ಬೆಂಗಳೂರು: 3 ಪಾಲಿಕೆ ಚುನಾವಣೆ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಸಮಾಧಾನಕರವಾಗಿ ಕಾಣುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಸದಾಶಿವನಗರದ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಲಬುರಗಿ ಪಾಲಿಕೆ ಅಧಿಕಾರ ಹಿಡಿಯುತ್ತಿದ್ದೇವೆ. ಹು.ಧಾ ಸಮಾಧಾನಕರವಾಗಿದೆ. ಬೆಳಗಾವಿಯಲ್ಲಿ ನಾವು ಅಭ್ಯರ್ಥಿ ಹಾಕುತ್ತಿರಲಿಲ್ಲ. ಇವಾಗ ನಮ್ಮ ಅಭ್ಯರ್ಥಿಗಳು ಗೆದ್ದಿದ್ದಾರೆ. ಹು.ಧಾ ದಲ್ಲಿ ಹದಿನೈದು ವರ್ಷದಿಂದ ಅಧಿಕಾರದಲ್ಲಿ ಇಲ್ಲ. ಇವಾಗ ಇಂಪ್ರೂವ್ ಆಗಿದ್ದೇವೆ ಎಂದರು.
ಇಡೀ ಸರ್ಕಾರವೇ ಅಲ್ಲಿತ್ತು
ಬಿಜೆಪಿ ವೈಪಲ್ಯ ಜನರಿಗೆ ಮುಟ್ಟಿಸುವಲ್ಲಿ ವಿಫಲ ವಿಚಾರವಾಗಿ ಮಾತನಾಡಿ, ಇದು ಸ್ಥಳೀಯ ಸಂಸ್ಥೆ ಚುನಾವಣೆ. ಅಲ್ಲಿ ವೈಫಲ್ಯ ಗಳು ವರ್ಕೌಟ್ ಆಗಲ್ಲ. ಸ್ಥಳೀಯ ಸಮಸ್ಯೆಗಳ ಮೇಲೆ ಚುನಾವಣೆ ನಡೆಯುತ್ತೆ. ಮೀಸಲಾತಿ ಕೂಡ ಅವರ ಅನುಕೂಲಕ್ಕೆ ತಕ್ಕಂತೆ ಮಾಡಿಕೊಂಡಿದ್ದರು. ಸಿಎಂ, ಮಾಜಿ ಸಿಎಂ, ಕೇಂದ್ರ ಸಚಿವರು ಹು-ಧಾ ದಲ್ಲಿ ಬೀಡು ಬಿಟ್ಟಿದ್ದರು. ಹಾಗಾಗಿ ಅಧಿಕಾರ ಬಿಜೆಪಿಗೆ ಹೋಗಿದೆ. ನಮಗೂ ಸಮಧಾನದ ಫಲಿತಾಂಶ ಬಂದಿದೆ ಎಂದರು.
ಇರುವ ಸಂಪನ್ಮೂಲ ಬಳಸಿಕೊಂಡು ಪ್ರಚಾರ ಮಾಡಿದ್ದೇವೆ
ಕಾಂಗ್ರೆಸ್ ಹಿರಿಯ ನಾಯಕರು ಪ್ರಚಾರಕ್ಕೆ ಹೋಗದ ವಿಚಾರ ಕುರಿತು ಮಾತನಾಡಿ, ಆ ತರಹ ಏನಿಲ್ಲ, ನಾನು ಪ್ರಚಾರಕ್ಕೆ ಹೋಗಿದ್ದೆ. ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಪ್ರಚಾರಕ್ಕೆ ಹೋಗಿದ್ದೆ. ಕಲಬುರಗಿಯಲ್ಲಿ ಖಂಡ್ರೆ, ಪಾಟೀಲ್ ಪ್ರಚಾರ ಮಾಡಿದ್ದರು. ಕೊರೊನಾ ಇರೋದರಿಂದ ಪ್ರಚಾರ ಮಾಡಲು ಸಾಧ್ಯವಾಗಿಲ್ಲ. ಇರುವ ಸಂಪನ್ಮೂಲದಲ್ಲಿ ಪ್ರಚಾರ ಮಾಡಿದ್ದೇವೆ ಎಂದು ತಿಳಿಸಿದರು.
ಕೊಟ್ಟ ಭರವಸೆ ಈಡೇರಿಸಿದ್ದೇವೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಕಲ್ಯಾಣ ಕರ್ನಾಟಕ ನಿರ್ಲಕ್ಷ್ಯ ಮಾಡಿದ್ದಕ್ಕೆ ಬಿಜೆಪಿ ಗೆ ಜನರು ಪಾಠ ಕಲಿಸಿದ್ದಾರೆ. ಕಾಂಗ್ರೆಸ್ 371ಜೆ ತರುವ ಮೂಲಕ ಅಭಿವೃದ್ಧಿ ಮಾಡಿತ್ತು. ಆದರೆ, ಬಿಜೆಪಿ ಸರ್ಕಾರ ಅದನ್ನು ಮರೆತಿತ್ತು. ಇವತ್ತಿನ ಬಿಜೆಪಿ ಸೋಲು ರಾಜ್ಯದಲ್ಲಿ ಮುಂದುವರೆಯಲಿದೆ. ಹಣ ಬಲ, ತೋಳ್ಬಲದ ಮೇಲೆ ಬಿಜೆಪಿ ಚುನಾವಣೆ ಮಾಡಿದೆ. ಆದರೆ ಗೆಲ್ಲುವಲ್ಲಿ ವಿಫಲವಾಗಿದೆ. ನಾವು ಒಗ್ಗಟ್ಟಿನ ಪ್ರಚಾರ ಮಾಡಿದೆವು. ಇವತ್ತು ಪ್ರಚಾರದ ಫಲವಾಗಿ ಫಲಿತಾಂಶ ಬಂದಿದೆ. ಜನರಿಗೆ ಕೊಟ್ಟ ಭರವಸೆಯನ್ನು ನಾವು ಉಳಿಸಿಕೊಳ್ಳುತ್ತೇವೆ ಎಂದು ವಿವರಿಸಿದರು.
ಇದನ್ನೂ ಓದಿ : ಬೆಳಗಾವಿಯಲ್ಲಿ MES ಗೆ ತೀವ್ರ ಮುಖಭಂಗ.. ಬಿಜೆಪಿ ತೆಕ್ಕೆಗೆ ಕುಂದಾನಗರಿ