ETV Bharat / state

ಕೊರೊನಾ ನಿಯಂತ್ರಣಕ್ಕೆ ರಾಜ್ಯಕ್ಕೆ ಕೇಂದ್ರ ಸರ್ಕಾರ ನೆರವು ನೀಡಲಿದೆ: ಸದಾನಂದಗೌಡ ಭರವಸೆ - corona control in Bengaluru

ಬೆಂಗಳೂರಿನಲ್ಲಿ ಅತಿ ಹೆಚ್ಚು ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ನಾವು ತುಂಬಾ ಜಾಗೃತರಾಗಿರಬೇಕು. ಇನ್ನು ಕೊರೊನಾ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಎಲ್ಲಾ ನೆರವನ್ನು ರಾಜ್ಯಕ್ಕೆ ನೀಡಲಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.

minister DVS
ಕೇಂದ್ರ ಸಚಿವ ಡಿವಿಎಸ್ ಭರವಸೆ
author img

By

Published : Apr 25, 2021, 1:35 PM IST

ಬೆಂಗಳೂರು: ಕರ್ನಾಟಕ ರಾಜ್ಯ ಕೊರೊನಾ ನಿಯಂತ್ರಣವನ್ನು ಯಶಸ್ವಿಯಾಗಿ ಮಾಡುತ್ತಿದ್ದು, ಕೇಂದ್ರ ಸರ್ಕಾರ ಎಲ್ಲಾ ನೆರವನ್ನು ರಾಜ್ಯಕ್ಕೆ ನೀಡಲಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಅತಿ ಹೆಚ್ಚು ಸೊಂಕು ಕಾಣಿಸಿಕೊಂಡಿದೆ. ಹೀಗಾಗಿ ನಾವು ತುಂಬಾ ಜಾಗೃತರಾಗಿರಬೇಕು. ಇನ್ನೂ ಹೆಚ್ಚಾಗುವಂತಹ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ. ನಾವು ಯಶಸ್ವಿಯಾಗಿ ಕಂಟ್ರೋಲ್ ಮಾಡುತ್ತೇವೆ‌‌. ಸಾವು ಸಂಭವಿಸಿರೋದು ನಮಗೂ ಮನಸ್ಸಿಗೆ ನೋವು ತಂದಿದೆ. ಜನರು ಸಹ ಜಾಗೃತರಾಗಬೇಕು. ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಯಶಸ್ವಿಯಾಗಿದೆ. ಇದರ ರಿಸಲ್ಟ್​​ 10ರಿಂದ 14 ದಿವಸದ ನಂತರ ಗೊತ್ತಾಗಲಿದೆ ಎಂದು ತಿಳಿಸಿದರು.

ಪ್ರಾರಂಭಿಕ ಹಂತದಲ್ಲಿ ಆಕ್ಸಿಜನ್ ಮತ್ತು ರೆಮ್​ಡೆಸಿವಿರ್​ ಸ್ವಲ್ಪ ಪ್ರಮಾಣದಲ್ಲಿ ಕೊರೆತೆ ಇತ್ತು. ಕೊರತೆ ಬಗ್ಗೆ ಸಿಎಂ ಹಾಗೂ ಆರೋಗ್ಯ ಸಚಿವರು ಕೇಂದ್ರದ ಮೇಲೆ‌ ಒತ್ತಡ ಹಾಕಿದ್ರು. ನಾವು ಕೇಂದ್ರದ ಮೇಲೆ ಒತ್ತಡ ತಂದೆವು. ಹೀಗಾಗಿ ಅದೇ ದಿವಸ 1 ಲಕ್ಷ, 22 ಸಾವಿರ ರೆಮ್​ಡೆಸಿವಿರ್​​ ರಾಜ್ಯಕ್ಕೆ ನೀಡಲು ಕೇಂದ್ರ ಒಪ್ಪಿಗೆ ಸೂಚಿಸಿದೆ‌. 30ನೇ ತಾರೀಖೀನವರೆಗೂ 3 ಲಕ್ಷ ಲಸಿಕೆ ಬೇಕು ಎಂದು ಕೇಳಿದ್ರು. ಅದನ್ನ ಸಹ ಕೊಟ್ಟಿದ್ದೇವೆ. 800 ಮೆಟ್ರಿಕ್ ಟನ್ ಅಕ್ಸಿಜನ್ ಕೇಂದ್ರದಿಂದ ನಿಡಲಾಗ್ತಿದೆ. 15 ದಿವಸದೊಳಗೆ ರಾಜ್ಯಕ್ಕೆ ಎಲ್ಲವೂ ಲಭ್ಯವಾಗಲಿದೆ. ಹೆಚ್ಷಿನ ಲಸಿಕೆ ಬೇಡಿಕೆ ಇಟ್ಟಿದ್ದಾರೆ. ಅದನ್ನು ಸಹ ಕೇಂದ್ರ ನೀಡಲಿದೆ ಎಂದರು.

ಮುಂದಿನ 10 ದಿನ ಕಠಿಣ ಇರಬಹುದು. ತದನಂತರ ಕಡಿಮೆಯಾಗುವ ಸಾಧ್ಯತೆ ಇದೆ. ಮೂರನೇ ಅಲೆಗೆ ಹೋಗಬಾರದು ಎಂದರೆ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು. ಅದು ಎಲ್ಲರ ಜವಾಬ್ದಾರಿ. ಹಾಗೇ ಎಲ್ಲರಿಗೂ ಲಸಿಕೆ ಹಾಕೋದು ನಮ್ಮ ಜವಾಬ್ದಾರಿ ಎಂದು ಇದೇ ವೇಳೆ ತಿಳಿಸಿದರು.

ವೀಕೆಂಡ್ ಕರ್ಫ್ಯೂ ರೀತಿ ಮುಂದುವರೆಸ್ತಾರಾ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದರ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ. ಸಂಪುಟ ಸಚಿವರ ಜೊತೆ ಚರ್ಚಿಸಿ ಸಿಎಂ ನಿರ್ಧಾರ ಮಾಡ್ತಾರೆ. ಅಗತ್ಯ ಬಿದ್ದರೆ ಮುಂದುವರೆಸುತ್ತಾರೆ. ಅದು ಅವರಿಗೆ ಬಿಟ್ಟದ್ದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.