ETV Bharat / state

ಕೋವಿಡ್ ಟೆಸ್ಟ್ ವರದಿ ಇನ್ಮುಂದೆ ಬಿಬಿಎಂಪಿ ವೆಬ್​ಸೈಟ್​ನಲ್ಲೇ ಲಭ್ಯ: ಬಿಬಿಎಂಪಿ ಆಯುಕ್ತ - BBMP Commissioner Manjunath Prasad

ಬಿಬಿಎಂಪಿ ವೆಬ್​ಸೈಟ್​ನಲ್ಲಿ ಹೊಸ ಎಲಿಮೆಂಟ್ ಅಳವಡಿಸಲಾಗುತ್ತಿದೆ. ಯಾರು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುತ್ತಾರೋ ಅವರು 24 ಗಂಟೆಗಳ ಬಳಿಕ ಮನೆಯಲ್ಲೇ ಮೊಬೈಲ್ ನಂಬರ್ ಹಾಗೂ ಎಸ್​ಆರ್​ಎಫ್​ ಐಡಿ ನಮೂದಿಸುವ ಮೂಲಕ ವೆಬ್​ಸೈಟ್​ನಲ್ಲೇ ಪಾಸಿಟಿವ್ ಅಥವಾ ನೆಗೆಟಿವ್ ಇದೆಯೇ ಎಂದು ಗೊತ್ತಾಗಲಿದೆ.

ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್
ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್
author img

By

Published : Mar 18, 2021, 8:33 PM IST

ಬೆಂಗಳೂರು: ಕೋವಿಡ್ ಟೆಸ್ಟ್ ಮಾಡಿದ ಬಳಿಕ ಇನ್ನು ರಿಸಲ್ಟ್​ಗಾಗಿ ಕಾಯುವ ಅಗತ್ಯ ಇಲ್ಲ. ಈ ವಿಧಾನವನ್ನು ಸುಲಭಗೊಳಿಸಿರುವ ಬಿಬಿಎಂಪಿ, ತನ್ನ ವೆಬ್​​​ಸೈಟ್​ನಲ್ಲೇ ವರದಿ ತಿಳಿಸುಯುವ ವ್ಯವಸ್ಥೆ ಮಾಡಿದೆ.

ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್

ಈ ಬಗ್ಗೆ ಮಾತನಾಡಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಬಿಬಿಎಂಪಿ ವೆಬ್​ಸೈಟ್​ನಲ್ಲಿ ಹೊಸ ಎಲಿಮೆಂಟ್ ಅಳವಡಿಸಲಾಗುತ್ತಿದೆ. ಯಾರು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುತ್ತಾರೋ ಅವರು 24 ಗಂಟೆಗಳ ಬಳಿಕ ಮನೆಯಲ್ಲೇ ಮೊಬೈಲ್ ನಂಬರ್ ಹಾಗೂ ಎಸ್​ಆರ್​ಎಫ್​ ಐಡಿ ನಮೂದಿಸುವ ಮೂಲಕ ವೆಬ್​ಸೈಟ್​ನಲ್ಲೇ ಪಾಸಿಟಿವ್ ಅಥವಾ ನೆಗೆಟಿವ್ ಇದೆಯೇ ಎಂದು ಗೊತ್ತಾಗಲಿದೆ. ಬೇರೆ ಲ್ಯಾಬ್ ಅಥವಾ ಬೇರೆ ಕಡೆ ಹೋಗಿ ಪರಿಶೀಲಿಸುವ ಕಷ್ಟ ಪಡಬೇಕಿಲ್ಲ ಎಂದರು.

ಓದಿ:ಎಲೆಯಂತೆಯೇ ಇರುವ ಕೀಟ: ವಿಡಿಯೋ ವೈರಲ್

ಕೋವಿಡ್ ಟೆಸ್ಟ್ ಬಳಿಕ ನೇರವಾಗಿ ಮುಖ್ಯ ಕಚೇರಿಯಿಂದ ಆಯಾ ವಾರ್ಡ್​ನ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಾಹಿತಿ ರವಾನೆ ಆಗಲಿದೆ. ಈ ಮೊದಲು ಪಾಲಿಕೆ ಕೇಂದ್ರ ಕಚೇರಿಯಿಂದ ವಲಯವಾರು ಕೋವಿಡ್ ಸೆಂಟರ್‌ಗಳಿಗೆ ಮಾಹಿತಿ ತಲುಪುವುದು ತಡವಾಗ್ತಿತ್ತು. ಹೀಗಾಗಿ ನೇರವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗುವುದರಿಂದ ತಕ್ಷಣ ರೋಗಿಯನ್ನು ಕ್ವಾರಂಟೈನ್ ಮಾಡಲು ಹಾಗೂ ಸಂಪರ್ಕ ಪತ್ತೆ ಹಚ್ಚಲು ನೆರವಾಗಲಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.