ಬೆಂಗಳೂರು : ಮನೆ ಮನೆಯಲ್ಲೂ ತಿರಂಗಾ ಅಭಿಯಾನದ ಅಂಗವಾಗಿ ಸಚಿವ ಅಶ್ವತ್ಥ ನಾರಾಯಣ್ ಅವರು ರಾಜ್ ಕುಟುಂಬವನ್ನು ಭೇಟಿ ಮಾಡಿ ರಾಷ್ಟ್ರದ್ವಜವನ್ನು ನೀಡಿದ್ದಾರೆ. ಈಗಾಗಲೇ ಬಿಜೆಪಿ ನಾಯಕರು ಗಣ್ಯರು, ನಟರ ಮನೆಗಳಿಗೆ ತೆರಳಿ ರಾಷ್ಟ್ರದ್ವಜವನ್ನು ನೀಡುತ್ತಿದ್ದಾರೆ. ನಿನ್ನೆ ಸಂಜೆ ಸದಾಶಿವನಗರದ ನಟ ರಾಘವೇಂದ್ರ ರಾಜ್ ಕುಮಾರ್ ಹಾಗೂ ಪುನೀತ್ ರಾಜ್‍ಕುಮಾರ್ ಮನೆಗೆ ತೆರಳಿ ಸಚಿವ ಅಶ್ವತ್ಥ ನಾರಾಯಣ ರಾಷ್ಟ್ರ ದ್ವಜವನ್ನು ನೀಡಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವ ಅಶ್ವತ್ಥ ನಾರಾಯಣ, ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿರುವ ಮನೆ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸುವ ಕಾರ್ಯಕ್ರಮದ ಪ್ರಯುಕ್ತ ರಾಘವೇಂದ್ರ ರಾಜ್ ಕುಮಾರ್ ಅವರ ಸ್ವಗೃಹಕ್ಕೆ ಭೇಟಿ ನೀಡಿ ರಾಷ್ಟ್ರಧ್ವಜವನ್ನು ನೀಡಲಾಯಿತು. ಸತ್ಕಾರ್ಯಗಳಿಗೆ ಸದಾ ಬೆಂಬಲ ನೀಡುವ ಅಣ್ಣಾವ್ರ ಕುಟುಂಬ ಸಮಾಜಕ್ಕೆ ಸದಾ ಮಾದರಿ ಎಂದು ಹೇಳಿದ್ದಾರೆ.
ಜೊತೆಗೆ ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಅವರಿಗೂ ರಾಷ್ಟ್ರ ಧ್ವಜವನ್ನು ನೀಡಲಾಯಿತು. ಸಮಾಜದ ಒಳಿತಿಗಾಗಿ ಸದಾ ತುಡಿಯುತ್ತಿದ್ದ ಅಪ್ಪು ಅವರ ನಿಸ್ವಾರ್ಥ ಮನೋಭಾವ, ದೇಶಪ್ರೇಮ, ಸಾಮಾಜಿಕ ಕಳಕಳಿ ನಮಗೆ ಸದಾ ಪ್ರೇರಣೆ ಎಂದು ಸಚಿವ ಅಶ್ವತ್ಥನಾರಾಯಣ್ ಹೇಳಿದ್ದಾರೆ.
ಇದನ್ನೂ ಓದಿ : ಬೆಂಗಳೂರು: ಸವಿತಾನಂದ ಸ್ವಾಮೀಜಿಯಿಂದ ಬಿಜೆಪಿ ಕಚೇರಿ ಬಳಿ ಭಿಕ್ಷಾಟನೆ