ETV Bharat / state

ಕೆ.ಜಿ.ನಗರ ಡ್ರಗ್ಸ್​ ಪ್ರಕರಣ: ಸದಾಶಿವನಗರ ಪೊಲೀಸ್​ ಕಾನ್ಸ್​ಟೇಬಲ್​ ಬಂಧನ!

KG Nagar drugs case  Sadashivnagar police constable Prabhaka arrest  CCB  durg case  ಕೆಜಿ ನಗರ ಡ್ರಗ್ಸ್ ಕೇಸ್  ಸದಾಶಿವನಗರ ಪೊಲೀಸ್ ಕಾನ್ಸ್​ಟೇಬಲ್ ಪ್ರಭಾಕರ್ ಬಂಧನ  ಸಿಸಿಬಿಯಿಂದ ಡ್ರಗ್ಸ್ ಆರೋಪಿಗಳ ಬಂಧನ  KG Nagar drugs case: constable Prabhaka arrest
ಬಂಧನವಾಗಿರುವ ಸದಾಶಿವ ನಗರ ಪೊಲೀಸ್​ ಕಾನ್ಸ್​ಟೇಬಲ್​ ಪ್ರಭಾಕರ್​
author img

By

Published : Nov 20, 2020, 10:08 AM IST

Updated : Nov 20, 2020, 11:14 AM IST

10:05 November 20

ಬೆಂಗಳೂರಿನ ಕೆ.ಜಿ. ನಗರ ಡ್ರಗ್ಸ್ ಪ್ರಕರಣದ ಆರೋಪಿಗಳಿಗೆ ಸಹಾಯ ಮಾಡ್ತಿದ್ದ ಸದಾಶಿವ ನಗರ ಪೊಲೀಸ್​ ಠಾಣೆ ಕಾನ್ಸ್​ಟೇಬಲ್​ನನ್ನು ಸಿಸಿಬಿ ಪೊಲೀಸರು​ ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.

ಬೆಂಗಳೂರು: ಡ್ರಗ್ಸ್ ಪ್ರಕರಣದ ಆರೋಪಿಗಳಿಗೆ ಸಹಾಯ ಮಾಡುತ್ತಿದ್ದ ಕಾನ್ಸ್‌ಟೇಬಲ್​ನನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.  

ಡ್ರಗ್ಸ್​ ಪ್ರಕರಣದ ಆರೋಪಿಗಳಾದ ಸುನೇಶ್, ಹೇಮಂತ್ ಸೇರಿದಂತೆ ಹಲವು ಆರೋಪಿಗಳಿಗೆ ಸಹಾಯ ಮಾಡುತ್ತಿದ್ದ ಸದಾಶಿವನಗರ ಪೊಲೀಸ್ ಕಾನ್ಸ್‌ಟೇಬಲ್ ಪ್ರಭಾಕರ್​ನನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಡ್ರಗ್ ಕೇಸ್​ನಲ್ಲಿ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಪ್ರಮುಖ ಆರೋಪಿಗೆ ಸಹಾಯ ಮಾಡಿದ ಆರೋಪದಲ್ಲಿ ಬಂಧನವಾಗಿದ್ದಾನೆ. ಅತ್ತ ಇದೇ ಪ್ರಕರಣದ ಪ್ರಮುಖ ಆರೋಪಿ ಹೇಮಂತ್​ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರೆ, ಇತ್ತ ಅದೇ ಪ್ರಕರಣದ ಆರೋಪಿಗಳಿಗೆ ಕಾನ್ಸ್​ಟೇಬಲ್​ ಪ್ರಭಾಕರ ಸಹಾಯ ಮಾಡುತ್ತಿರುವುದರ ಬಗ್ಗೆ ಸಿಸಿಬಿಗೆ ತಿಳಿದಿದೆ. ಈ ಕಾರಣಕ್ಕೆ ಸಿಸಿಬಿ ಅಧಿಕಾರಿಗಳು ಪ್ರಭಾಕರ್​ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.  

ಸದ್ಯ ಸಿಸಿಬಿ ಕಚೇರಿಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಪ್ರಭಾಕರನನ್ನು ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಪ್ರಭಾಕರ್ ಸದಾಶಿವನಗರ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಟೆಕ್ನಿಕಲ್​ನಲ್ಲಿ ಬಹಳ ಚುರುಕಾಗಿದ್ದ. ಇದನ್ನೇ ದುರುಪಯೋಗ ಮಾಡಿಕೊಂಡ ಪ್ರಭಾಕರ್​, ಡ್ರಗ್ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಿಗೆ ಡ್ರಗ್ ರಿಸೀವ್ ಮಾಡಬೇಕಾದ ಲೋಕೇಷನ್, ಯಾರನ್ನು ಎಲ್ಲಿ ಮೀಟ್ ಆಗಬೇಕು, ಪೋಸ್ಟ್ ಮೂಲಕ ಬರುತ್ತಿದ್ದ ಡ್ರಗ್​ನ್ನು ಪೊಲೀಸರು ಮತ್ತು ಜನ ಇಲ್ಲದ ಪ್ರದೇಶಗಳನ್ನ ಗುರುತಿಸಿ ಮಾಹಿತಿ ತಿಳಿಸುತ್ತಿದ್ದ. ನಂತರ ಆರೋಪಿ ಹೇಮಂತ್ ಟೀಂ ಪೋಸ್ಟ್‌ಮೂಲಕ ಬಂದ ಡ್ರಗ್ ಅನ್ನು ಖರೀದಿ‌ ಮಾಡುತ್ತಿದ್ದರು.  

ಹಿನ್ನೆಲೆ: ಚಾಮರಾಜಪೇಟೆಯ ವಿದೇಶಿ ಅಂಚೆ ಕಚೇರಿಯಲ್ಲಿ ಡ್ರಗ್ ಪಾರ್ಸಲ್ ಯಾವಾಗಲೂ ಬರುತ್ತಿತ್ತು. ಅನುಮಾನಗೊಂಡು ಪೊಲೀಸರು ನೋಡಿದಾಗ ಕಳೆದವಾರ ಡ್ರಗ್ ಸಮೇತ ಸುಜಯ್​ನನ್ನು ಬಂಧಿಸಿದ್ದರು. ಇದೇ ವೇಳೆ, ಪ್ರಮುಖ ಆರೋಪಿ ಹೇಮಂತ್ ಕೊಡಗಿಗೆ ಎಸ್ಕೇಪ್​ ಆಗಿದ್ದ. ಅಲ್ಲಿಂದ ಮೊದಲು ಮಾಜಿ ಸಚಿವನ ಪುತ್ರ ದರ್ಶನ್​ಗೆ ಕರೆ ಮಾಡಿದ್ದನು. ಈ ವೇಳೆ ದರ್ಶನ್​, ನೀನು ಹಾವೇರಿಗೆ ಬಾ. ತೊಂದರೆಯಾಗದಂತೆ ನೋಡಿಕೊಳ್ಳತ್ತೇನೆಂದು ಹೇಮಂತ್​ಗೆ ಭರವಸೆ ನೀಡಿದ್ದ. ನಂತರ ರಾಣೆಬೆನ್ನೂರಿನ ವಸತಿ ಗೃಹದಲ್ಲಿ ಹೇಮಂತ್​ಗೆ ದರ್ಶನ್​ ಆಶ್ರಯ ನೀಡಿದ್ದ. ಆಶ್ರಯ ನೀಡಿದ ಎಲ್ಲ ಮಾಹಿತಿ ಪಡೆದು ಪೊಲೀಸರು ದರ್ಶನ್ ಲಮಾಣಿ‌ಯನ್ನು ಬಂಧಿಸಿದ್ದರು.  

ಪೊಲೀಸ್ ಇಲಾಖೆಯಲ್ಲಿ ಇದ್ದು, ಅಕ್ರಮಕ್ಕೆ ಸಹಾಯ ಮಾಡಿದ ಕಾನ್ಸ್‌ಟೇಬಲ್ ಪ್ರಭಾಕರನನ್ನು ಸಹ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 

Last Updated : Nov 20, 2020, 11:14 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.