ETV Bharat / state

ಉದ್ಯಮಿ ಅಪಹರಿಸಿ 4 ಕೋಟಿ ಹಣಕ್ಕೆ ಬೇಡಿಕೆ: ಮಹಿಳೆ ಸೇರಿ ಮೂವರ ಬಂಧನ

ಉದ್ಯಮಿ ಸೂರಜ್ ಎಂಬಾತನ ಮೇಲೆ ಹಲ್ಲೆ ನಡೆಸಿ 4 ಕೋಟಿ ರೂ ನೀಡುವಂತೆ ಧಮ್ಕಿ ಹಾಕಿದ್ದ ಚಾರಿಟೇಬಲ್ ಟ್ರಸ್ಟ್​ ಅಧ್ಯಕ್ಷೆ ಸೇರಿ ಮೂವರನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.

ಲೇಡಿ ಗ್ಯಾಂಗ್ ಅರೆಸ್ಟ್
ಲೇಡಿ ಗ್ಯಾಂಗ್ ಅರೆಸ್ಟ್
author img

By

Published : Aug 24, 2022, 6:01 PM IST

Updated : Aug 24, 2022, 10:54 PM IST

ಬೆಂಗಳೂರು: ಉದ್ಯಮಿ ಮೇಲೆ ಹಲ್ಲೆ ನಡೆಸಿ, ಪಿಸ್ತೂಲ್ ತೋರಿಸಿ ಅಕ್ರಮ ಬಂಧನದಲ್ಲಿಟ್ಟ ಚಾರಿಟೇಬಲ್ ಟ್ರಸ್ಟ್​ವೊಂದರ ಅಧ್ಯಕ್ಷೆಯೂ ಸೇರಿದಂತೆ ಮೂವರು ಆರೋಪಿಗಳನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ. ಟ್ರಸ್ಟ್​ನ ಅಧ್ಯಕ್ಷೆ ಪುಷ್ಪಲತಾ, ಅಯ್ಯಪ್ಪ ಹಾಗು ರಾಕೇಶ್ ಬಂಧಿತರು. ರವಿ ಇಂಡಸ್ಟ್ರಿಯಲ್ ಸಪ್ಲೈ ಕಂಪೆನಿ ಮಾಲೀಕರ ಮಗನಾದ ಉದ್ಯಮಿ ಸೂರಜ್ ಎಂಬಾತನ ಮೇಲೆ ಹಲ್ಲೆ ನಡೆಸಿದ ಇವರು 4 ಕೋಟಿ ರೂಪಾಯಿ ನೀಡುವಂತೆ ಬೆದರಿಕೆ ಹಾಕಿದ್ದರಂತೆ.

ಹಣದೊಂದಿಗೆ ಲೇಡಿ ಗ್ಯಾಂಗ್ ಅರೆಸ್ಟ್

ಕಳೆದೆರಡು ವರ್ಷದ ಹಿಂದೆ ಸೂರಜ್​ಗೆ ಪುಷ್ಪಲತಾ ಪರಿಚಯವಾಗಿದ್ದಳು. ಮೂರು ತಿಂಗಳ ಹಿಂದೆ ಸರ್ಕಾರಿ ಟೆಂಡರ್ ಕೊಡಿಸುತ್ತೇನೆ ಎಂದು ಈಕೆ ಸೂರಜ್​ಗೆ ಇನ್ನಷ್ಟು ಹತ್ತಿರವಾಗಿದ್ದಳು‌. ಈ ಸಂದರ್ಭದಲ್ಲಿ ಸಂತೋಷ್ ಎಂಬಾತನನ್ನೂ ಪರಿಚಯಿಸಿ, ಈತ ಐಎಎಸ್ ಅಧಿಕಾರಿಯ ಆಪ್ತ ಕಾರ್ಯದರ್ಶಿ. ಇವರು ನಿಮಗೆ ಸರ್ಕಾರಿ ಟೆಂಡರ್ ಕೊಡಿಸುತ್ತಾರೆ ಎಂದು ಹೇಳಿ ನಂಬಿಸಿದ್ದಳು.

ಪಿಸ್ತೂಲ್ ತಲೆಗಿಟ್ಟು ಬೆದರಿಕೆ: ಈ ಮಾತುಕತೆ ನಡೆಯುವಾಗ ಏಕಾಏಕಿ ನುಗ್ಗಿದ ಅಯ್ಯಪ್ಪ ಹಾಗು ರಾಕೇಶ್ ಸೂರಜ್ ಮೇಲೆ ಹಲ್ಲೆ ನಡೆಸಿದ್ದಾರೆ. ಅವರ ಜೊತೆ ಸೇರಿಕೊಂಡ ಪುಷ್ಪಲತಾ ಕೂಡ ಹಲ್ಲೆ ನಡೆಸಿ ನಾಲ್ಕು ಕೋಟಿ ರೂ ಹಣ ಕೊಡು. ಇಲ್ಲದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಳು. ಇಡೀ ಮನೆಯನ್ನೇ ಮಾರಿದ್ರೂ ಅಷ್ಟು ಹಣವಿಲ್ಲ ಎಂದು ಹೇಳಿದಾಗ, ಅಯ್ಯಪ್ಪ ತನ್ನ ಬಳಿ ಇದ್ದ ಪಿಸ್ತೂಲನ್ನು ಸೂರಜ್‌ ತಲೆಗಿಟ್ಟು ಬೆದರಿಸಿದ್ದಾನೆ.

'ನನ್ನ ರೇಪ್ ಮಾಡಲು ಬಂದಿದ್ಯಾ ಅಂತ ದೂರು ಕೊಡ್ತೀನಿ': ಸೂರಜ್ ತನ್ನ ಸ್ನೇಹಿತ ಗುರುಮೂರ್ತಿ ಎಂಬಾತನಿಗೆ ಕರೆ ಮಾಡಿ ಟ್ರಸ್ಟ್ ಬಳಿ 25 ಲಕ್ಷ ರೂ ಹಣ ತರಲು ಹೇಳಿದ್ದಾನೆ. ಅದರಂತೆ ಕಚೇರಿ ಬಳಿ ಬಂದಿದ್ದ ಗುರುಮೂರ್ತಿ, ಸೂರಜ್ ಬಿಟ್ಟು ಬೇರೆ ಯಾರೋ ಇದ್ದುದಕ್ಕೆ ಹಣ ನೀಡಿರಲಿಲ್ಲ. ನಂತರ ಅಕ್ರಮವಾಗಿ ಬಂಧನಕ್ಕೊಳಗಾಗಿದ್ದ ಸೂರಜ್ ಬಳಿ ಬಂದ ಪುಷ್ಪಲತಾ ಈ ವಿಚಾರ ಹೊರಗಡೆ ಹೇಳಿದರೆ ನಿನ್ನ ಇಡೀ ಕುಟುಂಬವನ್ನು ಬಿಡೋದಿಲ್ಲ. ನೀನು ನನ್ನ ರೇಪ್ ಮಾಡೋಕೆ ಬಂದಿದ್ಯಾ ಅಂತ ದೂರು ಕೊಡ್ತೀನಿ ಎಂದು ಸೂರಜ್​ನನ್ನು ಬಿಟ್ಟು ಕಳಿಸಿದ್ದಾಳೆ. ನಂತರ ಪೊಲೀಸರಿಗೆ ದೂರು ನೀಡಿದ್ದು ಬ್ಯಾಟರಾಯನಪುರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಡಿಸಿಪಿ ಪಶ್ಚಿಮ ವಿಭಾಗದ‌ ಲಕ್ಷ್ಮಣ್ ನಿಂಬರಗಿ ಮಾಹಿತಿ ನೀಡಿದರು.

ಇದನ್ನೂ ಓದಿ: ದೊಡ್ಡಬಳ್ಳಾಪುರ ಪೊಲೀಸರ ಕಾರ್ಯಾಚರಣೆ: ಗಾಂಜಾ ಗ್ಯಾಂಗ್ ಅರೆಸ್ಟ್

Last Updated : Aug 24, 2022, 10:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.