ಬೆಂಗಳೂರು: ಹಾಡಹಗಲೇ ಪಿಜಿಗೆ ನುಗ್ಗಿ ಲ್ಯಾಪ್ಟಾಪ್ ಕಳ್ಳತನ ಮಾಡಿರುವ ಘಟನೆ ಬಿಟಿಎಂ 2ನೇ ಹಂತದ ಕಾವೇರಪ್ಪ ಇಂಡಸ್ಟ್ರಿಯಲ್ ರಸ್ತೆಯ ಪಿಜಿಯಲ್ಲಿ ನಡೆದಿದೆ.
ಪಿ.ಜಿಯನ್ನೇ ಟಾರ್ಗೆಟ್ ಮಾಡಿದ ಕಳ್ಳನೋರ್ವ ಕಾವೇರಪ್ಪ ಇಂಡಸ್ಟ್ರಿಯಲ್ ರಸ್ತೆಯ ಬಳಿ ಇರುವ ಪಿಜಿಗೆ ಎಂಟ್ರಿ ಕೊಟ್ಟಿದ್ದಾನೆ. ನಂತರ, ಯಾರ ಕಣ್ಣಿಗೂ ಬೀಳದೆ ಸುಮಾರು ಅರ್ಧ ಗಂಟೆ ಪಿಜಿ ಸುತ್ತಿ ಎಲ್ಲಾ ಪಿಜಿ ರೂಂಗಳನ್ನು ಇಣುಕಿ ನೋಡಿ ಬಳಿಕ ನಂದನ್ ಪ್ರಭು ಎಂಬುವವರ ರೂಂಗೆ ನುಗ್ಗಿ ಲ್ಯಾಪ್ಟಾಪ್ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾನೆ.
ನಂದನ್ ಪ್ರಭು ಲ್ಯಾಪ್ಟಾಪ್ ಬಿಟ್ಟು ವೈಯಕ್ತಿಕ ಕೆಲಸಕ್ಕೆ ತೆರಳಿದ್ದರು. ಸದ್ಯ ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಟಿವಿ ದೃಶ್ಯದ ಆಧಾರದ ಮೇಲೆ ತನಿಖೆ ಮುಂದುವರಿಸಲಾಗಿದೆ.