ಬೆಂಗಳೂರು: ಕೊರೊನಾ ಹೊಡೆತಕ್ಕೆ ಸಿಲುಕಿರುವ ಕೆಎಸ್ಆರ್ಟಿಸಿ ನಿಗಮ ಸಂಕಷ್ಟಕ್ಕೆ ಒಳಗಾಗಿದೆ. ಈ ನಡುವೆ ಪ್ರಯಾಣಿಕರನ್ನು ಸೆಳೆಯಲು ಮಾಸ್ಟರ್ ಪ್ಲಾನ್ ಮಾಡಿದೆ.
ಪ್ರಯಾಣಿಕರು ವಾರಾಂತ್ಯದಲ್ಲಿ ಬಸ್ ನತ್ತ ಮುಖ ಮಾಡದ ಕಾರಣ, ಡಿಸೆಂಬರ್ ಅಂತ್ಯದವರೆಗೆ ವಾರಾಂತ್ಯದಲ್ಲಿ ಐಷಾರಾಮಿ ಬಸ್ಗಳಲ್ಲಿ ಟಿಕೆಟ್ ದರ ಹೆಚ್ಚಳ ಮಾಡದಿರಲು ನಿರ್ಧರಿಸಿದೆ.
ಪ್ರತಿ ವಾರಾಂತ್ಯದಲ್ಲಿ ಐಷಾರಾಮಿ ಬಸ್ಗಳಲ್ಲಿ ಶೇ 10 ರಷ್ಟು ದರ ಹೆಚ್ಚಳ ಮಾಡುತ್ತಿದ್ದ ನಿಗಮ, ಡಿಸೆಂಬರ್ ಅಂತ್ಯದವರಿಗೆ ಏಕರೂಪದ ಪ್ರಯಾಣದ ದರ ವಿಧಿಸಿ ಕೆಎಸ್ಆರ್ಟಿಸಿ ಆದೇಶ ಮಾಡಿದೆ.
ಅಕ್ಟೋಬರ್ 16 ರಿಂದಲೇ ಅನ್ವಯವಾಗುವಂತೆ ದರ ಕಡಿತ ಮಾಡಿದ್ದು, ಇನ್ನು ಮುಂದೆ ವಾರಾಂತ್ಯದಲ್ಲಿ ಬಸ್ ಪ್ರಯಾಣ ದರ ಏರಿಕೆ ಇಲ್ಲ ಎಂದು ಕೆಎಸ್ಆರ್ಟಿಸಿ ಸಂಚಾರಿ ವಿಭಾಗದ ಮುಖ್ಯಸ್ಥ ಪ್ರಭಾಕರ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.