ETV Bharat / state

ವಿದ್ಯುತ್ ದರ ಏರಿಕೆ: ಎಫ್‌ಕೆಸಿಸಿಐ, ಕೈಗಾರಿಕಾ ಸಂಸ್ಥೆಗಳೊಂದಿಗೆ ಇಂಧನ, ಕೈಗಾರಿಕಾ ಸಚಿವರಿಂದ ಸಭೆ

ವಿದ್ಯುತ್​ ದರ ಏರಿಕೆ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಕೈಗಾರಿಕಾ ಸಂಸ್ಥೆಗಳ ಜೊತೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್ ಸಭೆ ನಡೆಸಿದರು.

meeting-with-industrial-organizations-along-with-f-kcci-on-electricity-price-hike
ವಿದ್ಯುತ್ ದರ ಏರಿಕೆ ಹಿನ್ನೆಲೆ : ಎಫ್ ಕೆಸಿಸಿಐ ಸೇರಿ ಕೈಗಾರಿಕಾ ಸಂಸ್ಥೆಗಳ ಜೊತೆ ಸಭೆ ನಡೆಸಿದ ಇಂಧನ, ಕೈಗಾರಿಕಾ ಸಚಿವರು
author img

By

Published : Jun 28, 2023, 8:10 PM IST

ವಿದ್ಯುತ್ ದರ ಏರಿಕೆ ಹಿನ್ನೆಲೆ : ಎಫ್ ಕೆಸಿಸಿಐ ಸೇರಿ ಕೈಗಾರಿಕಾ ಸಂಸ್ಥೆಗಳ ಜೊತೆ ಸಭೆ ನಡೆಸಿದ ಇಂಧನ, ಕೈಗಾರಿಕಾ ಸಚಿವರು

ಬೆಂಗಳೂರು : ವಿದ್ಯುತ್ ದರ ಏರಿಕೆಯಿಂದಾಗಿ ತೊಂದರೆ ಆಗಿದೆ ಎಂದು ಹೇಳಿ ಪ್ರತಿಭಟಿಸುವ ಬೆದರಿಕೆ ಹಾಕಿದ್ದ ಕೈಗಾರಿಕಾ ಸಂಸ್ಥೆಗಳು ‌ಮತ್ತು ಅದರ ವೃತ್ತಿಪರ ಸಂಸ್ಥೆಗಳ ಜೊತೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹಾಗೂ ಇಂಧನ ಸಚಿವ ಕೆ.ಜೆ.ಜಾರ್ಜ್ ಸೇರಿದಂತೆ ಇತರ ಅಧಿಕಾರಿಗಳು ವಿಧಾನಸೌಧದಲ್ಲಿ ಇಂದು ಸಭೆ ನಡೆಸಿ ಚರ್ಚೆ ಮಾಡಿದರು. ವಿದ್ಯುತ್ ದರ ಇಳಿಕೆ‌ ಮಾಡಬೇಕೆನ್ನುವ ಉದ್ಯಮಿಗಳ ಅನಿಸಿಕೆಗಳನ್ನು ಆಲಿಸಿದ ಸಚಿವರು, ಮುಖ್ಯಮಂತ್ರಿ ಜತೆ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.

ಸಭೆ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಇಂಧನ ಸಚಿವ ಕೆ.ಜೆ.ಜಾರ್ಜ್, ಕೆಇಆರ್​​ಸಿ ದರ ಪರಿಷ್ಕರಣೆಗೆ ಮನವಿ ಮಾಡಲಾಗುವುದು. ಚೇಂಬರ್ ಆಫ್ ಕಾಮರ್ಸ್ ಅವರು ಬಂದಿದ್ದರು. ವಿದ್ಯುತ್ ಬಿಲ್ ಹೆಚ್ಚಳ ಬಗ್ಗೆ ಚರ್ಚೆ ಮಾಡಿದರು. ಅವರು ಮುಖ್ಯಮಂತ್ರಿಗಳ ಬಳಿ ಕರೆದುಕೊಂಡು ಹೋಗಿ ಚರ್ಚೆ ‌ಮಾಡಿದರು. ಪ್ರತ್ಯೇಕ ಚರ್ಚೆಗೆ ಸಿಎಂ ಸೂಚಿಸಿದರು. ಅದರಂತೆ ಎಫ್​ಕೆ ಸಿಸಿಐ, ಕಾಸಿಯಾ, ಹುಬ್ಬಳ್ಳಿ ಚೇಂಬರ್ ಆಫ್ ಕಾಮರ್ಸ್, ಪೀಣ್ಯ ಕೈಗಾರಿಕಾ ಸಂಘ, ನೇಕಾರರು, ರೈಸ್ ಮಿಲ್ ಮಾಲೀಕರ ಜೊತೆ ಸಭೆ ಆಗಿದೆ. ಅವರ ಅಹವಾಲನ್ನು ನಾವು ಪರಿಗಣಿಸಿದ್ದೇವೆ ಎಂದು ಹೇಳಿದರು.

ಎಫ್​ಕೆಸಿಸಿ ಶೇ. 3 ಹಾಗೂ ಕಾಸಿಯಾದವರು ಶೇ. 1 ರಷ್ಟು ವಿದ್ಯುತ್ ಟ್ಯಾಕ್ಸ್ ಇಳಿಸಲು‌ ಮನವಿ ಮಾಡಿದ್ದಾರೆ. ಕೆಇಆರ್​ಸಿ ದರ ಪರಿಷ್ಕರಣೆಗೆ ಮನವಿ ಮಾಡಲಾಗುವುದು. ಎಲ್ಲರ ಅಹವಾಲನ್ನು ಕೇಳಿದ್ದೇವೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸೂಕ್ತ ‌ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ : Annabhagya: ಅಕ್ಕಿ ಬದಲು ಹಣ ಪಾವತಿಸಲು ತೀರ್ಮಾನಿಸಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಟೀಕಾಸಮರ

ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಮಾತನಾಡಿ, ಸಭೆಯಲ್ಲಿ ನಡೆದ ವಿಷಯಗಳ ಕುರಿತು ಮುಖ್ಯಮಂತ್ರಿಗಳಿಗೆ ವರದಿ ಕೊಡುತ್ತೇವೆ. ಆರ್ಥಿಕ ಮತ್ತು ಕಾನೂನಾತ್ಮಕ ಅಂಶಗಳು ಇವೆ. ಅಂತಿಮವಾಗಿ ಸಿಎಂ ತೀರ್ಮಾನ ‌ ಮಾಡುತ್ತಾರೆ. ಅವರು ಆನೇಕ ಸಲಹೆ ಸೂಚನೆಗಳನ್ನು ಕೊಟ್ಟಿದ್ದಾರೆ. ವರದಿಯನ್ನು ಸಿಎಂಗೆ ಕೊಡುತ್ತೇವೆ ಎಂದರು.

ವಿದ್ಯುತ್ ದರ ಕಡಿಮೆ ಮಾಡಬೇಕೆಂದು ಮನವಿ ಮಾಡಿದ್ದಾರೆ. ನಾವು ದರ ಏರಿಕೆ ಮಾಡಿಲ್ಲ. ಕೆಇಆರ್​ಸಿಯವರು ದರ ಏರಿಕೆ ಮಾಡಿದ್ದಾರೆ. ಹೊಸ ಸರ್ಕಾರ ಬಂದ ಮೇಲೆ ವಿದ್ಯುತ್ ದರ ಏರಿಕೆ ಮಾಡಿಲ್ಲ. ಅವರಿಗೂ ಅರಿವಿದೆ. ಸಿಎಂ ಸೂಚನೆ ಮೇರೆಗೆ ಇಂಧನ ಸಚಿವರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಇದನ್ನೂ ಓದಿ : ಅಕ್ಕಿ ಲಭ್ಯವಾಗುವವರೆಗೆ ಫಲಾನುಭವಿಗಳ ಖಾತೆಗೆ ಹಣ; ಜುಲೈ 1ರಿಂದ 10 ಕೆಜಿ ಧಾನ್ಯ ವಿತರಣೆ- ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.