ಬೆಂಗಳೂರು: ಅಶೋಕ್ ಹೋಟೆಲ್ ಮಾದರಿಯಲ್ಲಿ ನಾವು ಜಂಗಲ್ ರೆಸಾರ್ಟ್ಗಳನ್ನು ಮಾರಾಟ ಮಾಡಲ್ಲ. ಒಂದು ಒಪ್ಪಂದ ಮಾಡಿಕೊಂಡು ಪ್ರಾಫಿಟ್ ಶೇರಿಂಗ್ನಲ್ಲಿ ರೆಸಾರ್ಟ್ಗಳನ್ನ ಖಾಸಗಿಕರಣ ಮಾಡುವ ಆಲೋಚನೆ ಇದೆ. ಇದಕ್ಕೆ ಕೆಲವು ಷರತ್ತುಗಳನ್ನ ಹಾಕಿ ಖಾಸಗಿಕರಣ ಮಾಡುತ್ತೇವೆಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿರಿ: ಪರಿಸರವಾದಿ ಡಿ.ವಿ. ಗಿರೀಶ್ ಮೇಲಿನ ಹಲ್ಲೆ ಪ್ರಕರಣ: ಘಟನೆ ಖಂಡನೀಯ ಎಂದ ನಟಿ ರಮ್ಯಾ
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಂಗಲ್ ರೆಸಾರ್ಟ್ಗಳನ್ನ ನಾವು ಮಾರಾಟ ಮಾಡುತ್ತಿಲ್ಲ. ಪ್ರಾಫಿಟ್ ಶೇರಿಂಗ್ನಲ್ಲಿ ಖಾಸಗೀಕರಣ ಮಾಡುವ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಇನ್ನೂ ಅಂತಿನ ನಿರ್ಧಾರ ಆಗಿಲ್ಲ. ಸಾರ್ವಜನಿಕರ ಅಭಿಪ್ರಾಯ ನೋಡಿಕೊಂಡು, ವಿಧಾನ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು. ಪ್ರವಾಸಿಗರಿಗೆ ನಮ್ಮ ರೆಸಾರ್ಟ್ಗಳಲ್ಲಿ ಉತ್ತಮ ಸೌಲಭ್ಯ ಕೊಡಬೇಕು. ಸರ್ಕಾರದ ಅನುದಾನದಲ್ಲಿ ಅದು ಸಾಧ್ಯವಾಗುತ್ತಿಲ್ಲ. ನನ್ನ ಪ್ರಕಾರ ಜಂಗಲ್ ರೆಸಾರ್ಟ್ಗಳಲ್ಲಿ ಸ್ವಚ್ಚತೆಯೇ ಇಲ್ಲ. ಪ್ರವಾಸೋದ್ಯಮ ಒಂದು ವ್ಯಾಪಾರವೇ ಆಗಿದೆ. ಹೀಗಾಗಿ ನಾವು ಪ್ರವಾಸಿಗರಿಗೆ ಉತ್ತಮ ಸೌಲಭ್ಯ ನೀಡಬೇಕು. ಮುಂದೆ ಈ ರೆಸಾರ್ಟ್ಗಳು ರಾಜ್ಯ ಸರ್ಕಾರಕ್ಕೆ ಉತ್ತಮ ಆದಾಯ ತರಲಿವೆ ಅನ್ನೋದು ಉಹಾತ್ಮಕ. ಬರುವ ದಿನಗಳಲ್ಲಿ ಪ್ರವಾಸೋದ್ಯಮ ಇಲಾಖೆಯನ್ನ ನನಗೇ ನೀಡಿ ಎಂದು ಸಚಿವರು ಕೇಳುವ ಮಟ್ಟಕ್ಕೆ ಪ್ರವಾಸೊದ್ಯಮ ಬೆಳೆಯಬಹುದು. ಬೆಳೆಯಲ್ಲ ಅಂತಾ ನಾನು ಹೇಳಲ್ಲ. ಸದ್ಯಕ್ಕೆ ರೆಸಾರ್ಟ್ ನಡೆಸೋದು ಮುಖ್ಯ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದರು.
ಗಣೇಶ ಉತ್ಸವಕ್ಕೆ ಅನುಮತಿ ಕೊಡಬೇಕು: ಗಣೇಶ ಉತ್ಸವಕ್ಕೆ ಅನುಮತಿ ಕೊಡಬೇಕು. ನಿಯಮಾವಳಿಗಳ ಪ್ರಕಾರ ಗಣೇಶ ಉತ್ಸವ ನಡೆಯಬೇಕು. ಕೋವಿಡ್ ನಿಯಮ ಪಾಲಿಸಿ ಉತ್ಸವ ನಡೆದರೆ ಏನೂ ಸಮಸ್ಯೆ ಇಲ್ಲ ಎಂದು ಸಚಿವ ಆನಂದ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅರಿಶಿನ ಗಣಪ ಕೂರಿಸಲು ಜಾಗೃತಿ ಮೂಡಿಸಿದ್ದೇವೆ. ಅರಿಶಿನ ಗಣಪ ಪಾಸಿಟಿವ್ ಎನರ್ಜಿ, ಮನೆಯಲ್ಲೇ ವಿಸರ್ಜನೆ ಮಾಡಬಹುದು ಎಂದರು.