ಬೆಂಗಳೂರು: ಕ್ರೀಡಾಪಟುಗಳಿಗೆ ಪ್ಯಾರಾ ಸೈಲಿಂಗ್ ಹಾಗೂ ಕ್ರೀಡಾಕೂಟದ ಪ್ರಚಾರಕ್ಕೆ ಸಸ್ನಾ 172 ವಿಮಾನದಲ್ಲಿ ಹಾರಾಟ ನಡೆಸುವ ಮೂಲಕ ರೇಷ್ಮೆ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಡಾ. ನಾರಾಯಣಗೌಡ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಪ್ರಚಾರದ ಏರ್ ಕ್ರಾಫ್ಟ್‌ಗಳಿಗೆ ಚಾಲನೆ ನೀಡಿದರು.
ಪ್ರತಿದಿನ ಸಿಟಿ ರೌಂಡ್ಸ್: ಗೇಮ್ಸ್‌ನ ಪ್ರಚಾರಕ್ಕೆ ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆಯ ಎರಡು ವಿಮಾನಗಳನ್ನು ಬಳಸಲಾಗಿದೆ. ಈ ವಿಮಾನಗಳು ಪ್ರತಿದಿನ ಸಿಟಿ ರೌಂಡ್ಸ್ ಮಾಡಲಿವೆ ಎಂದು ಸಚಿವರು ತಿಳಿಸಿದರು.
![ಸಸ್ನಾ 172 ವಿಮಾನ](https://etvbharatimages.akamaized.net/etvbharat/prod-images/kn-bng-01-khelo-india-games-parasailing-for-pramotional-aircraft-inaguration-7210969_27042022123911_2704f_1651043351_152.jpg)
ಇದನ್ನೂ ಓದಿ: 4ನೇ ಅಲೆ ಭೀತಿ: ಮೈಸೂರಿನಲ್ಲಿ ಕೋವಿಡ್ ಪರೀಕ್ಷೆ ಪ್ರಮಾಣ ಹೆಚ್ಚಳ