ETV Bharat / state

'ಕೊರೊನಾ ಹೆಸರಲ್ಲಿ ರಾಜ್ಯ ಸರ್ಕಾರದಿಂದ 10 ಸಾವಿರ ಕೋಟಿ ಹಗರಣ' - ಕೊರೊನಾ ಹಗರಣ ಸುದ್ದಿ,

ಕೊರೊನಾ ಹೆಸರಿನಲ್ಲಿ ಸಿಎಂ ಬಿಎಸ್​ವೈ ನೇತೃತ್ವದಲ್ಲಿ ಬೃಹತ್ ಹಗರಣ ನಡೆದಿದೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡರು ಆರೋಪಿಸಿದರು.

Massive scam led by CM, Massive scam led by CM in the name of Corona, APP allegation, APP allegation news, APP allegation on CM Yadeyurappa, corona scam, corona scam news, ಸಿಎಂ ನೇತೃತ್ವದಲ್ಲಿ ಬೃಹತ್​ ಹಗರಣ, ಕೊರೊನಾ ಹೆಸರಿನಲ್ಲಿ ಸಿಎಂ ಬೃಹತ್​ ಹಗರಣ, ಆಮ್​ ಆದ್ಮಿ ಪಕ್ಷ ಆರೋಪ, ಆಪ್ ಆರೋಪ ಸುದ್ದಿ, ಸಿಎಂ ಯಡಿಯೂರಪ್ಪ ಮೇಲೆ ಆಪ್​ ಆರೋಪ, ಕೊರೊನಾ ಹಗರಣ, ಕೊರೊನಾ ಹಗರಣ ಸುದ್ದಿ,
ಕೊರೊನಾ ಹೆಸರಿನಲ್ಲಿ ಸಿಎಂ ನೇತೃತ್ವದಲ್ಲಿ ಬೃಹತ್ ಹಗರಣ ನಡೆದಿದೆ ಎಂದು ಆಪ್​ ಆರೋಪಿಸಿದೆ
author img

By

Published : Oct 22, 2020, 4:26 PM IST

ಬೆಂಗಳೂರು: ಕೊರೊನಾ ಸೋಂಕು ನೆಪದಲ್ಲಿ ಸುಮಾರು 10 ಸಾವಿರ ಕೋಟಿಗಳಷ್ಟು ಬೃಹತ್ ಹಗರಣವನ್ನು ರಾಜ್ಯ ಬಿಜೆಪಿ ಸರ್ಕಾರ ನಡೆಸಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.

ಹೋಮ್ ಐಸೋಲೇಷನ್ ಇರುವವರಿಗೆ ಕಿಟ್ ನೀಡಲಾಗುವುದು ಎಂದು ಹೇಳಿ ಇಲ್ಲಿಯವರೆಗೂ ಯಾವುದೇ ಕಿಟ್ ನೀಡಿಲ್ಲ. ಆದರೆ ಕಿಟ್ ನೀಡಲಾಗಿದೆ ಅಂತಾ ಸುಮಾರು 150 ಕೋಟಿ ರೂ ದೋಚಲಾಗಿದೆ ಎಂದು ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಆರೋಪಿಸಿದರು.

ಕೊರೊನಾ ಹೆಸರಿನಲ್ಲಿ ಸಿಎಂ ನೇತೃತ್ವದಲ್ಲಿ ಬೃಹತ್ ಹಗರಣ ನಡೆದಿದೆ ಎಂದು ಆಪ್​ ಆರೋಪಿಸಿದೆ.

ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲ್‌ಸೆಂಟರ್‌ಗಳ ಮೂಲಕ ಸೋಂಕಿತರಿಗೆ ಕರೆ ಮಾಡಲು ಸರ್ಕಾರವೇ ತಿಳಿಸಿರುವಂತೆ ರೂ. 69 ನೀಡಲಾಗುತ್ತಿದೆ. ಸುಮ್ಮನೆ ಅಂದಾಜು ಲೆಕ್ಕ ಹಾಕಿದರೂ 8 ಲಕ್ಷ ಜನರಿಗೆ 5 ಬಾರಿ ಕರೆ ಮಾಡಲು ನೂರಾರು ಕೋಟಿ ವ್ಯಯಿಸಲಾಗಿದೆ. ಹೆಚ್ಚುವರಿಯಾಗಿ 50 ರೂ. ನೀಡಿ ಹಣ ದೋಚಲಾಗಿದೆ ಎಂದು ಹೇಳಿದರು.

ದೆಹಲಿ ಮಾದರಿಯನ್ನು ಅನುಸರಿಸಿ ಎಂದು ಸ್ವತಃ ಪ್ರಧಾನಿಗಳೇ ಹೇಳಿದ್ದರೂ, ನಮ್ಮ ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡಿತು. ವೈಯಕ್ತಿಕವಾಗಿ ನಾನೇ ನಮ್ಮ ರಾಜ್ಯದ ಆರೋಗ್ಯ ಮಂತ್ರಿಗಳಿಗೆ ಕರೆ ಮಾಡಿ, ವಾಟ್ಸಾಪ್​ ಸಂದೇಶ ಕಳುಹಿಸಿದರೂ ಸ್ಪಂದಿಸಲಿಲ್ಲ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.