ETV Bharat / state

ಪಶುಸಂಗೋಪನೆ ಇಲಾಖೆಯಿಂದ ಹಾನಿ ವರದಿ: ನೆರೆಗೆ ಬಲಿಯಾದ ಜಾನುವಾರುಗಳೆಷ್ಟು?

author img

By

Published : Sep 18, 2019, 4:28 AM IST

ರಾಜ್ಯದಲ್ಲಿ ಸಾವಿರಾರು ಮೂಕ ಪ್ರಾಣಿಗಳು ಪ್ರವಾಹದ ಆರ್ಭಟಕ್ಕೆ ಕೊಚ್ಚಿಹೋಗಿವೆ. ಪಶುಸಂಗೋಪನೆ‌ ಇಲಾಖೆ ಪ್ರವಾಹ ಹಾನಿ ಸಂಬಂಧ‌ ವರದಿಯನ್ನು ಕಂದಾಯ ಇಲಾಖೆಗೆ ಸಲ್ಲಿಸಿದ್ದು, ಎನ್ ಡಿಆರ್​​​ಎಫ್ ಮಾರ್ಗಸೂಚಿಯನ್ವಯ ಸುಮಾರು 9 ಕೋಟಿ ರೂ.‌ ನೆರವು ಕೇಳಿದೆ.

ಜಾನುವಾರು

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ವರುಣಾಘಾತವು ಜೀವ ಹಾನಿಗಳ ಜತೆಗೆ ಲಕ್ಷಾಂತರ ಮಂದಿಯ ಮನೆ ಮಠ, ಬೆಳೆ, ಕೃಷಿ ಭೂಮಿಗಳನ್ನು ನಾಮಾವಶೇಷಗೊಳಿಸಿದೆ. ಜೊತೆಗೆ ಮಳೆಯಾರ್ಭಟವು ಸಾವಿರಾರು ಜಾನುವಾರುಗಳ ಪ್ರಾಣವನ್ನು ಅಪೋಶನಗೈದಿದೆ. ಪಶುಸಂಗೋಪನೆ ಇಲಾಖೆ ಕಂದಾಯ ಇಲಾಖೆಗೆ ಸಲ್ಲಿಸಿರುವ ಜಾನುವಾರುಗಳ ಹಾನಿ, ನಷ್ಟದ ವರದಿ ಇಲ್ಲಿದೆ.

ದಶಕಗಳ ಬಳಿಕದ ಮಹಾಮಳೆ ರಾಜ್ಯದಲ್ಲಿ ಭೀಕರ ಅತಿವೃಷ್ಠಿಯನ್ನು ಸೃಷ್ಟಿಸಿದೆ. ಮಳೆಯ ಅಬ್ಬರಕ್ಕೆ ಹಿಂದೆಂದೂ ಕಾಣದ ಪ್ರಾಣ ಹಾನಿ ಸಂಭವಿಸಿದೆ‌. ಮಾನವ ಸಾವಿನ‌ ಜತೆಗೆ ಸಾವಿರಾರು ಮೂಕ ಪ್ರಾಣಿಗಳು ಪ್ರವಾಹದ ಆರ್ಭಟಕ್ಕೆ ಕೊಚ್ಚಿಹೋಗಿವೆ. ಪಶುಸಂಗೋಪನೆ‌ ಇಲಾಖೆ ಪ್ರವಾಹ ಹಾನಿ ಸಂಬಂಧ‌ ವರದಿಯನ್ನು ಕಂದಾಯ ಇಲಾಖೆಗೆ ಸಲ್ಲಿಸಿದ್ದು, ಎನ್ ಡಿಆರ್​​​ಎಫ್ ಮಾರ್ಗಸೂಚಿಯನ್ವಯ ಸುಮಾರು 9 ಕೋಟಿ ರೂ.‌ ನೆರವು ಕೇಳಿದೆ.

Livestock
ಹಾನಿ ವರದಿ ಪ್ರತಿ

ಪ್ರವಾಹ ಪೀಡಿತ ತಾಲೂಕುಗಳಲ್ಲಿ ರಾಜ್ಯ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನ ವಿವಿ ಆಸ್ತಿಗಳು ಹಾನಿಗೊಳಗಾಗಿವೆ. ಒಟ್ಟು 4.41 ಕೋಟಿ ರೂ. ಮೊತ್ತದ ಆಸ್ತಿ ಹಾನಿಗೊಳಗಾಗಿರುವ ಬಗ್ಗೆ ಇಲಾಖೆ ವರದಿ ನೀಡಿದೆ.

ಇನ್ನು ಅದೇ ರೀತಿ 73 ತಾಲೂಕುಗಳಲ್ಲಿ ನೆರೆಯಿಂದ ಮೀನುಗಾರಿಕೆಯ ವಿವಿಧ ಚಟುವಟಿಕೆಗಳಿಗೆ ಅಪರವಾದ ಹಾನಿಯಾಗಿದ್ದು, ಸುಮಾರು 2.33 ಕೋಟಿ ರೂ. ನೆರವು ಕೋರಲಾಗಿದೆ.

ಜಾನುವಾರುಗಳ ಔಷಧಗಳಿಗಾಗಿನ ನೆರವು:

ಪ್ರವಾಹದಿಂದ ರಕ್ಷಿಸಲ್ಪಟ್ಟ ಒಟ್ಟು ಜಾನುವಾರುಗಳು 65,507. ಇವುಗಳನ್ನು ಗೋ ಶಾಲೆಗಳಲ್ಲಿ ಶುಶ್ರೂಷೆ ನೀಡಲಾಗುತ್ತಿದೆ.

ಈ ಜಾನುವಾರುಗಳ ಆರೋಗ್ಯ ಕಾಪಾಡಲು ಔಷಧಗಳ ಅಗತ್ಯ ಇದ್ದು, ಪ್ರತಿ ಜಾನುವಾರುಗಳಿಗೆ 100 ರೂ. ನಂತೆ ವೆಚ್ಚ ತಗುಲಲಿದ್ದು, ಸುಮಾರು 6.55 ಕೋಟಿ ರೂ. ನೆರವಿನ ಅಗತ್ಯ ಇದೆ ಎಂದು ಇಲಾಖೆ ವರದಿಯಲ್ಲಿ ತಿಳಿಸಿದೆ.

Livestock
ಹಾನಿ ವರದಿ ಪ್ರತಿ

ಎನ್​​​ಡಿಆರ್​​​ಎಫ್ ಪ್ರಕಾರ ಪರಿಹಾರ ಹಣ:

ಎನ್​​ಡಿಆರ್​​​ಎಫ್ ನಿಯಮದ ಪ್ರಕಾರ ಪ್ರತಿ ಹಸು, ಎಮ್ಮೆ ಸಾವಿಗೆ 30,000 ಸಾವಿರ ರೂ. ನೀಡಬೇಕಾಗಿದೆ. ಇನ್ನು ಕುರಿ, ಮೇಕೆ, ಹಂದಿಗಳ ಸಾವಿಗೆ ಮಾಲೀಕನಿಗೆ ತಲಾ 3,000 ರೂ. ನೀಡಬೇಕು.

ಸಾವಿಗೀಡಾದ ಎತ್ತುಗಳಿಗೆ ತಲಾ 25,000 ರೂ. ಪರಿಹಾರ ನೀಡಬೇಕಾಗಿದೆ. ಇನ್ನು ಮರಣ ಹೊಂದಿದ ಕರುಗಳಿಗೆ ತಲಾ 16,000 ರೂ. ಪರಿಹಾರ ನೀಡಬೇಕು. ಅದೇ ರೀತಿ ಸಾವಿಗೀಡಾದ ಕೋಳಿಗಳಿಗೆ ತಲಾ 50 ರೂ.ನಂತೆ ಅದರ‌ ಮಾಲೀಕನಿಗೆ ಪರಿಹಾರ ನೀಡಬೇಕಾಗಿದೆ.

ಜಾನುವಾರುಗಳ ಪ್ರಾಣಹಾನಿ ವಿವರ:

  • ಮರಣ ಹೊಂದಿದ ಒಟ್ಟು ಜಾನುವಾರು: 49,969
  • ಹಸು, ಎಮ್ಮೆಗಳ ಸಾವು: 543
  • ಕುರಿ, ಹಂದಿ, ಮೇಕೆ: 695
  • ಎತ್ತುಗಳ ಸಾವು: 53
  • ಕರುಗಳ ಸಾವು: 170
  • ಕೋಳಿಗಳ ಸಾವು: 48,508

Intro:Body:KN_BNG_02_ANIMALDEATH_REPORT_SCRIPT_7201951

ಪಶುಸಂಗೋಪಾನೆ ಇಲಾಖೆಯಿಂದ ನೆರೆ‌ ಹಾನಿ ವರದಿ ಸಲ್ಲಿಕೆ: ನೆರೆಗೆ ಬಲಿಯಾದ ಜಾನುವಾರುಗಳೆಷ್ಟು?

ಬೆಂಗಳೂರು: ವರುಣಾಘಾತ ರಾಜ್ಯದಲ್ಲಿ ಈ ಬಾರಿ ಪ್ರಳಯಾಂತಕವಾಗಿ ಪರಿಣಮಿಸಿದೆ. ಜೀವ ಹಾನಿಗಳ ಜತೆಗೆ ಲಕ್ಷಾಂತರ ಮಂದಿಯ ಮನೆ ಮಠ, ಬೆಳೆ, ಕೃಷಿ ಭೂಮಿಗಳನ್ನು ನಾಮವಶೇಷಗೊಳಿಸಿದೆ. ಅದರ ಜತೆಗೆ ಮಳೆಯಾರ್ಭಟ ಸದ್ದಿಲ್ಲದೆ ಸಾವಿರಾರು ಜಾನುವಾರುಗಳ ಪ್ರಾಣವನ್ನು ಅಪೋಶನಗೈದಿದೆ. ಪಶುಸಂಗೋಪನೆ ಇಲಾಖೆ ಕಂದಾಯ ಇಲಾಖೆಗೆ ಸಲ್ಲಿಸಿರುವ ಜಾನುವಾರುಗಳ ಹಾನಿ, ನಷ್ಟದ ವರದಿ ಇಲ್ಲಿದೆ.

ದಶಕಗಳ ಬಳಿಕದ ಮಹಾಮಳೆ ರಾಜ್ಯದಲ್ಲಿ ಭೀಕರ ಅತಿವೃಷ್ಠಿಯನ್ನು ಸೃಷ್ಟಿಸಿದೆ. ಮಳೆಯ ಅಬ್ಬರಕ್ಕೆ ಹಿಂದೆಂದೂ ಕಾಣದ ಪ್ರಾಣ ಹಾನಿ ಸಂಭವಿಸಿದೆ‌. ಮಾನವ ಸಾವಿನ‌ ಜತೆಗೆ ಸಾವಿರಾರು ಮೂಕ ಪ್ರಾಣಿಗಳು ಪ್ರವಾಹದ ಆರ್ಭಟಕ್ಕೆ ಕೊಚ್ಚಿಹೋಗಿವೆ. ಪಶುಸಂಗೋಪನೆ‌ ಇಲಾಖೆ ಪ್ರವಾಹ ಹಾನಿ ಸಂಬಂಧ‌ ವರದಿಯನ್ನು ಕಂದಾಯ ಇಲಾಖೆಗೆ ಸಲ್ಲಿಸಿದ್ದು, ಎನ್ ಡಿಆರ್ ಎಫ್ ಮಾರ್ಗಸೂಚಿಯನ್ವಯ ಸುಮಾರು 9 ಕೋಟಿ ರೂ.‌ ನೆರವು ಕೇಳಿದೆ.

ಪ್ರವಾಹ ಪೀಡಿತ ತಾಲೂಕುಗಳಲ್ಲಿ ರಾಜ್ಯ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನ ವಿವಿ ಆಸ್ತಿಗಳು ಹಾನಿಗೊಳಗಾಗಿವೆ. ಒಟ್ಟು 4.41 ಕೋಟಿ ರೂ. ಮೊತ್ತದ ಆಸ್ತಿ ಹಾನಿಗೊಳಗಾಗಿರುವ ಬಗ್ಗೆ ಇಲಾಖೆ ವರದಿ ನೀಡಿದೆ.

ಇನ್ನು ಅದೇ ರೀತಿ 73 ತಾಲೂಕುಗಳಲ್ಲಿ ನೆರೆಯಿಂದ ಮೀನುಗಾರಿಕೆಯ ವಿವಿಧ ಚಟುವಟಿಕೆಗಳಿಗೆ ಅಪರವಾದ ಹಾನಿಯಾಗಿದ್ದು, ಸುಮಾರು 2.33 ಕೋಟಿ ರೂ. ನೆರವು ಕೋರಲಾಗಿದೆ.

ಜಾನುವಾರುಗಳ ಔಷಧಗಳಿಗಾಗಿನ ನೆರವು:

ಪ್ರವಾಹದಿಂದ ರಕ್ಷಿಸಲ್ಪಟ್ಟ ಒಟ್ಟು ಜಾನುವಾರುಗಳು 65,507. ಇವುಗಳನ್ನು ಗೋ ಶಾಲೆಗಳಲ್ಲಿ ಶುಶ್ರೂಷೆ ನೀಡಲಾಗುತ್ತಿದೆ.

ಈ ಜಾನುವಾರುಗಳ ಆರೋಗ್ಯ ಕಾಪಾಡಲು ಔಷಧಗಳ ಅಗತ್ಯ ಇದ್ದು, ಪ್ರತಿ ಜಾನುವಾರುಗಳಿಗೆ 100 ರೂ. ನಂತೆ ವೆಚ್ಚ ತಗುಲಲಿದ್ದು, ಸುಮಾರು 6.55 ಕೋಟಿ ರೂ. ನೆರವಿನ ಅಗತ್ಯ ಇದೆ ಎಂದು ಇಲಾಖೆ ವರದಿಯಲ್ಲಿ ತಿಳಿಸಿದೆ.

ಎನ್ ಡಿಆರ್ ಎಫ್ ಪ್ರಕಾರ ಪರಿಹಾರ ಹಣ:

ಎನ್ ಡಿಆರ್ ಎಫ್ ನಿಯಮದ ಪ್ರಕಾರ ಪ್ರತಿ ಹಸು ಎಮ್ಮೆ ಸಾವಿಗೆ 30,000 ಸಾವಿರ ರೂ. ನೀಡಬೇಕಾಗಿದೆ. ಇನ್ನು ಕುರಿ, ಮೇಕೆ, ಹಂದಿಗಳ ಸಾವಿಗೆ ಮಾಲೀಕನಿಗೆ ತಲಾ 3,000 ರೂ. ನೀಡಬೇಕು.

ಸಾವಿಗೀಡಾದ ಎತ್ತುಗಳಿಗೆ ತಲಾ 25,000 ರೂ. ಪರಿಹಾರ ನೀಡಬೇಕಾಗಿದೆ. ಇನ್ನು ಮರಣ ಹೊಂದಿದ ಕರುಗಳಿಗೆ ತಲಾ 16,000 ರೂ. ಪರಿಹಾರ ನೀಡಬೇಕು. ಅದೇ ರೀತಿ ಸಾವಿಗೀಡಾದ ಕೋಳಿಗಳಿಗೆ ತಲಾ 50 ರೂ. ನಂತೆ ಅದರ‌ ಮಾಲೀಕನಿಗೆ ಪರಿಹಾರ ನೀಡಬೇಕಾಗಿದೆ.

ಜಾನುವಾರುಗಳ ಪ್ರಾಣಹಾನಿ ವಿವರ:

ಮರಣಹೊಂದಿದ ಒಟ್ಟು ಜಾನುವಾರು 49,969

ಹಸು, ಎಮ್ಮೆಗಳ ಸಾವು 543

ಕುರಿ, ಹಂದಿ, ಮೇಕೆ 695

ಎತ್ತುಗಳ ಸಾವು 53

ಕರುಗಳ ಸಾವು 170

ಕೋಳಿಗಳ ಸಾವು 48,508Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.