Thala For A Reason: ಅಮೆರಿಕದಲ್ಲಿ ನಡೆದ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಭರ್ಜರಿ ಗೆಲುವು ಸಾಧಿಸಿ ಎರಡನೇ ಬಾರಿಗೆ ಅಧಿಕಾರದ ಗದ್ದುಗೆಗೇರಿದ್ದಾರೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಟ್ರಂಪ್, ಕಮಲಾ ಹ್ಯಾರಿಸ್ ಅವರ ಕಠಿಣ ಸ್ಪರ್ಧೆಯನ್ನು ಮೆಟ್ಟಿನಿಂತು 47ನೇ ಅಧ್ಯಕ್ಷರಾಗಿ ಗೆಲುವು ಸಾಧಿಸಿದ್ದಾರೆ. ಟ್ರಂಪ್ ಗೆಲುವಿನ ಬೆನ್ನಲ್ಲೇ ಎಂ.ಎಸ್ ಧೋನಿ ಅಭಿಮಾನಿಗಳು 'ಥಲಾ ಫಾರ್ ಎ ರೀಸನ್' ಎಂಬ ಮೆಮ್ಸ್ಗಳನ್ನು ಹಂಚಿಕೊಳ್ಳುತ್ತಿದ್ದು, ಟ್ರಂಪ್ ಗೆಲುವಿಗೆ ಧೋನಿ ಕಾರಣ ಎಂಬ ಮೆಮ್ಸ್ಗಳು ಭಾರೀ ವೈರಲ್ ಆಗುತ್ತಿವೆ.
ಅಮೆರಿಕ ಅಧ್ಯಕ್ಷರ ಚುನಾವಣೆ ಫಲಿತಾಂಶ ನ.6 (ಭಾರತೀಯ ಕಾಲಮಾನ) ಪ್ರಕಟಗೊಂಡಿದೆ. ಇದಕ್ಕೆ ಧೋನಿ ಅವರ ಜೆರ್ಸಿ ನಂಬರ್ ಆದ 7ಕ್ಕೆ ಹೋಲಿಸಿ ಥಲಾ ಫಾರ್ ಎ ರೀಸನ್ ಎಂದು ಅಭಿಮಾನಿಗಳು ಪೋಸ್ಟ್ ವೈರಲ್ ಮಾಡುತ್ತಿದ್ದಾರೆ. ಇದಕ್ಕೂ ಧೋನಿ ಜೆರ್ಸಿ ನಂಬರಿಗೂ ಏನು ಸಂಬಂಧ ಎಂಬ ಪ್ರಶ್ನೆ ನಿಮಗೆ ಕಾಡಬಹುದು. ಈ ಕುರಿತು ವೈರಲ್ ಆಗುತ್ತಿರುವ ಮೆಮ್ಸ್ ನೋಡೋಣ..
America = 7 Letters, Thala for a reason 😁 Our man Dhoni plays golf for fun with the U.S President Trump , yay! ⛳ #USA2024 #Trump #MSDhoni pic.twitter.com/nEc2tr5Qms
— Shambhu Nath (@2shambhunath) November 6, 2024
ಥಲಾ ಫಾರ್ ರೀಸನ್: ನಿನ್ನೆ ದಿನಾಂಕ 6-11-2024. ಧೋನಿ ಅಭಿಮಾನಿಗಳ ಲೆಕ್ಕಾಚಾರದ ಪ್ರಕಾರ ಈ ದಿನಾಂಕವನ್ನು (6+1+1+2+2+4=16) ಕೂಡಿಸಿದರೆ ಉತ್ತರ 16 ಬರುತ್ತದೆ. ಇವರೆಡನ್ನು ಕೂಡಿಸಿದರೆ ಅಂದರೆ 6+1=7 ಆಗುತ್ತದೆ. ಹಾಗಾಗಿ ಟ್ರಂಪ್ ಗೆಲುವಿಗೆ ಧೋನಿ ಕಾರಣ ಎಂದು ಮೆಮ್ಸ್ ಹಂಚಿಕೊಂಡಿದ್ದಾರೆ.
T R U M P
— RAJYOtsava (@vana_usabari) November 6, 2024
20 + 18 + 21 + 13 + 16
= 88
-->8+8 =16
1+6 ===7
Thala for a reason 🔥#USPresidentialElection2024 pic.twitter.com/jp2jryE2ag
ಮತ್ತೆ ಕೆಲವರು America ಇದು 7 ಅಕ್ಷರಗಳಿಂದ ಕೂಡಿರುವ ಕಾರಣ ಟ್ರಂಪ್ ಗೆಲುವಿಗೆ ಥಲಾ ಕಾರಣ ಎಂದಿದ್ದಾರೆ. ಹಾಗೆ ಟ್ರಂಪ್ 47ನೇ ಅಧ್ಯಕ್ಷರಾಗಿದ್ದರಿಂದ ಕೊನೆಯ ಸಂಖ್ಯೆ 7 ಇದ್ದು ಇದು ಕೂಡ ಕಾರಣ ಎಂದಿದ್ದಾರೆ.
MS Dhoni playing golf with Donald Trump.
— Johns. (@CricCrazyJohns) September 8, 2023
- The craze for Dhoni is huge. pic.twitter.com/fyxCo3lhAQ
ಧೋನಿ ಮತ್ತು ಟ್ರಂಪ್ ಫೋಟೋ ವೈರಲ್: 2023ರಲ್ಲಿ ಯುಎಸ್ ಓಪನ್ ಫೈನಲ್ ಪಂದ್ಯ ವೀಕ್ಷಿಸಲೆಂದು ಧೋನಿ ಅಮೆರಿಕಗೆ ತೆರಳಿದ್ದರು. ಈ ವೇಳೆ ಧೋನಿ ಮತ್ತು ಟ್ರಂಪ್ ನ್ಯಾಷನಲ್ ಗಾಲ್ಫ್ ಮೈದಾನದಲ್ಲಿ ಒಟ್ಟಿಗೆ ಕಾಣಿಸಿಕೊಂಡು ಗಾಲ್ಫ್ ಆಡಿದ್ದರು.
Thala is a visionary guy. He knows Trump will again become President of the USA in future. So, he started playing golf with him to improve IND relations with the USA.🫡
— Ashish Jayant 🐦 (@CoderbyChance) November 6, 2024
Thala for a reason.🇮🇳🤝🇺🇸 #USElection2024 #electionday2024 #Trump #MSDhoni https://t.co/ofkxPXBC1f
ಈ ಫೋಟೋವನ್ನು ಅಭಿಮಾನಿಗಳು ಹಂಚಿಕೊಂಡಿದ್ದ ಇದರಲ್ಲಿ "ಧೋನಿ ನಾನು ಸಾಧಿಸಿ ಬಿಟ್ಟೆ' ಎಂದು ಟ್ರಂಪ್ ಫೋನಿನಲ್ಲಿ ಹೇಳುತ್ತಿರುವ ರೀತಿಯಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ.
ಧೋನಿ ಕ್ರಿಕೆಟ್ ದಾಖಲೆ: ಧೋನಿ 15 ಅಗಸ್ಟ್ 2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಒಟ್ಟು 538 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಮಾಹಿ 17,266 ರನ್ ಗಳಿಸಿದ್ದಾರೆ. 108 ಅರ್ಧಶತಕ ಸೇರಿದ್ದು, 16 ಶತಕ ಮತ್ತು ಒಂದು ದ್ವಿಶತಕ ಕೂಡ ಸೇರಿದೆ. ಟೆಸ್ಟ್ನಲ್ಲಿ 224ರನ್ ಗಳಿಸಿರುವುದು ಅಂತಾರಾಷ್ಟ್ರೀಯ ಹೈಸ್ಕೋರ್ ಆಗಿದೆ.
ಇದನ್ನೂ ಓದಿ: ಐಪಿಎಲ್ಗೆ ಎಂಟ್ರಿ ಕೊಡ್ತಿದ್ದಾರೆ ಇಂಗ್ಲೆಂಡ್‌ನ ಲೆಜೆಂಡರಿ ಬೌಲರ್: ಇವರ ಮೇಲೆ ಎಲ್ಲರ ಚಿತ್ತ!