ಬೆಂಗಳೂರು: ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣದ ತನಿಕೆ ನಡೆಸುತ್ತಿರುವ ಸಿಸಿಬಿ ತಂಡ, ಹಲವಾರು ಪ್ರತಿಷ್ಟಿತ ಆಟಗಾರರನ್ನ ಖೆಡ್ಡಾಕ್ಕೆ ಕೆಡವುದರಲ್ಲಿ ಯಶಸ್ವಿಯಾಗಿದೆ.
ನಗರ ಪೊಲೀಸ್ ಆಯುಕ್ತ ಭಾಸ್ಕರ್, ಕೆಪಿಎಲ್ ಬ್ಯಾನ್ ಮಾಡುವಂತೆ ಬಿಸಿಸಿಐಗೆ ಪತ್ರ ಬರೆಯುವ ಚಿಂತನೆಯಲ್ಲಿದ್ದು, ಇದರ ಬೆನ್ನಲ್ಲೇ ಕರ್ನಾಟಕ ಕ್ರಿಕೆಟ್ ಸಂಸ್ಥೆ( ಕೆಎಸ್ ಸಿಎ)ಸೂಪರ್ ಸೀಡ್ ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆಯಲು ಮುಂದಾಗಿದ್ದಾರೆ.
ಕರ್ನಾಟಕ ಕ್ರಿಕೆಟ್ ಸಂಸ್ಥೆ ಹಲವಾರು ಮ್ಯಾಚ್ಗಳನ್ನ ಆಯೋಜನೆ ಮಾಡಿದ್ದು, ಕೆಪಿಎಲ್ ಕ್ರಿಕೆಟ್ನ್ನು ಕೂಡ ಆಯೋಜನೆ ಮಾಡಿತ್ತು. ಸದ್ಯ ಕೆಪಿಎಲ್ ಮ್ಯಾಚ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣ ನಡೆದ ಕಾರಣ ಕೆಎಸ್ಸಿಎ ಬಳಿಯಿಂದ ಸಿಸಿಬಿ ಅಧಿಕಾರಿಗಳು ಮಾಹಿತಿ ಕೇಳಿದ್ದಾರೆ. ಆದರೆ ತನಿಖೆಗೆ ಸಂಬಂಧ ಪಟ್ಟ ಯಾವುದೇ ಮಾಹಿತಿಯನ್ನ ನೀಡದ ಕಾರಣ ಕೆಎಸ್ಸಿಎಯನ್ನ ಸೂಪರ್ ಸೀಡ್ ಮಾಡುವಂತೆ ಪತ್ರದಲ್ಲಿ ಉಲ್ಲೇಖ ಮಾಡಲಿದ್ದಾರೆ.
ಪತ್ರದಲ್ಲಿ ಏನಿರಲಿದೆ..
ಮ್ಯಾಚ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ನಲ್ಲಿ ಕೆಎಸ್ಸಿಎ ಅಧಿಕಾರಿಗಳೂ ಕೂಡ ಭಾಗಿಯಾಗಿರುವ ಶಂಕೆ ಇದೆ. ಸದ್ಯ ತನಿಖಾಧಿಕಾರಿಗಳು ಮಾಹಿತಿ ಕೇಳಿದರೂ ಯಾವುದೇ ಮಾಹಿತಿ ಇಲ್ಲಿಯವರೆಗೆ ನೀಡಿಲ್ಲ. ಹೀಗಾಗಿ ತನಿಖೆ ಮುಗಿಯುವವರೆಗೂ ಕೆಎಸ್ಸಿಎ ಯನ್ನು ಸೂಪರ್ ಸೀಡ್ ಮಾಡುವಂತೆ ಪತ್ರದಲ್ಲಿ ಮನವಿ ಮಾಡಲಿದ್ದಾರೆ.
ಇನ್ನು ಸಿಸಿಬಿ ಅಧಿಕಾರಿಗಳು ತನಿಖೆಯಲ್ಲಿ ಪ್ರಮುಖ ಹಂತ ತಲುಪಿದ್ದು, ಇಲ್ಲಿಯವರೆಗೆ ನಡೆದ ಕೆಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡಿರುವ 7 ತಂಡಗಳ ಪ್ರಮುಖ ಆಟಗಾರರು , ಹಾಗೂ ಮಾಲೀಕರಿಂದ ಮಾಹಿತಿ ಪಡೆದು ವಿಚಾರಣೆ ನಡೆಸಿದ್ದಾರೆ.
ಇಷ್ಟು ಮಾತ್ರವಲ್ಲದೇ ಇನ್ನೂ ಪ್ರತಿಷ್ಟಿತ ಕೆಪಿಎಲ್ ಕ್ರಿಕೆಟ್ನಲ್ಲಿ ಭಾಗಿಯಾದ ರಾಬಿನ್ ಉತ್ತಪ್ಪ, ಕೆ.ಬಿ ಪವನ್, ದೇವ ದತ್ ಪಡಿಕ್ಕಲ್, ಭರತ್ ಚಿಪ್ಲಿ, ರೋನಿತ್ ಮೋರೆ, ಕೆ.ಸಿ ಕಾರಿಯಪ್ಪ, ಕೆ.ಪಿ ಅಪ್ಪಣ್ಣ, ಅಮಿತ್ ವರ್ಮಾ, ರಾಜು ಭಟ್ಕಳ್, ಕೆ.ಗೌತಮ್, ಜೆ.ಸುಚಿತ್, ಪ್ರಸಿದ್ ಕೃಷ್ಣ, ಮನೀಷ್ ಪಾಂಡೆ, ಸ್ಟುವರ್ಟ್ ಬಿನ್ನಿ,ಸಾದಿಕ್ ಕಿರ್ಮಾನಿ, ಮಯಾಂಕ್ ಅಗರ್ವಾಲ್, ಆರ್.ವಿನಯ್ ಕುಮಾರ್, ಪ್ರವೀಣ್ ದುಬೆ, ಆಟವಾಡಿದ್ದು, ಇವರಿಗೆ ಸಿಸಿಬಿ ನೊಟಿಸ್ ನೀಡಲಾಗಿದೆ.