ETV Bharat / state

ಕೆಪಿಸಿಸಿ ಕಚೇರಿಯಲ್ಲಿ ಮುಗಿಬಿದ್ದ ಡಿಕೆಶಿ ಅಭಿಮಾನಿಗಳು... ಸುಸ್ತು ಹೊಡೆದ ನಾಯಕರು!

ಜಾರಿ ನಿರ್ದೇಶನಾಲಯದ ಬಂಧನದಿಂದ ಬೇಲ್​ ಪಡೆದು ಹೊರ ಬಂದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಅವರ ಬೆಂಬಲಿಗರು ನಿನ್ನೆ ಬೆಂಗಳೂರಿನಲ್ಲಿ ಅದ್ಧೂರಿ ಸ್ವಾಗತ ನೀಡಿ ಬರಮಾಡಿಕೊಂಡರು.

author img

By

Published : Oct 27, 2019, 8:35 AM IST

ಡಿಕೆಶಿ ಅಭಿಮಾನಿಗಳ ಅತಿರೇಕದ ವರ್ತನೆ

ಬೆಂಗಳೂರು: ನಗರದ ಕೆಪಿಸಿಸಿ ಕಚೇರಿಗೆ ಆಗಮಿಸಿದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ತಮ್ಮ ಅಭಿಮಾನಿಗಳ ಅಭಿಮಾನದ ಪರಾಕಾಷ್ಠೆಯ ದರ್ಶನವಾಗಿದೆ.

ನೂರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಡಿಕೆಶಿ ಕೆಪಿಸಿಸಿ ಕಚೇರಿ ಪ್ರವೇಶಿಸುವುದಕ್ಕೆ ಸಾಕಷ್ಟು ತೊಂದರೆ ಉಂಟುಮಾಡಿದರು. ವಿಪರೀತ ಅಭಿಮಾನ ವ್ಯಕ್ತಪಡಿಸುವ ಉತ್ಸಾಹದಲ್ಲಿ ಒಂದೆರಡು ಬಾರಿ ಡಿ.ಕೆ.ಶಿವಕುಮಾರ್ ಅವರನ್ನೇ ತಳ್ಳಾಡಿಬಿಟ್ಟರು.

ಡಿಕೆಶಿ ಅಭಿಮಾನಿಗಳ ಅಭಿಮಾನದ ಪರಾಕಾಷ್ಠೆ

ಕೆಪಿಸಿಸಿ ಕಚೇರಿ ಪ್ರವೇಶ ದ್ವಾರದಲ್ಲಿ ಎರಡು ಬಾರಿ ಹಾಗೂ ಕಚೇರಿ ಒಳಗೆ ಸುದ್ದಿಗೋಷ್ಠಿ ಆಯೋಜಿಸಿದ್ದ ಕೊಠಡಿಯಲ್ಲಿ ಮತ್ತೊಮ್ಮೆ ಡಿಕೆಶಿಗೆ ಮುಜುಗರ ಆಗುವ ಸನ್ನಿವೇಶ ಕಂಡು ಬಂದಿದ್ದು, ಕಿರಿದಾದ ಸ್ಥಳದಲ್ಲಿ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದೇ ಇದಕ್ಕೆ ಕಾರಣವಾಯಿತು.

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ಗದ್ದಲ ಮಾಡದಂತೆ ಮನವಿ ಮಾಡಿಕೊಂಡರೂ ಅಭಿಮಾನಿಗಳು ಇದಕ್ಕೆ ಸೊಪ್ಪು ಹಾಕಲಿಲ್ಲ. ಒಂದು ಹಂತದಲ್ಲಿ ಸುದ್ದಿಗೋಷ್ಠಿ ನಡೆಸುವುದಕ್ಕೂ ಕನಿಷ್ಠ ಮುಕ್ಕಾಲು ಗಂಟೆ ವಿಳಂಬ ಆಗುವಂತೆ ಅಭಿಮಾನಿಗಳು ನಡೆದುಕೊಂಡದ್ದು ಕಂಡುಬಂತು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಮಾಡಿದ ಮನವಿಗೂ ಕಾರ್ಯಕರ್ತರು ಬಗ್ಗಲಿಲ್ಲ. ನಿನ್ನೆ ಸಂಜೆ 5.30ಕ್ಕೆ ನಡೆಯಬೇಕಿದ್ದ ಸುದ್ದಿಗೋಷ್ಠಿ 7 ಗಂಟೆಯಾದರೂ ಆರಂಭವಾಗದಿರುವುದಕ್ಕೆ ಅವರ ಅಭಿಮಾನಿಗಳ ನೂಕಾಟ ತಳ್ಳಾಟವೇ ಕಾರಣವಾಯಿತು. ಬಲವಂತವಾಗಿ ಒಂದಿಷ್ಟು ಮಂದಿಯನ್ನು ಹೊರದಬ್ಬಿ ನಂತರ ಸುದ್ದಿಗೋಷ್ಠಿ ನಡೆಸುವಂತಹ ಅನಿವಾರ್ಯತೆ ನಾಯಕರಿಗೆ ಎದುರಾದದ್ದು ವಿಪರ್ಯಾಸವೇ ಸರಿ.

ಇದೇ ರೀತಿ ಇವರ ನಿವಾಸದ ಮುಂದೆ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ ಅಭಿಮಾನಿಗಳು ಡಿ.ಕೆ.ಶಿವಕುಮಾರ್ ಭೇಟಿಗೆ ಉತ್ಸುಕತೆ ತೋರಿಸಿದರು. ಇವರನ್ನು ನಿಯಂತ್ರಿಸುವುದೇ ಪೊಲೀಸರಿಗೆ ದೊಡ್ಡ ಸಾಹಸವಾಯಿತು.

Intro:newsBody:ಡಿಕೆ ಶಿವಕುಮಾರ್ ಅಭಿಮಾನಿಗಳ ಅತಿರೇಕದ ವರ್ತನೆಗೆ ಸಾಕ್ಷಿಯಾದ ಕೆಪಿಸಿಸಿ ಕಚೇರಿ

ಬೆಂಗಳೂರು: ನಗರದ ಕೆಪಿಸಿಸಿ ಕಚೇರಿಗೆ ಆಗಮಿಸಿದ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ತಮ್ಮ ಅಭಿಮಾನಿಗಳ ಅತಿರೇಕದ ವರ್ತನೆಯ ದರ್ಶನವಾಯಿತು.
ನೂರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಶಿವಕುಮಾರ್ ಅವರು ಕೆಪಿಸಿಸಿ ಕಚೇರಿ ಪ್ರವೇಶಿಸುವುದಕ್ಕೆ ಸಾಕಷ್ಟು ಉಂಟುಮಾಡಿದರು. ವಿಪರೀತ ವಿಮಾನ ವ್ಯಕ್ತಪಡಿಸುವ ಉತ್ಸಾಹದಲ್ಲಿ ಒಂದೆರಡು ಸಾರಿ ಶಿವಕುಮಾರ್ ಅವರನ್ನೇ ತಳ್ಳಾಡಿ ಬಿಟ್ಟರು. ಕೆಪಿಸಿಸಿ ಕಚೇರಿ ಪ್ರವೇಶ ದ್ವಾರದಲ್ಲಿ ಎರಡು ಸಾರಿ ಹಾಗೂ ಕಛೇರಿ ಒಳಗೆ ಸುದ್ದಿಗೋಷ್ಠಿ ಆಯೋಜಿಸಿದ್ದ ಕೊಠಡಿಯಲ್ಲಿ ಮತ್ತೊಮ್ಮೆ ಶಿವಕುಮಾರ್ ಓಣೆ ಅಲ್ಲಾಡಿದಂತೆ ಸನ್ನಿವೇಶ ಕಂಡು ಬಂತು. ಕಿರಿದಾದ ಸ್ಥಳದಲ್ಲಿ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದೆ ಇದಕ್ಕೆ ಕಾರಣವಾಯಿತು.
ಮಾಜಿ ಸಚಿವ ಡಿಕೆ ಶಿವಕುಮಾರ್ ಮಾಜಿ ಸಂಸದ ಡಿಕೆ ಸುರೇಶ್ ಸಾಕಷ್ಟು ಮನವಿ ಮಾಡಿಕೊಂಡರು ಅಭಿಮಾನಿಗಳು ಇದಕ್ಕೆ ಬೆಲೆ ಕೊಡಲಿಲ್ಲ. ಒಂದು ಹಂತದಲ್ಲಿ ಸುದ್ದಿಗೋಷ್ಠಿ ನಡೆಸುವುದಕ್ಕೂ ಕನಿಷ್ಠ ಮುಕ್ಕಾಲು ಗಂಟೆ ವಿಳಂಬ ಆಗುವಂತೆ ಅಭಿಮಾನಿಗಳು ನಡೆದುಕೊಂಡರು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಕಾರ್ಯಧ್ಯಕ್ಷ ಈಶ್ವರ್ ಕಂಡ್ರೆ ಮಾಡಿದ ಮನವಿಗೆ ಕಾರ್ಯಕರ್ತರು ಕಿಂಚಿತ್ ಬೆಲೆ ಕೊಡಲಿಲ್ಲ. ಇಂದು ಸಂಜೆ 5.30ಕ್ಕೆ ನಡೆಯಬೇಕಿದ್ದ ಸುದ್ದಿಗೋಷ್ಠಿ 7 ಗಂಟೆಯಾದರೂ ಆರಂಭವಾಗುವುದಕ್ಕೆ ಅವರ ಅಭಿಮಾನಿಗಳ ಅತಿರೇಕದ ವರ್ತನೆ ಕಾರಣವಾಯಿತು. ಬಲವಂತವಾಗಿ ಒಂದಿಷ್ಟು ಮಂದಿಯನ್ನು ಹೊರದಬ್ಬಿ ನಂತರ ಸುದ್ದಿಗೋಷ್ಠಿ ನಡೆಸುವಂತಹ ಅನಿವಾರ್ಯತೆ ನಾಯಕರಿಗೆ ಎದುರಾದದ್ದು ವಿಪರ್ಯಾಸ.
ಸುದ್ದಿಗೋಷ್ಠಿ ನಡೆಯಬೇಕಿದ್ದ ಕೊಠಡಿಯಲ್ಲಿ ಕಿಕ್ಕಿರಿದು ತುಂಬಿದ ಅಭಿಮಾನಿಗಳು ಅನಗತ್ಯವಾಗಿ ಘೋಷಣೆ ಕೂಗುವುದು ಚಪ್ಪಾಳೆ ತಟ್ಟುವುದು ಶಿವಕುಮಾರ್ ಅವರನ್ನು ಅಭಿನಂದಿಸಲು ತೆರಳುವ ಕಾರ್ಯ ಮಾಡಿ ಆಯೋಜಕರಿಗೆ ಮುಜುಗರ ಉಂಟುಮಾಡುವಂತೆ ಮಾಡಿದರು.
ಭಾರಿ ಸಂಖ್ಯೆಯಲ್ಲಿ ಆಗಮಿಸಿದ್ದ ಅಭಿಮಾನಿಗಳು ಶಿವಕುಮಾರ್ ಅವರ ಪ್ಲಕಾರ್ಟ್ ಹಿಡಿದು ಅಭಿಮಾನ ವ್ಯಕ್ತಪಡಿಸಿದರು. ಕೆಪಿಸಿಸಿ ಕಚೇರಿಯ ಮೊದಲ ಮಹಡಿಯಿಂದ ಭಾರಿ ಪ್ರಮಾಣದಲ್ಲಿ ಹೂವಿನ ಎಸಳನ್ನು ಎರಚಿ ಸ್ವಾಗತಿಸಲು ಮುಂದಾದರು. ಇದರಿಂದಾಗಿ ಸಾಕಷ್ಟು ಅದ್ವಾನಗಳು ಕೂಡ ಎದುರಾದವು. ಕೆಪಿಸಿಸಿ ಕಚೇರಿಯಿಂದ ಡಿಕೆಶಿ ತೆರಳುವಾಗ ಹೂವಿನ ಮಳೆಗರೆಯಲಾಯಿತು. ಇದರಿಂದಾಗಿ ಕೆಪಿಸಿಸಿ ಆವರಣದಲ್ಲಿ ದೊಡ್ಡ ಪ್ರಮಾಣದಲ್ಲಿ ಹೂವಿನ ತ್ಯಾಜ್ಯ ಸಂಗ್ರಹವಾಯಿತು. ಶಿವಕುಮಾರ್ ತೆರಳುತ್ತಿದ್ದಂತೆ ಅಲ್ಲಿಂದ ಹೊರಟ ಅಭಿಮಾನಿಗಳು ಕಂಡಕಂಡಲ್ಲಿ ಡಿಕೆಶಿ ಭಾವಚಿತ್ರವಿರುವ ಪ್ಲಕಾರ್ಟ್ ಎಸೆದು ಹೋಗಿದ್ದು ಗೋಚರಿಸಿತು.
ಇದೇ ರೀತಿ ಇವರ ನಿವಾಸದ ಮುಂದೆ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ ಅಭಿಮಾನಿಗಳು ಶಿವಕುಮಾರ್ ಭೇಟಿಗೆ ಉತ್ಸುಕತೆ ತೋರಿಸಿದರು. ಇವರನ್ನು ನಿಯಂತ್ರಿಸುವುದೇ ಪೊಲೀಸರಿಗೆ ದೊಡ್ಡ ಸಾಹಸವಾಯಿತು. ಕೊಟ್ಟರೆ ಶಿವಕುಮಾರ್ ಅಭಿಮಾನಿಗಳು ತಮ್ಮ ಅಭಿಮಾನ ಕ್ಕಿಂತ ಹಿಂದೂ ಅತಿರೇಕದ ವರ್ತನೆಯಿಂದ ಹೆಚ್ಚು ಗಮನ ಸೆಳೆದದ್ದು ವಿಪರ್ಯಾಸ.Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.