ETV Bharat / technology

ನಿಮ್ಮ ಮೊಬೈಲ್​ ಇಂಟರ್ನೆಟ್​ ಸ್ಲೋ ಆಗಿದೆಯೇ? ಸ್ಪೀಡ್ ಮಾಡಲು ಇಲ್ಲಿದೆ ಸಿಂಪಲ್​ ಟಿಪ್ಸ್​

How To Increase Internet Speed: ನಿಮ್ಮ ಸ್ಮಾರ್ಟ್​ಫೋನ್​ನ ಇಂಟರ್ನೆಟ್​ ವೇಗ ಕಡಿಮೆಯಾಗಿದೆಯೇ?. ಹಾಗಿದ್ದರೆ, ಈ ಮಾರ್ಗವನ್ನು ಅನುಸರಿಸಿ.

HOW TO BOOST INTERNET SPEED  HOW TO SPEED UP YOUR INTERNET  WAYS TO BOOST YOUR DATA SPEED
ನಿಮ್ಮ ಮೊಬೈಲ್​ ಇಂಟರ್ನೆಟ್​ ಸ್ಲೋ ಆಗಿದೆಯೇ? (Getty Images)
author img

By ETV Bharat Tech Team

Published : 2 hours ago

How To Increase Internet Speed: ಪ್ರಸ್ತುತ 5G ಸೇವೆಗಳು ದೇಶದಲ್ಲಿ ಉತ್ತಮವಾಗಿ ಲಭ್ಯವಿದೆ. ಇಂತಹ ವೇಗದ ಇಂಟರ್​ನೆಟ್ ಸೇವೆಗಳಿಗೆ ಒಗ್ಗಿಕೊಂಡವರು ನೆಟ್ ಸ್ಲೋ ಆದ್ರೆ ಸಹಿಸಿಕೊಳ್ಳುವುದಿಲ್ಲ. ನೀವೂ ಸಹ ಈ ಸಮಸ್ಯೆಯನ್ನು ಎದುರಿಸುತ್ತಿದ್ದೀರಾ? ಹೌದು ಎಂದಾದರೆ ಚಿಂತಿಸಬೇಡಿ.

  1. ಫೋನ್ ರಿಸ್ಟಾರ್ಟ್​ ಮಾಡಿ​: ಕೆಲವೊಮ್ಮೆ ಇಂಟರ್ನೆಟ್ ವೇಗ ಅನಿರೀಕ್ಷಿತವಾಗಿ ಕಡಿಮೆಯಾಗುತ್ತದೆ. ಆಗ ನೀವು ಮೊದಲು ನಿಮ್ಮ ಫೋನ್ ಅನ್ನು ರಿಸ್ಟಾರ್ಟ್​ ಮಾಡಿ. ಈ ರೀತಿ ಮಾಡುವುದರಿಂದ ಫೋನ್‌ನಲ್ಲಿರುವ ಹೆಚ್ಚಿನ ಸಮಸ್ಯೆಗಳು ಪರಿಹಾರವಾಗುತ್ತವೆ. ಇಂಟರ್ನೆಟ್ ಸ್ಪೀಡ್​ ಹೆಚ್ಚಾಗುತ್ತದೆ.
  2. ಬ್ಯಾಕ್​ಗ್ರೌಂಡ್​ ಆಪ್ಸ್ ಕ್ಲೋಸ್​ ಮಾಡಿ: ನಿಮ್ಮ ಫೋನ್‌ನಲ್ಲಿ ಅನೇಕ ಆ್ಯಪ್‌ಗಳು ಬ್ಯಾಗ್ರೌಂಡ್‌ನಲ್ಲಿ ರನ್ ಆಗುತ್ತಿರುತ್ತವೆ. ಅವು ನಿಮ್ಮ ಇಂಟರ್ನೆಟ್ ಅನ್ನು ಸೈಲೆಂಟ್​ ಆಗಿಯೇ ನುಂಗುತ್ತಿರುತ್ತವೆ. ಫೋನ್​ನ ಇಂಟರ್ನೆಟ್​ ವೇಗ ಕಡಿಮೆ ಮಾಡುತ್ತವೆ. ಅನಗತ್ಯ ಆ್ಯಪ್​ಗಳನ್ನು ಕ್ಲೋಸ್ ಮಾಡುವುದು ಉತ್ತಮ ಅಥವಾ ಅನ್​ಇನ್​ಸ್ಟಾಲ್​ ಮಾಡುವುದು ಒಳ್ಳೆಯದು.
  3. ಕ್ಯಾಶ್‌ ಕ್ಲೀನ್ ಮಾಡಿ​: ನಾವು ಯಾವುದೇ ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ಗಳನ್ನು ತೆರೆದಾಗ ನಾವು ಸಾಕಷ್ಟು ಡೇಟಾ ಉಪಯೋಗಿಸಿರುತ್ತೇವೆ. ಆದರೆ ನಮಗೆ ಗೊತ್ತಿಲ್ಲದೆಯೇ ಫೋನ್‌ನಲ್ಲಿ ಬಹಳಷ್ಟು ಕ್ಯಾಶ್ (Cache) ಸ್ಟೋರ್​ ಆಗಿರುತ್ತದೆ. ಇದರಿಂದಾಗಿ ಲೋಡಿಂಗ್ ಟೈಂ ಸ್ಪೀಡ್​ ಆಗುತ್ತದೆ. ಆಗ ಇಂಟರ್ನೆಟ್ ವೇಗ ಕಡಿಮೆಯಾಗುತ್ತದೆ. ಆದ್ದರಿಂದ ಕಾಲಕಾಲಕ್ಕೆ ಫೋನ್‌ನ ಕುಕೀಗಳು ಮತ್ತು ಕ್ಯಾಶ್ ಕ್ಲೀನ್​ ಮಾಡುತ್ತಲೇ ಇರಬೇಕು.
  4. ಫ್ಲೈಟ್ ಮೋಡ್ ಬಳಕೆ: ಇಂಟರ್ನೆಟ್ ಸ್ಪೀಡ್​ ತುಂಬಾ ಸ್ಲೋ ಆದಾಗ ನಿಮ್ಮ ಮೊಬೈಲ್‌ನ ಫ್ಲೈಟ್ ಮೋಡ್ ಆನ್ ಮಾಡಿ. ಕೆಲ ಸೆಕೆಂಡ್​ಗಳ ನಂತರ ಅದನ್ನು ಮತ್ತೆ ಆಫ್ ಮಾಡಿ. ಇದು ನಿಮ್ಮ ಇಂಟರ್ನೆಟ್ ಕನೆಕ್ಷನ್​ ರಿಸೆಟ್​ ಆಗುತ್ತದೆ. ಆಗ ಇಂಟರ್ನೆಟ್ ವೇಗ ಆಟೋಮೆಟಿಕ್​ ಆಗಿ ಹೆಚ್ಚಾಗುತ್ತದೆ.
  5. ಡೇಟಾ ಆಫ್ ಮಾಡಿ: ನೆಟ್ ಸ್ಪೀಡ್ ತುಂಬಾ ಕಡಿಮೆಯಿದ್ದರೆ, ನಿಮ್ಮ ಮೊಬೈಲ್ ಡೇಟಾವನ್ನು ಒಮ್ಮೆ ಆಫ್ ಮಾಡಿ. ಸ್ವಲ್ಪ ಸಮಯದವರೆಗೆ ಅದನ್ನು ಹಾಗೆಯೇ ಇರಿಸಿ. ನಂತರ ಡೇಟಾವನ್ನು ಮತ್ತೆ ಆನ್ ಮಾಡಿ. ಆಗ ಸ್ಮಾರ್ಟ್​ಫೋನ್​ನ ಇಂಟರ್ನೆಟ್ ವೇಗ ಹೆಚ್ಚಾಗುವ ಸಾಧ್ಯತೆ ಇದೆ.
  6. ಫೋನ್ ಅಪ್​ಡೇಟ್​: ಕೆಲವರು ಮೊಬೈಲ್ ಫೋನ್ ಅನ್ನು ಕಾಲಕಾಲಕ್ಕೆ ಅಪ್​ಡೇಟ್​ ಮಾಡದೇ ಹಾಗೆಯೇ ಬಳಸುತ್ತಾರೆ. ಇದು ಇಂಟರ್ನೆಟ್ ಅನ್ನು ನಿಧಾನಗೊಳಿಸುವ ಅವಕಾಶವೂ ಹೊಂದಿರುತ್ತದೆ. ಆದ್ದರಿಂದ ನೀವು ನಿಮ್ಮ ಮೊಬೈಲ್ ಡಿವೈಸ್​ ಅನ್ನು ಕಾಲಕಾಲಕ್ಕೆ ಅಪ್​ಡೇಟ್​ ಮಾಡಬೇಕು. ಆಗ ನಿಮ್ಮ ಇಂಟರ್ನೆಟ್​ ವೇಗ ಹೆಚ್ಚಾಗುತ್ತದೆ.
  7. ಡಿಎನ್​ಎಸ್​ ಸರ್ವರ್: ಡಿಎನ್​ಎಸ್​ ಸರ್ವರ್ ಬದಲಾಯಿಸುವ ಮೂಲಕ ನೀವು ನಿಮ್ಮ ಇಂಟರ್ನೆಟ್​ ವೇಗ ಹೆಚ್ಚಿಸಬಹುದು.
  8. ಡೇಟಾ ಸೇವಿಂಗ್​ ಮೋಡ್: ಎಲ್ಲಾ ಇತ್ತೀಚಿನ ಫೋನ್‌ಗಳಲ್ಲಿ ಡೇಟಾ ಸೇವಿಂಗ್ ಮೋಡ್ ಎಂಬ ಆಯ್ಕೆ ಇರುತ್ತದೆ. ಇದನ್ನು ಸಕ್ರಿಯಗೊಳಿಸುವುದರಿಂದ ಇಂಟರ್ನೆಟ್ ವೇಗ ಹೆಚ್ಚಾಗುತ್ತದೆ.
  9. ಸ್ಟಾಪ್​ ಆಟೋ ಅಪ್​ಡೇಟ್​: ನಿಮ್ಮ ಫೋನ್‌ನಲ್ಲಿ ಆಟೋ ಅಪ್​ಡೇಟ್ ವೈಶಿಷ್ಟ್ಯವನ್ನು ಆನ್​ ಮಾಡಿದ್ರೆ ಅದು ನಿಮ್ಮ ಇಂಟರ್ನೆಟ್​ ಬಳಕೆಯನ್ನು ಸದ್ದಿಲ್ಲದೆ ಉಪಯೋಗಿಸುತ್ತಿರುತ್ತದೆ. ಹೀಗಾಗಿ ಅಪ್ಲಿಕೇಶನ್‌ಗಳು ಕಾಲಕಾಲಕ್ಕೆ ಅಪ್​ಡೇಟ್​ ಆಗುತ್ತಲೇ ಇರುತ್ತದೆ. ಆಗ ಇಂಟರ್ನೆಟ್ ವೇಗ ಕಡಿಮೆಯಾಗುತ್ತದೆ. ಆದ್ದರಿಂದ ನಿಮ್ಮ ಫೋನ್‌ನಲ್ಲಿ ಆಟೋ-ಅಪ್‌ಡೇಟ್ ಆಯ್ಕೆಯನ್ನು ಬಂದ್​ ಮಾಡಿ. ಇದು ನಿಮ್ಮ ಇಂಟರ್ನೆಟ್​ ವೇಗವನ್ನು ಆಟೋಮೆಟಿಕ್​ ಆಗಿ ಹೆಚ್ಚಿಸುತ್ತದೆ.

ಇದನ್ನೂ ಓದಿ: ಜಿಯೋ, ಏರ್‌ಟೆಲ್‌ಗೆ ಠಕ್ಕರ್​ ನೀಡಲು ಸಿದ್ಧವಾಗುತ್ತಿದೆ ಬಿಎಸ್​ಎನ್​ಎಲ್; ಸಂಕ್ರಾಂತಿಗೆ 5ಜಿ ಸೇವೆ ಆರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.