ETV Bharat / state

ಬಿಎಸ್​ವೈ ಭೇಟಿಯಾದ ಸಚಿವ ನಾರಾಯಣ ಗೌಡ: ಶಿವಮೊಗ್ಗ ಅಭಿವೃದ್ಧಿ ಕುರಿತು‌ ಚರ್ಚೆ - ಸಚಿವ ಡಾ. ನಾರಾಯಣಗೌಡ ಬೆಂಗಳೂರಿನಲ್ಲಿ ಬಿಎಸ್​ವೈ ಭೇಟಿ

ಸಚಿವ ಡಾ. ನಾರಾಯಣಗೌಡ ಇಂದು ಶಿವಮೊಗ್ಗಕ್ಕೆ ತೆರಳುವ ಮುನ್ನ ಯಡಿಯೂರಪ್ಪ ಅವರ ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿ ಮಾತುಕತೆ ನಡೆಸಿದ್ದಾರೆ. ಅಭಿವೃದ್ಧಿ ಕುರಿತು ಬಿಎಸ್​ವೈ ಜೊತೆ ಚರ್ಚಿಸಿ, ಅಭಿವೃದ್ಧಿ ಕೆಲಸಗಳನ್ನ ಕೈಗೊಳ್ಳಲು ಮಾರ್ಗದರ್ಶನ ನೀಡುವಂತೆ ಕೋರಿದ್ದಾರೆ ಎನ್ನಲಾಗ್ತಿದೆ.

ಬಿಎಸ್​ವೈ ಭೇಟಿಯಾದ ಸಚಿವ ನಾರಾಯಣಗೌಡ
ಬಿಎಸ್​ವೈ ಭೇಟಿಯಾದ ಸಚಿವ ನಾರಾಯಣಗೌಡ
author img

By

Published : Jan 25, 2022, 8:34 PM IST

ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ನೂತನ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿರುವ ಸಚಿವ ಡಾ. ನಾರಾಯಣಗೌಡ ಇಂದು ಶಿವಮೊಗ್ಗಕ್ಕೆ ತೆರಳುವ ಮುನ್ನ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದರು.

ಯಡಿಯೂರಪ್ಪ ಅವರ ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿದ ಸಚಿವ ನಾರಾಯಣ ಗೌಡ ಅವರು ಮಾಜಿ ಸಿಎಂ ಬಿಎಸ್​ವೈ ಭೇಟಿಯಾದರು. ಕೆಲಕಾಲ ಅನೌಪಚಾರಿಕ ಮಾತುಕತೆ ನಡೆಸಿದರು. ಮಾಜಿ ಸಿಎಂ ಯಡಿಯೂರಪ್ಪರ ತವರು ಜಿಲ್ಲೆಯೂ ಆಗಿರುವ ಹಿನ್ನೆಲೆ ಜಿಲ್ಲೆಯ ಅಭಿವೃದ್ಧಿ ಕುರಿತು ಬಿಎಸ್​ವೈ ಜೊತೆ ಚರ್ಚಿಸಿ, ಅಭಿವೃದ್ಧಿ ಕೆಲಸಗಳನ್ನ ಕೈಗೊಳ್ಳಲು ಮಾರ್ಗದರ್ಶನ ನೀಡುವಂತೆ ಕೋರಿದರು.

ಇದನ್ನೂ ಓದಿ: ಬಿಜೆಪಿಯ ಶಾಸಕರು ಸಿಂಹಗಳಿದ್ದಂತೆ, ಸಿದ್ದರಾಮಯ್ಯ-ಡಿಕೆಶಿ ನೀವು ಹಗಲುಗನಸು ಕಾಣಬೇಡಿ : ರೇಣುಕಾಚಾರ್ಯ

ಈವರೆಗೂ ಹಿರಿಯ ನಾಯಕ ಕೆ.ಎಸ್‌.ಈಶ್ವರಪ್ಪ ಉಸ್ತುವಾರಿಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದು, ಈಗ ಜವಾಬ್ದಾರಿ ಬದಲಿಸಲಾಗಿದೆ. ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಂಡಿರುವ ಜಿಲ್ಲೆ ಮತ್ತಷ್ಟು ಅಭಿವೃದ್ಧಿ ಆಗಬೇಕು. ಚಾಲನೆಗೊಂಡಿರುವ ಯೋಜನೆಗಳನ್ನು ಕಾಲಮಿತಿಯಲ್ಲಿ ಮುಗಿಸಬೇಕು. ವಿಮಾನ ‌ನಿಲ್ದಾಣ ಕಾಮಗಾರಿ, ಹೆದ್ದಾರಿಗಳ ಅಭಿವೃದ್ಧಿ, ಸ್ಮಾರ್ಟ್ ಸಿಟಿ ಕಾಮಗಾರಿಗಳ ಕಡೆ ಗಮನ ಇರಲಿ. ಏನೇ ಸಲಹೆ ಸಹಕಾರ ಬೇಕಾದರೂ ಸಂಪರ್ಕಿಸಿ ಎಂದು ಸಚಿವರಿಗೆ ಮಾಜಿ ಸಿಎಂ ಸಲಹೆ ರೂಪದಲ್ಲಿ ಸೂಚನೆ ನೀಡಿ ಜಿಲ್ಲೆ ಅಭಿವೃದ್ಧಿಯಲ್ಲಿ ಹಿಂದುಳಿಯಬಾರದು ಎನ್ನುವ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.