Hero MotoCorp: ಪ್ರಮುಖ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್‌ನಿಂದ ನಾಲ್ಕು ಹೊಸ ದ್ವಿಚಕ್ರ ವಾಹನಗಳು ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿವೆ. ಇವುಗಳಲ್ಲಿ ಎಲೆಕ್ಟ್ರಿಕ್ ಸ್ಕೂಟಿಯೂ ಸೇರಿದೆ. ಇಟಲಿಯ ಮಿಲನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಮೋಟಾರ್‌ಸೈಕಲ್ ಮತ್ತು ಆ್ಯಕ್ಸಸರಿಸ್ ಪ್ರದರ್ಶನದಲ್ಲಿ ಕಂಪನಿ ತನ್ನ ಬೈಕ್ಗಳನ್ನು ಪರಿಚಯಿಸಿದೆ.
ಮೋಟೋಕಾರ್ಪ್‌ನ ಹೊಸ ದ್ವಿಚಕ್ರ ವಾಹನಗಳು:
- ಎಕ್ಸ್ಟ್ರೀಮ್ 250R
- ಕರಿಜ್ಮಾ XMR 250
- ಎಕ್ಸ್‌ಪಲ್ಸ್ 210
- ಹೀರೋ ವಿಡಾ Z
Hero Extreme 250R ಮತ್ತು Karizma XMR 250 ಬೈಕ್‌ಗಳು ಒಂದೇ ಎಂಜಿನ್‌ನೊಂದಿಗೆ ಬರುತ್ತವೆ. ಇವುಗಳಲ್ಲಿ 250ಸಿಸಿ ಸಿಂಗಲ್ ಸಿಲಿಂಡರ್, ಡಿಒಎಚ್ಸಿ, 4 ವಾಲ್ವ್ ಲಿಕ್ವಿಡ್ ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 30hp, 25Nm ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಇದು 0-60 kmph ನಿಂದ 3.25 ಸೆಕೆಂಡುಗಳಲ್ಲಿ ವೇಗ ಪಡೆಯುತ್ತದೆ. ಕೆಲವೇ ತಿಂಗಳಲ್ಲಿ ಕಂಪನಿ ಇವುಗಳನ್ನು ಮಾರುಕಟ್ಟೆಗೆ ತರಲಿದೆ.
ಇತರ ವೈಶಿಷ್ಟ್ಯಗಳು:
- ವರ್ಗ-ಡಿ ಎಲ್ಇಡಿ ಪ್ರೊಜೆಕ್ಟರ್ ಹೆಡ್ಲೈಟ್ಗಳು
- ಲ್ಯಾಪ್ ಟೈಮರ್
- ಡ್ರಾಗ್ ರೇಸ್ ಟೈಮರ್
- ಎಬಿಎಸ್ ಮೋಡ್ಸ್
- ಮ್ಯೂಸಿಕ್ ಕಂಟ್ರೋಲ್ಸ್
- ಟರ್ನ್-ಬೈ-ಟರ್ನ್ ನ್ಯಾವಿಗೇಷನ್
Hero XPulse 210: EICMA ಸಮಾರಂಭದಲ್ಲಿ (EICMA 2024) Hero MotoCorp ಅನಾವರಣಗೊಳಿಸಿದ ಮತ್ತೊಂದು ಬೈಕ್ Hero Expulse 210. ಇದು 210cc ಸಿಂಗಲ್ ಸಿಲಿಂಡರ್ ಕೂಲ್ಡ್ ಎಂಜಿನ್‌ನೊಂದಿಗೆ ಬರಲಿದೆ. ಇದು 24.6hp, 20.7Nm ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಆರು ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. ಈ ಬೈಕ್‌ನ ವಿನ್ಯಾಸ ಎಕ್ಸ್‌ಪಲ್ಸ್ 200 ಅನ್ನು ಹೋಲುತ್ತದೆ.
XPulse 210 ನಲ್ಲಿನ ಇತರ ವೈಶಿಷ್ಟ್ಯಗಳು:
- ಸ್ವಿಚ್ಬುಲ್ ಎಬಿಎಸ್
- 4.2 ಇಂಚಿನ ಟಿಎಫ್ಟಿ ಸ್ಕ್ರೀನ್
- ಬ್ಲೂಟೂತ್ ಕನೆಕ್ಟಿವಿಟಿ
Hero Vida Z: ಹೀರೋ ಮೋಟೋಕಾರ್ಪ್‌ನಿಂದ ಅನಾವರಣಗೊಂಡ ಪೈಕಿ ಒಂದು ಎಲೆಕ್ಟ್ರಿಕ್ ಸ್ಕೂಟಿಯೂ ಇದೆ. ಇದನ್ನು ಹೀರೋ ವಿಡಾ Z ಎಂದು ಪರಿಚಯಿಸಲಾಗಿದೆ. ಇದರ ಲೇಟೆಸ್ಟ್ ಲುಕ್ ಅನಾವರಣಗೊಂಡಿದೆ. ಈ ಸ್ಕೂಟರ್‌ನ ಬ್ಯಾಟರಿ ಸಾಮರ್ಥ್ಯ 2.2kWh ಮತ್ತು 4.4kWh ನಡುವೆ ಇರಬಹುದೆಂದು ನಿರೀಕ್ಷಿಸಲಾಗಿದೆ. ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟಿಯನ್ನು ವೆಹಿಕಲ್ ಹೆಲ್ತ್, ಥೆಫ್ಟ್ ಕಂಟ್ರೋಲ್ ಮತ್ತು ಜಿಯೋಫೆನ್ಸಿಂಗ್‌ನಂತಹ ವೈಶಿಷ್ಟ್ಯಗಳೊಂದಿಗೆ ತರಲಿದೆ.
ಇದನ್ನೂ ಓದಿ: ಭಾರತದ ಮಾರುಕಟ್ಟೆಗೆ ಕಾಲಿಟ್ಟ ಹೊಸ ಸ್ಕೋಡಾ ಕೈಲಾಕ್; ಇದರ ಬೆಲೆ, ವೈಶಿಷ್ಟ್ಯ ಹೀಗಿದೆ