ETV Bharat / state

ಬೆಂಗಳೂರಿನಲ್ಲಿ ಶೀಘ್ರದಲ್ಲೇ ಮೆಟ್ರೋ ಸಂಚಾರ ಆರಂಭ: ಸಿಎಂ ಬಿಎಸ್​ವೈ ಸುಳಿವು - ಕೇಂದ್ರ ಸರ್ಕಾರ

ಬೆಂಗಳೂರಿನಲ್ಲಿ ಮೆಟ್ರೋ ಸೇವೆ ಆದಷ್ಟು ಬೇಗ ಆರಂಭ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಹೇಳಿದ್ದಾರೆ.

Metro services in Bengaluru
Metro services in Bengaluru
author img

By

Published : Aug 27, 2020, 5:31 PM IST

ಬೆಂಗಳೂರು: ದೇಶಾದ್ಯಂತ ಮುಂದಿನ ತಿಂಗಳ 1ರಿಂದ ಅನ್​ಲಾಕ್​ 4.0 ಜಾರಿಗೊಳ್ಳಲಿದ್ದು, ಈ ವೇಳೆ ಮೆಟ್ರೋ ಸಂಚಾರ ಆರಂಭಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಇದೀಗ ಇದೇ ವಿಷಯವಾಗಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿಎಸ್​​ ಯಡಿಯೂರಪ್ಪ ಮಾತನಾಡಿದ್ದು, ಆದಷ್ಟು ಬೇಗ ಮೆಟ್ರೋ ಸಂಚಾರ ಆರಂಭ ಮಾಡುವುದಾಗಿ ಸುಳಿವು ನೀಡಿದ್ದಾರೆ.

ಅನ್​ಲಾಕ್​ 4.0: ಮತ್ತಷ್ಟು ಸಡಿಲಿಕೆ, ಮೆಟ್ರೋ ಸಂಚಾರಕ್ಕೆ ಗ್ರೀನ್​ ಸಿಗ್ನಲ್​!?

ಮೆಟ್ರೋ ಸೇವೆ ಆರಂಭಿಸಲು ಅಗತ್ಯವಾದ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಶೀಘ್ರದಲ್ಲೇ ಸಂಚಾರ ಆರಂಭಿಸುವುದಾಗಿ ಅವರು ತಿಳಿಸಿದ್ದಾರೆ. ದಿನದಿಂದ ದಿನಕ್ಕೆ ಜನಜೀವನ ಸರಿದಾರಿಗೆ ಬರುತ್ತಿದೆ ಎಂದಿರುವ ಅವರು, ಐದು ತಿಂಗಳ ಬಳಿಕ ಮೆಟ್ರೋ ಸೇವೆ ಆರಂಭ ಮಾಡುವ ಸುಳಿವು ನೀಡಿದ್ದಾರೆ.

Metro services in Bengaluru
ಬಿ.ಎಸ್​​ ಯಡಿಯೂರಪ್ಪ: ಮುಖ್ಯಮಂತ್ರಿ

ಒಂದು ಮೆಟ್ರೋ ರೈಲಿನಲ್ಲಿ 340 ಪ್ರಯಾಣಿಕರು ಮಾತ್ರ ತೆರಳಲು ಅವಕಾಶ ನೀಡುವ ಸಾಧ್ಯತೆ ಇದ್ದು, ಒಂದು ಬೋಗಿಯಲ್ಲಿ 50 ಪ್ರಯಾಣಿಕರು ಕುಳಿತುಕೊಳ್ಳಲು ಅನುಮತಿ ನೀಡಲಾಗುವುದು ಎಂದು ತಿಳಿದು ಬಂದಿದೆ. ಇದರ ಜತೆಗೆ ಥರ್ಮಲ್​ ಸ್ಕ್ರೀನಿಂಗ್​ ಮಾಡಲು ಅಗತ್ಯ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ.

ಮೆಟ್ರೋ ಸಂಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ಈಗಾಗಲೇ ಎಲ್ಲ ರಾಜ್ಯದ ಅಭಿಪ್ರಾಯ ಕೇಳಿದ್ದು, ಈಗಾಗಲೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಆದಷ್ಟು ಬೇಗ ಮೆಟ್ರೋ ಸೇವೆ ಆರಂಭ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.