ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದ ಆರೋಪಿಯಾಗಿರುವ ಮನ್ಸೂರ್ ಖಾನ್‌ಗೆ ಆಸ್ತಿ ಮಾರಾಟ ಮಾಡಿರುವ ವಿಚಾರವಾಗಿ ಆಹಾರ ನಾಗರಿಕ ಪೂರೈಕೆ ಸಚಿವ ಜಮೀರ್ ಅಹ್ಮದ್ಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿತ್ತು. ಹೀಗಾಗಿ ಸಚಿವ ಇಂದು ಶಾಂತಿನಗರ ಬಳಿ ಇರುವ ಇಡಿ ಕಚೇರಿಗೆ ವಕೀಲರ ಜೊತೆ ಹಾಜರಾಗಿದ್ದಾರೆ.
ವಿಚಾರಣೆ ಮುಗಿಸಿ ಹೊರಬಂದ ಜಮೀರ್ ಮಾಧ್ಯಮದವರ ಜೊತೆ ಮಾತನಾಡಿ, ಇ.ಡಿ 2018ರಲ್ಲಿ ನಿವೇಶನ ಸೇಲ್ ಬಗ್ಗೆ ದಾಖಲೆ ಕೇಳಿದ್ರು ಕೊಟ್ಟಿದ್ದೇನೆ. ನಾನು ಮನ್ಸೂರ್ಗೆ ಲೀಗಲ್ ಆಗಿ ಆಸ್ತಿ ಮಾರಾಟ ಮಾಡಿದ್ದೇನೆ. ಇ.ಡಿ ಅಧಿಕಾರಿಗಳು ಸ್ಪಷ್ಟನೆ ಕೇಳಿದ್ರು ಕೊಡೋದಕ್ಕೆ ಬಂದಿದ್ದೀನಿ. ಫೋಸ್ಟ್ ಮೂಲಕ ಕೊಡಬಹುದಿತ್ತು ಆದ್ರೆ ನಾನೇ ವಿವರಣೆ ಕೊಡಲು ಖುದ್ದಾಗಿ ಬಂದೆ. ಹಾಗೆ ನಿವೇಶನ ಸಂಬಂಧ ಐಟಿ ರಿಟರ್ನ್ ತೋರಿಸಿದ್ದೇನೆ ಹಾಗೆ ಲೋಕಾಯುಕ್ತಕ್ಕೆ ಸಲ್ಲಿಸಿರೋ ದಾಖಲೆ ಕೊಟ್ಟಿದ್ದೇನೆ. ಇ.ಡಿ ವಿಚಾರಣೆ ಮುಗಿದಿದೆ ಯಾವುದೇ ಅಕ್ರಮ ಎಸಗಿಲ್ಲ ಎಂದ್ರು.
ಬೆಜೆಪಿ ನಾಯಕ ಎನ್.ಆರ್. ರಮೇಶ್ ಅಪ್ಪನ ಆಸ್ತಿಯನ್ನು ನಾನು ಮಾರಾಟ ಮಾಡಿಲ್ಲ. ನನ್ನ ಆಸ್ತಿ ನಾನು ಮಾರಾಟ ಮಾಡಿದ್ದು. ರಮೇಶ್ ಅಪ್ಪನ ಆಸ್ತಿ ತೆಗೆದುಕೊಂಡು ಮಾರಾಟ ಮಾಡಿದ್ರೆ ಅವರಿಗೆ ನಾನು ಉತ್ತರ ಕೊಡಬೇಕಿತ್ತು. ನನ್ನ ಆಸ್ತಿಯನ್ನು ಉಚಿತವಾಗಿ ಕೊಡೋ ಹಕ್ಕು ನನಗೆ ಇದೆ ಎಂದು ತಿಳಿಸಿದ್ದಾರೆ. ಕಳೆದ ವಾರ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಜಯನಗರದಲ್ಲಿರುವ ಸಚಿವರ ನಿವಾಸಕ್ಕೆ ಹೋಗಿ ಸಮನ್ಸ್ ಜಾರಿ ಮಾಡಿ ಜುಲೈ 5ರ ಒಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ರು. ಹೀಗಾಗಿ ಇಂದು ವಿಚಾರಣೆಗೆ ಹಾಜರಾಗಿದ್ದಾರೆ.