ಬೆಂಗಳೂರು: ಮುಂದಿನ ದಿನಗಳಲ್ಲಾದರೂ ಸಂಸದ ಡಿ ಕೆ ಸುರೇಶ್ ಪುಸ್ತಕಗಳನ್ನು ತೆರೆದು ಓದಲಿ. ಬೇಜವಾವ್ದಾರಿ ಹೇಳಿಕೆಗಳನ್ನು ಕೊಡುವುದರಿಂದ ಸರ್ಕಾರಿ ಶಾಲೆಗಳ ಬಗ್ಗೆ ಮಾನಸಿಕತೆ ಬದಲಾಗುತ್ತೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ ನಾಗೇಶ್ ಕಿಡಿಕಾರಿದರು.
ಸಂಸದ ಸುರೇಶ್ ಬೇಜವಾಬ್ದಾರಿಯಾಗಿ ಟ್ವೀಟ್ ಮಾಡಿದ್ದಾರೆ. ಯಾವ ಪುಸ್ತಕವೇ ಇಲ್ಲ, ಪಾಠವೇ ಇಲ್ಲ. ಇಲ್ಲದಿರುವ ಪುಸ್ತಕದ ಬಗ್ಗೆ ಸುರೇಶ್ ಟ್ವೀಟ್ ಮಾಡಿದ್ದಾರೆ. ಅವರು ಏನನ್ನೂ ಓದಿಲ್ಲ ಅನ್ನೋದು ಇದರಿಂದ ಸಾಬೀತಾಗಿದೆ. ಸತ್ಯಾಸತ್ಯತೆ ಪರೀಕ್ಷೆ ಮಾಡಿ ತಾವೇ ಸ್ವತಃ ಓದಿ ಟ್ವೀಟ್ ಮಾಡಲಿ. ಸುಮ್ಮನೆ ರಾಜಕೀಯ ಬೇಳೆ ಬೇಯಿಸಲು ಹೋಗಬಾರದು. ಅನಗತ್ಯವಾಗಿ ಶ್ರೇಷ್ಠ ಸಂಸ್ಥೆ, ಕೋಟ್ಯಂತರ ಜನರ ಮೇಲೆ ದೇಶಪ್ರೇಮದ ಪ್ರಭಾವ ಬೀರುವ ಸಂಸ್ಥೆ ಆರ್ಎಸ್ಎಸ್ ಬಗ್ಗೆ ಮಾತಾನಾಡುವುದು ಸರಿಯಲ್ಲ ಎಂದು ತಿಳಿಸಿದರು.
ಶಾಲೆಗಳಲ್ಲಿನ ಯುನಿಫಾರ್ಮ್ ಬಗ್ಗೆ ಸ್ಪಷ್ಟತೆ ಕೊಡುವ ಕೆಲಸವನ್ನು ಮಾಡುತ್ತೇವೆ. ಸರ್ಕಾರನೇ ಯನಿಫಾರ್ನ್ ಹಾಕಬೇಕೋ?. ಎಸ್ಡಿಎಂಸಿಗೆ ಅದರ ಅಧಿಕಾರ ಕೊಡಬೇಕೋ?. ಒಂದು ವೇಳೆ ಆ ತರ ಮಾಡಿದರೆ ಯಾವ ರೂಪುರೇಷೆ ಇರಬೇಕು. ನಿಯಮ ಯಾವ ರೀತಿ ಇರಬೇಕು. ಸರ್ಕಾರದ ಕಡೆಯಿಂದ ಯುನಿಫಾರ್ಮ್ ಕೊಡಬಹುದಾ? ಎಂಬ ಬಗ್ಗೆ ಈ ಸಂಬಂಧ ರಚಿಸಲಾದ ಸಮಿತಿ ಪರಿಶೀಲನೆ ಮಾಡುತ್ತದೆ. ಅವರು ನೀಡುವ ವರದಿ ಆಧಾರದಲ್ಲಿ ಸಿಎಂ ಒಂದು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಉಡುಪಿ ಶಾಲೆಯ ಯುನಿಫಾರ್ಮ್ ವಿವಾದ ಮುಂದಿನ ದಿನಗಳಲ್ಲಿ ಅನೇಕ ಸಮಸ್ಯೆ ಸೃಷ್ಟಿ ಮಾಡುತ್ತದೆ. ಯಾರೋ ನಾನು ಅರ್ಧ ಪ್ಯಾಂಟ್ ಹಾಕಿಕೊಂಡು ಬರುತ್ತೇನೆ ಅಂತಾನೆ. ಬನಿಯನ್ ಧರಿಸಿ ಬರ್ತೇನೆ ಅಂತಾನೆ, ಕೇಸರಿ ಶಾಲು ಹಾಕಿ ಬರುತ್ತೇನೆ ಅಂತಾನೆ, ಹಸಿರು ಶಾಲು ಹಾಕಿ ಬರುತ್ತೇನೆ ಎನ್ನಬಹುದು. ಡ್ರೆಸ್ ಕೋಡ್ನಲ್ಲಿ ಏನೂ ಮಾಡಬಾರದು ಅಂತಿದೆ. ಆದರೆ, ಏನು ಮಾಡಬಹುದು ಎಂಬುದು ಇದ್ದಿಲ್ಲ ಎಂಬುದನ್ನು ಹೇಳುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.
ಓದಿ: ಇದು ಜನಸಾಮಾನ್ಯರು ಮತ್ತು ದೂರದೃಷ್ಟಿವುಳ್ಳ ಬಜೆಟ್.. ಸಚಿವ ಆನಂದ್ ಸಿಂಗ್