಧ ಅಶೋಕ್ ವಾಗ್ದಾಳಿ - ​​ ಈಟಿವಿ ಭಾರತ ಕನ್ನಡ

ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಗುರ ಪದ ಬಳಕೆ ವಿಚಾರ - ಮಾಜಿ ಸಿಎಂ ವಿರುದ್ಧ ಸಚಿವ ಆರ್​ ಅಶೋಕ್​ ವಾಗ್ದಾಳಿ - ಸಿದ್ದರಾಮಯ್ಯ ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು

minister-r-ashok-slams-siddaramaih
ಸೋನಿಯಾ, ರಾಹುಲ್ ಮನೆ ಮುಂದೆ ಕಾಯುವಾಗ ನೀವು ನಾಯಿಮರಿ, ಬೆಕ್ಕಿನ ಮರಿ ಆಗಿದ್ರಾ ?: ಸಿದ್ದರಾಮಯ್ಯ ವಿರುದ್ಧ ಅಶೋಕ್ ವಾಗ್ದಾಳಿ
author img

By

Published : Jan 4, 2023, 5:00 PM IST

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ನಾಯಿಮರಿ ಪದ ಬಳಕೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷನಾಯಕ ಸಿದ್ದರಾಮಯ್ಯ ವಿರುದ್ದ ಕಂದಾಯ ಸಚಿವ ಆರ್​ ಅಶೋಕ್​​ ಕಿಡಿಕಾರಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಅಗೌರವ ತಂದಿರುವ ಸಿದ್ದರಾಮಯ್ಯ ಈ ಕೂಡಲೇ ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯ ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು: ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಸಿಸಿ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಮನೆ ಮುಂದೆ ಕುಳಿತು ಗುಲಾಮಗಿರಿ ತೋರಿಸಿದ್ದ ನೀವು, ಆಗ ನಾಯಿಮರಿ ಆಗಿದ್ದಿರಾ? ಇಲ್ಲ ಬೆಕ್ಕಿನ ಮರಿ ಆಗಿದ್ದಿರಾ ಎಂದು ನಾನು ಹೇಳಲ್ಲ. ಈ ರೀತಿ ಹೇಳುವುದು ನಮ್ಮ ಸಂಸ್ಕೃತಿ ಅಲ್ಲ ಎಂದು ಹೇಳಿದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರು, ಬಸವರಾಜ ಬೊಮ್ಮಾಯಿ ಅವರ ಬಗ್ಗೆ ಕೀಳು‌ ಭಾಷೆಯಲ್ಲಿ ಮಾತನಾಡಿದ್ದಾರೆ. ಪ್ರತಿ ಪಕ್ಷದ ನಾಯಕನಿಗೆ ಇದು ಶೋಭೆ ತರುವುದಿಲ್ಲ ಎಂದು ಹೇಳಿದರು.

ಕಾಂಗ್ರೆಸ್​ ಸಂಸ್ಕೃತಿ ತೋರಿಸುತ್ತದೆ : ಇದು ಕಾಂಗ್ರೆಸ್ ಪಕ್ಷದ ಸಂಸ್ಕೃತಿಯನ್ನು ತೋರಿಸುತ್ತದೆ. ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ನಾಯಿಮರಿ ಪದ ಬಳಕೆ ಮಾಡಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮುಂದೆ ನಾಲ್ಕು ನಾಲ್ಕು ದಿನ ಭೇಟಿಗೆ ಕಾದು ನೀವು ಗುಲಾಮಗಿರಿ ತೋರಿಸಿದ್ದೀರಿ. ಆಗ ನೀವು ನಾಯಿಮರಿ ಆಗಿದ್ದೀರೋ..? ನರಿ ಆಗಿದ್ದೀರೋ..? ಬೆಕ್ಕಿನ ಮರಿ ಆಗಿದ್ದೀರೋ ಎಂದು ನಾನು ಹೇಳಲ್ಲ ಎಂದು ಸಚಿವ ಆರ್​ ಅಶೋಕ್​ ಪ್ರಶ್ನಿಸಿದರು.

ಆದರೆ, ಡಿಕೆಶಿ ಮುಂದೆ ನೀವು ಏನಾಗಿದ್ದೀರಾ..? ನೀವು ಏನು ಅನ್ನೋದನ್ನು ಮೊದಲು ಅರ್ಥ ಮಾಡಿಕೊಳ್ಳಿ. ಡಿಕೆಶಿ ಮುಂದೆ ನೀವು ಬಾಲ ಬಿಚ್ಚೋದಕ್ಕೆ ಆಗಲ್ಲ. ನೀವು ಸಿಎಂ ಸ್ಥಾನಕ್ಕೆ ಅಗೌರವ ತೋರಿಸಿದ್ದೀರಿ. ಇದು ಖಂಡನೀಯ ಎಂದು ಸಚಿವರು ಗರಂ ಆದರು.

ಅಭಿವೃದ್ಧಿ ಮೇಲೆಯೇ ಚುನಾವಣೆಗೆ ಹೋಗುತ್ತೇವೆ : ನಳಿನ್ ಕುಮಾರ್ ಕಟೀಲ್ ನಮ್ಮ ಪಕ್ಷದ ರಾಜ್ಯಾಧ್ಯಕ್ಷರು. ಲವ್ ಜಿಹಾದ್ ಕೂಡ ಒಂದು ಅಜೆಂಡಾ ಇರಬಹುದು. ಆದರೆ, ಅಭಿವೃದ್ಧಿಯೇ ನಮ್ಮ ಅಜೆಂಡಾ. ನರೇಂದ್ರ ಮೋದಿಯೇ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಹೇಳಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರದ ಅಭಿವೃದ್ಧಿ ಅಜೆಂಡಾದ ಮೇಲೆ ನಾವು ಚುನಾವಣೆಗೆ ಹೋಗುತ್ತೇವೆ. ಲವ್ ಜಿಹಾದ್ ಒಂದು ಮಾರಕ, ಅದರ ವಿರುದ್ಧವೂ ನಾವು ಹೋರಾಟ ಮಾಡಬೇಕಿದೆ. ಅದನ್ನೂ ಮಾಡುತ್ತೇವೆ ಎಂದರು.

ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ: ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಬೊಮ್ಮಾಯಿ, ಸಿದ್ದರಾಮಯ್ಯ ಅವರ ಹೇಳಿಕೆಗೆ ಜನರೇ ತಕ್ಕ ಉತ್ತರ ನೀಡುತ್ತಾರೆ. ಈ ಹೇಳಿಕೆ ಅವರ ವ್ಯಕ್ತಿತ್ವವನ್ನು ತೋರುತ್ತದೆ. ನಾಯಿ ನಿಯತ್ತಿನ ಪ್ರಾಣಿ, ನಾನು ಜನರಿಗೆ ನಿಯತ್ತಾಗಿ ಕೆಲಸ ಮಾಡುತ್ತಿರುವೆ, ನಿಯತ್ತನ್ನು ಜನರ ಪರವಾಗಿ ಉಳಿಸಿಕೊಂಡು ಹೋಗುವೆ' ಎಂದು ಪ್ರತಿಪಕ್ಷ ನಾಯಕರಿಗೆ ಖಾರವಾಗಿ ಪ್ರತಿಕ್ರಿಯಿಸಿದರು.

ಇದನ್ನೂ ಓದಿ : ನಾಯಿ ನಿಯತ್ತಿನ ಪ್ರಾಣಿ, ನಾನು ಜನರಿಗೆ ನಿಯತ್ತಿನಿಂದ ಕೆಲಸ ಮಾಡುತ್ತಿರುವೆ: ಸಿದ್ದರಾಮಯ್ಯಗೆ ಸಿಎಂ ತಿರುಗೇಟು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.