ETV Bharat / state

ಕೊಡಗು ಜಿಲ್ಲೆಗೆ ಎಮರ್ಜೆನ್ಸಿ ಆಸ್ಪತ್ರೆ ಕೂಗು.. ನಟ- ನಟಿಯರಿಂದಲೂ ಸಾಥ್​..! - kannadanews

ಅತೀವೃಷ್ಟಿಯಿಂದಾಗಿ ಅಪಾರ ತೊಂದರೆ ಅನುಭವಿಸಿದ ಕೊಡಗು ಜಿಲ್ಲೆಗೆ ಎಮರ್ಜೆನ್ಸಿ ಆಸ್ಪತ್ರೆ ಬೇಕು ಎಂಬ ಕೂಗಿಗೆ ಸಿನಿಮಾ ನಟ - ನಟಿಯರು ದನಿಗೂಡಿಸಿದ್ದಾರೆ.

ಕೊಡಗು ಜಿಲ್ಲೆಗೆ ಎಮರ್ಜೆನ್ಸಿ ಆಸ್ಪತ್ರೆ ಬೇಕು
author img

By

Published : Jun 15, 2019, 12:00 PM IST

ಬೆಂಗಳೂರು: ಕಳೆದ ಬಾರಿ ಕೊಡಗು ಜಿಲ್ಲೆಗೆ ಮಳೆಯಿಂದಾಗಿ ಅಪಾರವಾದ ಹಾನಿ ಆಗಿತ್ತು. ಈಗ ಮಳೆಗಾಲ ಶುರು ಆಗುತ್ತಿರುವ ಹೊತ್ತಿನಲ್ಲೇ ಸ್ಯಾಂಡಲ್​ವುಡ್​ ಸ್ಟಾರ್​ಗಳಾದ ಶಿವರಾಜಕುಮಾರ್, ಕಿಚ್ಚ ಸುದೀಪ್, ರಶ್ಮಿಕಾ ಮಂದಣ್ಣ, ಹರ್ಷಿಕ ಪೂಣಚ್ಛ ಕೊಡಗಿಗೆ ಎಮರ್ಜೆನ್ಸಿ ಆಸ್ಪತ್ರೆ ಬೇಕು ಎಂಬ ಕೂಗಿಗೆ ದನಿಗೂಡಿಸಿದ್ದಾರೆ.

ಇದೇ ತರಹದ ಕೂಗು ಉತ್ತರ ಕನ್ನಡ ಜಿಲ್ಲೆಗೆ ಬೇಕು ಎಂದು ಕರೆ ನೀಡಿದಾಗ ಅದು ಕರ್ನಾಟಕದ ಸರ್ಕಾರದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಗಮನಕ್ಕೆ ಬಂದು ಅದರ ಬಗ್ಗೆ ಸೂಕ್ತ ಕ್ರಮದ ಬಗ್ಗೆ ಭರವಸೆ ಸಿಕ್ಕಿತ್ತು. ಕೊಡಗಿನ ನಿವಾಸಿಗಳಿಗೆ ತೊಂದರೆ ಆದರೆ ಮೈಸೂರು ಅಥವಾ ಮಂಗಳೂರಿಗೆ ಹೋಗಬೇಕು. ಆದರೆ, ಒಂದು ಎಮರ್ಜೆನ್ಸಿ ಆಸ್ಪತ್ರೆ ಇದ್ದರೆ, ಬಹಳ ಅನುಕೂಲ ಆಗುತ್ತದೆ ಎಂಬುದು ಈಗಿನ ಅಹವಾಲು. ಈ ದೇಶಕ್ಕಾಗಿ ಅನೇಕ ಕೊಡಗಿನ ವೀರಯೋಧರು ಹೋರಾಡಿದ್ದಾರೆ. ಕೊಡಗು ಜಿಲ್ಲೆಗೆ ಇಂತಹ ಎಮರ್ಜೆನ್ಸಿ ಆಸ್ಪತ್ರೆ ಅವಶ್ಯಕ. ಎಲ್ಲ ಸೌಲಭ್ಯಗಳಿರುವ ಒಂದು ಎಮರ್ಜೆನ್ಸಿ ಆಸ್ಪತ್ರೆ ಕೊಡಗು ಜಿಲ್ಲೆಗೆ ಬೇಗ ಬರಲಿ ಎಂದು ನಟ ಡಾ. ಶಿವರಾಜಕುಮಾರ್ ವಿನಂತಿಸಿಕೊಂಡಿದ್ದಾರೆ. ಕೊಡಗಿನ ಜನರಿಗಾಗಿ ನಾವಿದ್ದೇವೆ. ಅವರ ಅವಶ್ಯಕತೆಗಳಿಗೆ ನಾವು ಸ್ಪಂದಿಸೋಣ, ಎಮರ್ಜೆನ್ಸಿ ಆಸ್ಪತ್ರೆ ಬೇಗ ನೆರವೇರಲಿ, ನಾವೂ ಸಹ ಸಹಾಯ ಮಾಡೋಣ ಎಂದು ಟ್ವಿಟರ್​ ಮೂಲಕ ಕಿಚ್ಚ ಸುದೀಪ್ ಕರೆ ನೀಡಿದ್ದಾರೆ.

ನಟಿ ಹರ್ಷಿಕಾ ಪೂಣಚ್ಛ ಇತ್ತೀಚೆಗೆ ತನ್ನ ತಂದೆಗೆ ಆರೋಗ್ಯ ಸಮಸ್ಯೆ ಎದುರಾದಾಗ ಬೆಂಗಳೂರಿಗೆ ಬಂದು ಚಿಕಿತ್ಸೆ ಪಡೆಯಬೇಕಾಯಿತು ಎಂದು ಸ್ವಂತ ಅನುಭವ ಹೇಳಿಕೊಂಡಿದ್ದಾರೆ .ನಟಿ ರಶ್ಮಿಕಾ ಮಂದಣ್ಣ ಸಹ ಟ್ವೀಟ್ ಮೂಲಕ ಕರ್ನಾಟಕದ ಮುಖ್ಯಮಂತ್ರಿ ಅವರಿಗೆ ಎಮರ್ಜೆನ್ಸಿ ಆಸ್ಪತ್ರೆ ಕೊಡಗಿಗೆ ಬಹಳ ಅವಶ್ಯಕ ಎಂದು ಬೇಡಿಕೆ ಇಟ್ಟಿದ್ದಾರೆ.

ಕೊಡಗು ಜಿಲ್ಲೆಗೆ ಎಮರ್ಜೆನ್ಸೀ ಆಸ್ಪತ್ರೆ ಕಲಾವಿದರ ಬೆಂಬಲ

ಹೀಗೊಂದು ವಿಚಾರ ಸಾಮಾಜಿಕ ಜಾಲತಾನದಲ್ಲಿ ಶುರು ಆಗಿದೆ. ಕಳೆದ ಬಾರಿ ಕೊಡಗು ಜಿಲ್ಲೆಗೆ ಅಪಾರವಾದ ಹಾನಿ ಮಳೆಯಿಂದ ಆಗಿತ್ತು. ಕೋಟ್ಯಂತರ ನಷ್ಟ, ನೋವು ಸಹ ಆಗಿದ್ದು ಇನ್ನೂ ನೆನಪಿದೆ.

ಈಗ ಮಳೆಗಾಲ ಶುರು ಆಗುತ್ತಿರುವ ಹೊತ್ತಿನಲ್ಲೇ ಕನ್ನಡ ಸಿನಿಮಾದ ನಟರುಗಳಾದ ಡಾ ಶಿವರಾಜಕುಮಾರ್, ಕಿಚ್ಚ ಸುದೀಪ್, ರಶ್ಮಿಕ ಮಂದಣ್ಣ, ಹರ್ಷಿಕ ಪೂನಾಚ್ಚ ಕೊಡಗಿಗೆ ಎಮರ್ಜೆನ್ಸೀ ಆಸ್ಪತ್ರೆ ಬಗ್ಗೆ ಅವಶ್ಯಕತೆ ಇದೆ ಎಂದು ಕರೆ ನೀಡಿದ್ದಾರೆ.

ಇದೆ ತರಹದ ಕೂಗು ಉತ್ತರ ಕನ್ನಡ ಜಿಲ್ಲೆಗೆ ಬೇಕು ಎಂದು ಕರೆ ನೀಡಿದಾಗ ಅದು ಕರ್ನಾಟಕದ ಸರ್ಕಾರದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಗಮನಕ್ಕೆ ಬಂದು ಅದರ ಬಗ್ಗೆ ಸೂಕ್ತ ಕ್ರಮದ ಬಗ್ಗೆ ಭರವಸೆ ವ್ಯಕ್ತ ಆಗಿತ್ತು. ಕೊಡಗಿನ ನಿವಾಸಿಗಳಿಗೆ ಎಮರ್ಜೆನ್ಸೀ ಅಂದರೆ ಅವರು ಮೈಸೂರು ಅಥವಾ ಮಂಗಳೂರಿಗೆ ಹೋಗ ಬೇಕು. ಆದರೆ ಒಂದು ಎಮರ್ಜೆನ್ಸೀ ಆಸ್ಪತ್ರೆ ಇದ್ದರೆ ಬಹಳ ಅನುಕೂಲ ಎಂತ ಕಾಲದಲ್ಲೂ ಆಗುತ್ತದೆ ಎಂಬುದು ಈಗಿನ ಅಹವಾಲು ಕರ್ನಾಟಕ ಸರ್ಕಾರಕ್ಕೆ.

ಕೊಡಗಿನ ವೀರರು ಈ ದೇಶಕ್ಕಾಗಿ ಅನೇಕಾರಿದ್ದಾರೆ. ಕೊಡಗು ಜಿಲ್ಲೆಗೆ ಇಂತಹ ಎಮರ್ಜೆನ್ಸೀ ಆಸ್ಪತ್ರೆ ಅವಶ್ಯಕ. ಎಲ್ಲ ಸೌಲಭ್ಯಗಳಿರುವ ಒಂದು ಎಮರ್ಜೆನ್ಸೀ ಆಸ್ಪತ್ರೆ ಕೊಡಗು ಜಿಲ್ಲೆಗೆ ಬೇಗ ಬರಲಿ ಎಂದು ಡಾ ಶಿವರಾಜಕುಮಾರ್ ವಿನಂತಿಸಿಕೊಂಡಿದ್ದಾರೆ.

ಕೊಡಗಿನ ಜನರ ಹತ್ತಿರ ನಾವಿದ್ದೇವೆ. ಅವರ ಅವಶ್ಯಕತೆಗಳಿಗೆ ನಾವು ಸ್ಪಂದಿಸೋಣ, ಎಮರ್ಜೆನ್ಸೀ ಆಸ್ಪತ್ರೆ ಬೇಗ ನೆರವೇರಲಿ ನಾವು ಸಹ ಸಹಾಯ ಮಾಡೋಣ ಎಂದಿದ್ದಾರೆ ಕಿಚ್ಚ ಸುದೀಪ್ ಟ್ವೀಟ್ ಮೂಲಕೆ.

ಹರ್ಷಿಕ ಪೂನಚ್ಚ ಇತ್ತೀಚಿಗೆ ತನ್ನ ತಂದೆಗೆ ಆರೋಗ್ಯ ಸಮಸ್ಯೆ ಎದುರಾದಾಗ ಬೆಂಗಳೂರಿಗೆ ಬಂದು ಚಿಕಿತ್ಸೆ ಪಡೆಯಬೇಕಾಯಿತು ಎಂದು ಸ್ವಂತ ಅನುಭಾವ ಹೇಳಿಕೊಂಡಿದ್ದಾರೆ.

ರಶ್ಮಿಕ ಮಂದಣ್ಣ ಸಹ ಟ್ವೀಟ್ ಮೂಲಕ ಕರ್ನಾಟಕದ ಮುಖ್ಯ ಮಂತ್ರಿ ಅವರಿಗೆ ಎಮರ್ಜೆನ್ಸೀ ಆಸ್ಪತ್ರೆ ಕೊಡಗಿಗೆ ಬಹಳ ಅವಶ್ಯಕ ಎಂದು ಬೇಡಿಕೆ ಇಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.