ETV Bharat / state

ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಕೂಡಲೇ ಕ್ರಮ ಕೈಗೊಳ್ಳಲು ಸಚಿವ ಲಿಂಬಾವಳಿ ಸೂಚನೆ - mahadevpur roads news

ಮಹಾದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ರಸ್ತೆಗಳನ್ನು ಶೀಘ್ರವಾಗಿ ಅಭಿವೃದ್ಧಿಪಡಿಸುವಂತೆ ಅಧಿಕಾರಿಗಳಿಗೆ ಸಚಿವ ಅರವಿಂದ್​ ಲಿಂಬಾವಳಿ ಸೂಚನೆ ನೀಡಿದ್ದಾರೆ. ಮಹದೇವಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 629 ಕಿ.ಮೀ. ವಾರ್ಡ್ ರಸ್ತೆಗಳು ಹಾಗೂ 112 ಕಿ.ಮೀ ಬೃಹತ್ ರಸ್ತೆಗಳನ್ನು ಕಾವೇರಿ ವಾಟರ್ ಲೈನ್​ಗೆ ಅಗೆದಿದ್ದು, ಅವುಗಳನ್ನು ಬಿಬಿಎಂಪಿ ವತಿಯಿಂದ ವಿಶೇಷ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿಪಡಿಸಲು ಸೂಚಿಸಿದರು.

meeting
meeting
author img

By

Published : Jun 16, 2021, 8:07 PM IST

ಬೆಂಗಳೂರು: ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರಸ್ತೆಗಳು ದುಃಸ್ಥಿತಿಯಲ್ಲಿವೆ ಅವುಗಳನ್ನು ಕೂಡಲೇ ಅಭಿವೃದ್ಧಿ ಪಡಿಸಬೇಕೆಂದು ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಸೂಚನೆ ನೀಡಿದ್ದಾರೆ. ವಿಧಾ‌ನಸೌಧದಲ್ಲಿ ಇಂದು ಮಹದೇವಪುರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳೊಂದಿಗೆ ಸಚಿವರು ಸಭೆ ನಡೆಸಿದ್ರು.

ಕಾವೇರಿ ನೀರು ಸರಬರಾಜು ಮಾಡಲು ಗುರುತಿಸಿರುವ 110 ಹಳ್ಳಿಗಳ ಪೈಕಿ ಮಹದೇವಪುರ ವಿಧಾನಸಭಾ ಕ್ಷೇತ್ರಕ್ಕೆ 31 ಹಳ್ಳಿಗಳು ಬರುತ್ತಿದ್ದು ಹಾಗೂ ಕ್ಷೇತ್ರದ ವ್ಯಾಪ್ತಿಯಲ್ಲಿ ಬೆ.ನೀ.ಸ.ಒ.ಮಂ ಕಾಮಗಾರಿಗಳಿಂದ ಹಾಳಾದ ಇನ್ನಿತರ ಪ್ರದೇಶಗಳ ರಸ್ತೆ ಅಭಿವೃದ್ಧಿ ಪಡಿಸುವ ಕುರಿತು ಚರ್ಚಿಸಿದ್ರು.

ಮಹದೇವಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 629 ಕಿ.ಮೀ. ವಾರ್ಡ್ ರಸ್ತೆಗಳು ಹಾಗೂ 112 ಕಿ.ಮೀ ಬೃಹತ್ ರಸ್ತೆಗಳನ್ನು ಕಾವೇರಿ ವಾಟರ್ ಲೈನ್​ಗೆ ಅಗೆದಿದ್ದು, ಅವುಗಳನ್ನು ಬಿಬಿಎಂಪಿ ವತಿಯಿಂದ ವಿಶೇಷ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿಪಡಿಸಲು ಸೂಚಿಸಿದರು. ಮಂಡೂರು ಘನತ್ಯಾಜ್ಯ ವಿಷಯದ ಕುರಿತು ಚರ್ಚಿಸಿದ ಸಚಿವರು ಮಂಡೂರಿನಲ್ಲಿ ಈ ಹಿಂದೆ ಹಾಕಿರುವ ಕಸವನ್ನು ಈವರೆಗೆ ತೆರವುಗೊಳಿಸಲು ಕ್ರಮ ಕೈಗೊಂಡಿಲ್ಲ, ಹೀಗಾಗಿ ಶೀಘ್ರವಾಗಿ ಕಸವನ್ನು ತೆರವುಗೊಳಿಸಲು ತಿಳಿಸಿದರು.

ಚೀಮಸಂದ್ರದಲ್ಲಿ ಸಹ 2008 ರಲ್ಲಿ ಹಾಕಿರುವ ಕಸ ಹಾಗೇ ಇದೆ ಅದನ್ನು ತೆರವುಗೊಳಿಸಬೇಕು ಹಾಗೂ ಮಿಟ್ಟಗಾನಹಳ್ಳಿಯಲ್ಲಿ ಸಹ ಕಸ ಹಾಕುತ್ತಿರುವುದರಿಂದ‌ ರಸ್ತೆ ಹಾಳಾಗುತ್ತಿದ್ದು, ಇಲ್ಲಿ ಕಸ ಹಾಕುವುದನ್ನು ಕೂಡಲೇ ನಿಲ್ಲಿಸಬೇಕೆಂದು ಸೂಚಿಸಿದರು.

ಮುನಿಸ್ವಾಮಿ ಶೆಟ್ಟಿ ಬಡಾವಣೆಯಲ್ಲಿನ ರಸ್ತೆ ಅಭಿವೃದ್ಧಿ ಪಡಿಸುವ ಬಗ್ಗೆ ಸಹ ಸಭೆಯಲ್ಲಿ ಚರ್ಚಿಸಲಾಯಿತು.ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹಾಗೂ ವಿಶೇಷ ಆಯುಕ್ತ ರಣದೀಪ್ ಸೇರಿದಂತೆ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.