ETV Bharat / state

ರಾಜ್ಯಕ್ಕೂ ಬಂತು ಸಂಜೀವಿನಿ.. ಬಿಬಿಎಂಪಿಗೆ 1.60 ಲಕ್ಷ ಡೋಸ್ ಹಸ್ತಾಂತರ

ಮಹಾಮಾರಿ ಕೊರೊನಾ ವಿರುದ್ಧದ ಸಂಜೀವಿನಿಯಾಗಿ ಕೋವಿಶೀಲ್ಡ್​ ವ್ಯಾಕ್ಸಿನ್​ ರಾಜ್ಯಕ್ಕೆ ಪ್ರವೇಶಿಸಿದೆ. ​6,47,500 ವಯಲ್ಸ್ (ಬಾಟಲ್) ಕೋವಿಶೀಲ್ಡ್ ಲಸಿಕೆ ಸಂಗ್ರಹಗಾರಕ್ಕೆ ಬಂದಿವೆ.

author img

By

Published : Jan 12, 2021, 1:44 PM IST

Updated : Jan 12, 2021, 1:54 PM IST

kovid vaccine covishield comes to karnataka
ರಾಜ್ಯಕ್ಕೆ ಕೋವಿಶೀಲ್ಡ್​ ವ್ಯಾಕ್ಸಿನ್​ ಆಗಮನ

ಬೆಂಗಳೂರು: ಬಹು ನಿರೀಕ್ಷಿತ ಕೋವಿಡ್ ವ್ಯಾಕ್ಸಿನ್ ಕೋವಿಶೀಲ್ಡ್ ರಾಜ್ಯಕ್ಕೆ ಬಂದಿದೆ. ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ​6,47,500 ವಯಲ್ಸ್ (ಬಾಟಲ್) ಕೋವಿಶೀಲ್ಡ್ ಲಸಿಕೆ ಸಂಗ್ರಹಗಾರಕ್ಕೆ ಬಂದಿವೆ. ಉಳಿದ ಡೋಸ್​ಗಳು ನಾಳೆ ಬೆಳಗಾವಿಗೆ ಬರಲಿವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್​ ಮಾಹಿತಿ ನೀಡಿದ್ದಾರೆ.

ಸದ್ಯ ಬಿಬಿಎಂಪಿಗೆ 1.60 ಲಕ್ಷ ಡೋಸ್ ಹಸ್ತಾಂತರಿಸಲಾದ್ದು, ದಾಸಪ್ಪ ಆಸ್ಪತ್ರೆಯಲ್ಲಿ ಶೇಖರಿಸಿಡಲಾಗಿದೆ. ಪಾಲಿಕೆ ವ್ಯಾಪ್ತಿಯ 144 ಆಸ್ಪತ್ರೆಗಳಿಗೆ ನಾಳೆ ಅಥವಾ ನಾಡಿದ್ದು ಲಸಿಕೆ ವಿತರಿಸಲಾಗುವುದು ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಜನವರಿ 16 ರಿಂದ ಕೊರೊನಾ ವಾರಿಯರ್ಸ್​​ಗೆ ಈ ವ್ಯಾಕ್ಸಿನ್ ನೀಡಲಾಗುತ್ತದೆ.

ರಾಜ್ಯಕ್ಕೆ ಕೋವಿಶೀಲ್ಡ್​ ವ್ಯಾಕ್ಸಿನ್​ ಆಗಮನ

ಈ ಲಸಿಕೆಯನ್ನು ಮಾರಾಟ ಮಾಡುವಂತಿಲ್ಲ ಎಂದು ವಯಲ್ಸ್ ಮೇಲೆಯೇ ಬರೆಯಲಾಗಿದ್ದು, ಕೇವಲ ಕೊರೊನಾ ವಾರಿಯರ್ಸ್​ಗೆ ಮಾತ್ರ ಮೀಸಲಿರಿಸಲಾಗಿದೆ.

Last Updated : Jan 12, 2021, 1:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.