ETV Bharat / technology

ಭಾರತದ ಮಾರುಕಟ್ಟೆಗೆ ಪವರ್​ಫುಲ್​ ಪ್ರೊಸೆಸರ್​ ಸ್ಮಾರ್ಟ್​ಫೋನ್​ ಪರಿಚಯಿಸಲಿದೆ ರಿಯಲ್​ಮಿ

Realme GT 7 Pro: ರಿಯಲ್​ಮಿ ಕಂಪನಿ ಭಾರತದಲ್ಲಿ ಪವರ್​ಫುಲ್​ ಪ್ರೊಸೆಸರ್​ ಹೊಂದಿರುವ ಸ್ಮಾರ್ಟ್​ಫೋನ್​ ಅನ್ನು ಶೀಘ್ರ ಪರಿಚಯಿಸಲಿದೆ.

REALME GT 7 PRO FEATURES  REALME GT 7 PRO LAUNCH  REALME GT 7 PRO SPECIFICATIONS  REALME GT 7 PRO PRICE IN INDIA
ರಿಯಲ್​ಮಿ (Realme)
author img

By ETV Bharat Tech Team

Published : 2 hours ago

Realme GT 7 Pro: ಸ್ಮಾರ್ಟ್​ಫೋನ್​ ತಯಾರಿಕಾ ಕಂಪನಿ ರಿಯಲ್​ಮಿ ಹೊಸ ಮೊಬೈಲ್​ ಹೊರತರುತ್ತಿದೆ. ರಿಯಲ್​ಮಿ ಜಿಟಿ ಪ್ರೊ ಎಂಬ ಹೆಸರಿನ ಈ ಮೊಬೈಲ್​ ಸ್ನಾಪ್​ಡ್ರಾಗನ್​ 8 ಎಲೈಟ್​ ಪ್ರೊಸೆಸರ್​ ಒಳಗೊಂಡಿದೆ. ಇದು ಪವರ್​ಫುಲ್​ ಪ್ರೊಸೆಸರ್​ನೊಂದಿಗೆ ಭಾರತದಲ್ಲಿ ಬಿಡುಗಡೆಯಾಗುವ ಮೊದಲ ಸ್ಮಾರ್ಟ್​ಫೋನ್​ ಆಗಿದೆ.

ಇನ್ನು ಈ ಫೋನ್ ಆರ್ಟಿಫಿಶಿಯಲ್​ ಇಂಟೆಲಿಜೆನ್ಸ್​ಗೆ ಸಂಬಂಧಿಸಿದ ಫೀಚರ್​ಗಳನ್ನು ನೀಡುತ್ತದೆ. ಕೆಲವು ಸಮಯದಿಂದ ಈ ಫೋನ್ ಬಿಡುಗಡೆಯ ಬಗ್ಗೆ ವದಂತಿಗಳಿದ್ದವು. ಆದ್ರೆ ಈಗ ಕಂಪನಿ ಅದರ ಬಿಡುಗಡೆಯ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದೆ. ಈ ರಿಯಲ್​ಮಿ ಹೊಸ ಮಾಡೆಲ್​ ಸ್ಮಾರ್ಟ್‌ಫೋನ್ ನವೆಂಬರ್ 26ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿದು ಬಂದಿದೆ.

Realme GT Pro ವಿಶೇಷತೆ:

  • ಡಿಸ್​ಪ್ಲೇ: 6.78 ಇಂಚು
  • ರಿಫ್ರೆಶ್ ರೇಟ್​: 120Hz
  • ಪೀಕ್​ ಬ್ರೈಟ್​ನೆಸ್​: 6000 ನಿಟ್ಸ್
  • ರೆಸಲ್ಯೂಶನ್: 2,780 x 1,264 ಪಿಕ್ಸೆಲ್ಸ್​
  • ಬ್ಯಾಟರಿ ಸಾಮರ್ಥ್ಯ: 6,500mAh
  • RAM: 12GB
  • ಸ್ಟೋರೇಜ್​: 256GB
  • ರಿಯರ್​ ಕ್ಯಾಮೆರಾ: 50 ಮೆಗಾ ಪಿಕ್ಸೆಲ್ + 8 ಮೆಗಾ ಪಿಕ್ಸೆಲ್ + 50 ಮೆಗಾ ಪಿಕ್ಸೆಲ್
  • 120W ವೈರ್ಡ್ ಫಾಸ್ಟ್ ಚಾರ್ಜಿಂಗ್
  • ಓಎಸ್: ಆಂಡ್ರಾಯ್ಡ್
  • ಪ್ರೊಸೆಸರ್​: 8 ಎಲೈಟ್​ ಸ್ನಾಪ್​ಡ್ರಾಗನ್​
  • ಕ್ಯಾಮೆರಾ: ಈ ಫೋನ್ ಟ್ರಿಪಲ್ ರಿಯರ್​ ಕ್ಯಾಮೆರಾ 50 MP ಹೊಂದಿದೆ. ಇದು ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ 16-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಸಹ ಹೊಂದಿದೆ.

ಬಣ್ಣದ ಆಯ್ಕೆಗಳು:

  • ಟೈಟಾನಿಯಂ
  • ಲೈಟ್ ಡೊಮೇನ್
  • ವೈಟ್​ ಕಲರ್​

ಬೆಲೆ: 12GB+256GB ಸ್ಟೋರೇಜ್ ರೂಪಾಂತರದ ಬೆಲೆ ರೂ.43,800 ಆಗಿದೆ.

ಇವುಗಳ ಜೊತೆಗೆ AMO ಮೋಡ್ ಡೆಬ್ಲರ್, AI ಟೆಲಿಫೋಟೋ ಅಲ್ಟ್ರಾ ಕ್ಲಾರಿಟಿ, AI ಗೇಮ್ ಸೂಪರ್ ರೆಸಲ್ಯೂಶನ್ ಮುಂತಾದ ವೈಶಿಷ್ಟ್ಯಗಳನ್ನು ಈ ಮೊಬೈಲ್‌ನಲ್ಲಿ ಕಂಪನಿ ಒದಗಿಸಲಿದೆ. ಇದು ಅಲ್ಟ್ರಾ-ಸಾನಿಕ್ ಫಿಂಗರ್‌ಪ್ರಿಂಟ್ ಸೆನ್ಸಾರ್​ ಸಹ ಹೊಂದಿರುತ್ತದೆ. ಇದನ್ನು 8GB, 16GB ಮತ್ತು 24GB RAM ರೂಪಾಂತರಗಳೊಂದಿಗೆ ಕ್ರಮವಾಗಿ 128, 256, 512 ಮತ್ತು 1TB ಸ್ಟೋರೇಜ್ ರೂಪಾಂತರಗಳಲ್ಲಿ ತರಲಾಗುತ್ತಿದೆ. ಇದು ಆಂಡ್ರಾಯ್ಡ್ 15 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಮೊಬೈಲ್ ಡಸ್ಟ್​ ಮತ್ತು ವಾಟರ್​ ರೆಸಿಸ್ಟಂಟ್ಸ್​ನಲ್ಲಿ ಲಭ್ಯವಿರುತ್ತದೆ. ಈ ಫೋನ್ IP68/69 ಪ್ರಮಾಣೀಕರಣದೊಂದಿಗೆ ಬರುವ ಸಾಧ್ಯತೆಗಳಿವೆ.

ಇದನ್ನೂ ಓದಿ: ಐಫೋನ್​ ಚಾರ್ಜ್​ ಮಾಡುವಾಗ ಸ್ಫೋಟ: ಮಹಿಳೆಗೆ ಗಂಭೀರ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.