ಬೆಂಗಳೂರು : ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿ. ಏನೇ ಆದ್ರೂ ಕಾಂಗ್ರೆಸ್ ಕಾರಣ ಅಂತಾರೆ. ಬಿಜೆಪಿಯವರು ಕರ್ನಾಟಕವನ್ನು ಸ್ವಲ್ಪ ಶಾಂತಿಯಿಂದ ಇರುಲು ಬಿಟ್ಟರೆ ಸಾಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು. ಬಾಬು ಜಗಜೀವನರಾಮ್ ಜಯಂತಿ ಆಚರಣೆ ಸಂಬಂಧ ಶಿವಕುಮಾರ್ ಅವರ ಸದಾಶಿವನಗರದ ನಿವಾಸದಲ್ಲಿ ಕೇಂದ್ರದ ಮಾಜಿ ಸಚಿವ ಕೆ ಹೆಚ್ ಮುನಿಯಪ್ಪ, ರಾಜ್ಯಸಭೆ ಸದಸ್ಯ ಎಲ್.ಹನುಮಂತಪ್ಪ, ಮಾಜಿ ಸಚಿವ ಆಂಜನೇಯ, ಮಾಜಿ ಸಂಸದ ಚಂದ್ರಪ್ಪ, ಮುಖಂಡ ಕೆ ಬಿ ಕೃಷ್ಣಮೂರ್ತಿ ಮತ್ತಿತರರ ಜತೆ ಬುಧವಾರ ಸಮಾಲೋಚನೆ ನಡೆಸಿದರು.
ಈ ವೇಳೆ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಘಟನೆಗೆ ಕಾಂಗ್ರೆಸ್ ಕಾರಣ ಎಂಬ ಆರೋಪದ ಬಗ್ಗೆ ಅಸಮಾಧಾನ ಹೊರ ಹಾಕಿದರು. ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿ. ಏನೇ ಆದ್ರೂ ಕಾಂಗ್ರೆಸ್ ಕಾರಣ ಅಂತಾರೆ. ಅಲ್ತಾಪ್ ಘಟನೆಯಲ್ಲಿ ಗಾಯಾಳುಗಳಿಗೆ ಸಹಾಯ ಮಾಡಿದ್ದಾರೆ. ಯಾರೇ ಇದ್ರೂ ಒದ್ದು ಒಳಗೆ ಹಾಕಲಿ. ನಾನು ಕೂಡ ಕಮಿಷನರ್ ಅವರನ್ನ ಭೇಟಿ ಮಾಡಿದ್ದೇನೆ. ಹುಬ್ಬಳ್ಳಿ ಘಟನೆಗೆ ಕಾಂಗ್ರೆಸ್ ಕಾರಣ ಎಂದು ಕೇವಲ ಬಿಜೆಪಿ ನಾಯಕರು ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ದಿಂಗಾಲೇಶ್ವರ ಶ್ರೀಗಳ ಶೇ.30 ಕಮಿಷನ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗ ಎಲ್ಲರೂ ಆರೋಪ ಮಾಡುತ್ತಿದ್ದಾರೆ. ಹಿಂದೆ ಕೆಂಪಣ್ಣ ಹೇಳಿದಾಗ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು. ಕಮಿಷನ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿತ್ತು. ಈಗ ಜಗಜ್ಜಾಹೀರಾಗಿದೆ. ಸ್ವಾಮಿಜೀಗಳು ತಿಳಿದವರು ಇದ್ದಾರೆ. ವಿದ್ಯಾವಂತರು ಇದ್ದಾರೆ. ಹಾಗಾಗಿ, ಎಲ್ಲವನ್ನೂ ತಿಳಿದುಕೊಂಡು ಮಾತನಾಡಿದ್ದಾರೆ. ದಿಂಗಾಲೇಶ್ವರ ಶ್ರೀಗಳು ನಮ್ಮ ಮನೆಗೆ ಬಂದಿದ್ರು. ಈಶ್ವರಪ್ಪ ಮನೆಗೂ ಸ್ವಾಮಿಜೀಗಳು ಹೋಗಿದ್ರು. ಹಾಗಂತಾ, ನಾವೇ ಕುಮ್ಮಕ್ಕು ಕೊಟ್ಟಿದ್ದೇವೆ ಅಂತಲ್ಲ. ಅವರ ಗಮನಕ್ಕೆ ಬಂದ ಕಮಿಷನ್ ವಿಚಾರ ಮಾತನಾಡಿದ್ದಾರೆ ಎಂದರು.
ಇದನ್ನೂ ಓದಿ: ಬಿಜೆಪಿ ಗೋಹತ್ಯೆ ನಿಷೇಧ ಕಾಯ್ದೆ ಬೆಂಬಲಿಸಿದ್ದ ಹೆಚ್‌ಡಿಕೆಗೆ ತತ್ವವಿಲ್ಲ, ಮಾತಿನಲ್ಲಿ ನಿಲುವಿಲ್ಲ.. ಸಂಸದ ಡಿಕೆಸು