ಬೆಂಗಳೂರು: ಬ್ಲೂ ಡಾರ್ಟ್ ಆ್ಯಪ್ ಮೂಲಕ ಲಕ್ಷ ಲಕ್ಷ ದೋಖಾ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದ್ದು, ಮೋಸ ಹೋದ ವ್ಯಕ್ತಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಮನು ರಾಮ್ ಪಾಲ್ ಮನೆಯವರಿಗೆ ಏನೋ ಪಾರ್ಸಲ್ ಮಾಡಬೇಕಿತ್ತು. ಈ ವೇಳೆ, ಬ್ಲೂ ಡಾರ್ಟ್ ಆ್ಯಪ್ ಉಪಯೋಗಿಸಿ ಮನು ರಾಮ್ ಪಾಲ್ ಆ ವಸ್ತುವನ್ನು ಬುಕ್ ಮಾಡಿದ್ರು. ಆದ್ರೆ ಮನು ರಾಮ್ ಪಾಲ್ ಮನೆಯವರಿಗೆ ಸೇರಬೇಕಾದ ಪಾರ್ಸಲ್ ತಲುಪಿರಲಿಲ್ಲ. ಈ ಹಿನ್ನೆಲೆ ಬ್ಲೂ ಡಾರ್ಟ್ ಕಸ್ಟಮರ್ ಕೇರ್ಗೆ ಕರೆ ಮಾಡಲು ಗೂಗಲ್ ಮೂಲಕ ಕಸ್ಟಮರ್ ಕೇರ್ ನಂಬರ್ ತೆಗೆದುಕೊಂಡು ಕರೆ ಮಾಡಿದ್ದಾರೆ.
![Lakhs of rupees lost](https://etvbharatimages.akamaized.net/etvbharat/prod-images/3733943_bng.jpg)
ಆಗ ಮಾಮೂಲಿ ಕಸ್ಟಮರ್ ಕೇರ್ನಂತೆಯೇ ಬಿಹೇವ್ ಮಾಡಿದ್ದ ಬ್ಲೂ ಡಾರ್ಟ್ನವರು, 10 ರೂಪಾಯಿ ಕೋರಿಯರ್ಗೆ ಪೇ ಮಾಡಬೇಕು ಎಂದು ತಿಳಿಸಿದ್ದಾರೆ. ಪಾರ್ಸಲ್ ಅರ್ಜೆಂಟ್ ಇದ್ದ ಕಾರಣ ಫೋನ್ ಪೇಯಿಂದ ಪೇ ಮಾಡಿದ್ದಾರೆ. ಇದಾದ ಸ್ವಲ್ಪ ಹೊತ್ತಿನಲ್ಲೇ ಮನು ಅಕೌಂಟ್ನಿಂದ ಸುಮಾರು ಒಂದು ಗಂಟೆಯಲ್ಲಿ ಒಂದು ಲಕ್ಷ ಹಣ ಹಂತ ಹಂತವಾಗಿ ಡ್ರಾ ಆಗಿದೆಯಂತೆ.
![Lakhs of rupees lost](https://etvbharatimages.akamaized.net/etvbharat/prod-images/kn-bng-06-3-cyber-7204498_03072019145018_0307f_1562145618_471.jpg)
ಯಾವುದೇ ಒಟಿಪಿ ಕೇಳದೆ ಹಣ ಟ್ರಾನ್ಸಾಕ್ಷನ್ ಆಗಿರುವುದರ ಬಗ್ಗೆ ಶಾಕ್ ಆದ ಮನು, ಕೂಡಲೇ ಬ್ಯಾಂಕ್ನವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಇನ್ನು ಟ್ರಾನ್ಸಾಕ್ಷನ್ಗಳನ್ನ ನೋಡಿ ಬ್ಯಾಂಕ್ ಸಿಬ್ಬಂದಿ ಹಾಗೂ ಮನು ಕೂಡಲೇ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಹಣ ಕಳೆದುಕೊಂಡ ಮನು ಕಾಲೇಜು ಯುವಕನಾಗಿದ್ದು, ವಿದ್ಯಾಭ್ಯಾಸಕ್ಕಾಗಿ ತಂದ ಹಣ ಕಳ್ಳರ ಪಾಲಾಗಿರುವ ಕಾರಣ ಕಂಗಾಲಾಗಿದ್ದಾರೆ.