ETV Bharat / state

ಜಿಲ್ಲಾ ಕನ್ನಡ ಭವನ ನಿರ್ಮಾಣಕ್ಕೆ ಪಾಲಿಕೆ ಅನುಮತಿ ಕೊಡುತ್ತಿಲ್ಲ.. ಮಾಯಣ್ಣ ಆರೋಪ

ನಗರದ ಮೈದಾನದ ಬಳಿಯ ಖಾಲಿ ಜಾಗವನ್ನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿರ್ಮಾಣಕ್ಕೆ 5 ವರ್ಷಗಳ ಕಾಲ ಗುತ್ತಿಗೆ ನೀಡುವ ಪ್ರಸ್ತಾವನೆಯನ್ನು ಪಾಲಿಕೆ ತಳ್ಳಿ ಹಾಕಿದೆ. ಇದು ಕನ್ನಡಿಗರ ದೌರ್ಭಾಗ್ಯ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಾಯಣ್ಣ ಆರೋಪಿಸಿದ್ದಾರೆ.

author img

By

Published : Dec 16, 2019, 10:19 PM IST

Mayanna
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಾಯಣ್ಣ

ಬೆಂಗಳೂರು: ನ್ಯಾಷನಲ್ ಕಾಲೇಜು ಆಟದ ಮೈದಾನದ ಬಳಿಯಿರುವ ಖಾಲಿ ಜಾಗವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿರ್ಮಾಣಕ್ಕೆ 5 ವರ್ಷ ಕಾಲ ಗುತ್ತಿಗೆ ನೀಡುವ ಪ್ರಸ್ತಾವನೆಯನ್ನು ಪಾಲಿಕೆ ತಳ್ಳಿ ಹಾಕಿದೆ. ಇದು ಕನ್ನಡಿಗರ ದೌರ್ಭಾಗ್ಯ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಾಯಣ್ಣ ಆರೋಪಿಸಿದ್ದಾರೆ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಾಯಣ್ಣ..

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2018ರಲ್ಲೇ ಬಿಬಿಎಂಪಿಗೆ ಮನವಿ ಮಾಡಲಾಗಿತ್ತು. ಎಲ್ಲಾ ಇಲಾಖೆಗಳು ಯಾವುದೇ ಅಭ್ಯಂತರವಿಲ್ಲ ಎಂದು ವರದಿ ನೀಡಿವೆ. ಇದರ ಹೊರತಾಗಿಯೂ ಈ ಪ್ರಸ್ತಾವನೆಯನ್ನು ಕೈಬಿಡಲಾಗಿದೆ. ಈಗಾಗಲೇ ಒಡಿಶಾ ಭವನ, ಗುಜರಾತ್ ಭವನ, ತಮಿಳು ಭವನಕ್ಕೆಲ್ಲ ಬಿಬಿಎಂಪಿ ಜಾಗ ನೀಡಿದೆ. ಆದರೆ, ಕನ್ನಡ ಭವನಕ್ಕೆ ಮಾತ್ರ ಜಾಗ ಇಲ್ಲ. ಕನ್ನಡ ವಿರೋಧಿಗಳು ನಿವೇಶನ ನೀಡದಂತೆ ಕೈಚಳಕ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಬಿ ಹೆಚ್ ಅನಿಲ್ ಕುಮಾರ್, ಕನ್ನಡ ಸಾಹಿತ್ಯ ಪರಿಷತ್ ಪ್ರಜಾಪ್ರಭುತ್ವದ ಸಂಸ್ಥೆ. ರದ್ದು ಪಡಿಸಿರೋದು ಕೌನ್ಸಿಲ್​ನ ತೀರ್ಮಾನ. ಇದು ಪಾಲಿಕೆ ತೀಮಾನ ಆಗಿರೋದ್ರಿಂದ ಮತ್ತೊಮ್ಮೆ ಪರಿಶೀಲಿಸಲಾಗುವುದು ಎಂದರು.

Intro:ಬೆಂಗಳೂರು ನಗರ ಜಿಲ್ಲಾ ಕನ್ನಡ ಭವನ ನಿರ್ಮಾಣಕ್ಕೆ ಪಾಲಿಕೆ ಅನುಮತಿ ಕೊಡುತ್ತಿಲ್ಲ- ಮಾಯಣ್ಣ ಆರೋಪ

ಬೆಂಗಳೂರು: ನ್ಯಾಷನಲ್ ಕಾಲೇಜು ಆಟದ ಮೈದಾನದ ಬಳಿಯ ಖಾಲಿ ಜಾಗವನ್ನು, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿರ್ಮಾಣಕ್ಕೆ 5 ವರ್ಷ ಕಾಲ ಗುತ್ತಿಗೆ ನೀಡುವ ಪ್ರಸ್ತಾವನೆಯನ್ನು ಪಾಲಿಕೆ ತಳ್ಳಿಹಾಕಿದೆ. ಇದು ಕನ್ನಡಿಗರ ದೌರ್ಭಾಗ್ಯ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಾಯಣ್ಣ ಆರೋಪಿಸಿದ್ದಾರೆ.
2018 ರಲ್ಲೇ ಬಿಬಿಎಂಪಿ ಗೆ ಮನವಿ ಮಾಡಲಾಗಿತ್ತು. ಎಲ್ಲ ಇಲಾಖೆಗಳು ಯಾವುದೇ ಅಭ್ಯಂತರವಿಲ್ಲ ಎಂದು ವರದಿ ನೀಡಿವೆ. ಇದರ ಹೊರತಾಗಿಯೂ ಈ ಪ್ರಸ್ತಾವನೆಯನ್ನು ಕೈಬಿಡಲಾಗಿದೆ ಎಂದು ಅಸಮಾಧಾನ ಹೊರಹಾಕಿದರು.
ಈಗಾಗಲೇ ಒರಿಸ್ಸಾ ಭವನ, ಗುಜರಾತ್ ಭವನ, ತಮಿಳು ಭವನಕ್ಕೆಲ್ಲ ಬಿಬಿಎಂಪಿ ಜಾಗ ನೀಡಿದೆ. ಆದ್ರೆ ಕನ್ನಡ ಭವನಕ್ಕೆ ಮಾತ್ರ ಜಾಗ ಇಲ್ಲ. ಕನ್ನಡ ವಿರೋಧಿಗಳು ನಿವೇಶನ ನೀಡದಂತೆ ಕೈಚಳಕ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಬಿ.ಹೆಚ್ ಅನಿಲ್ ಕುಮಾರ್,
ಕನ್ನಡ ಸಾಹಿತ್ಯ ಪರಿಷತ್ ಪ್ರಜಾಪ್ರಭುತ್ವದ ಸಂಸ್ಥೆ ಯಾಗಿದೆ. ರದ್ದು ಪಡಿಸಿರೋದು ಕೌನ್ಸಿಲ್ ನ ತೀರ್ಮಾನ ವಾಗಿದೆ.
ಇದು ಪಾಲಿಕೆ ತೀಮಾನ ಆಗಿರೋದ್ರಿಂದ ಮತ್ತೊಮ್ಮೆ ಪರಿಶೀಲಿಸಲಾಗುವುದು ಎಂದರು.

ಸೌಮ್ಯಶ್ರೀ
Byte-Mayanna
Byte-bh anilkumar
Kn_bng_06_kannada_vivadha_bbmp_7202707Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.