SKODA KYLAQ GLOBAL DEBUT: ಭಾರತದಲ್ಲಿ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗಕ್ಕೆ ಸ್ಕೋಡಾ ಪ್ರವೇಶಿಸಿದೆ. ಈ ವಿಭಾಗದಲ್ಲಿ ಕಂಪನಿಯು ತನ್ನ ಮೊದಲ ಕಾರು ಸ್ಕೋಡಾ ಕೈಲಾಕ್ ಅನ್ನು ಪರಿಚಯಿಸಿದೆ. ಸ್ಕೋಡಾ ಕೈಲಾಕ್ ಅನ್ನು ಭಾರತ-ನಿರ್ದಿಷ್ಟ MQB A0 ಪ್ಲಾಟ್‌ಫಾರ್ಮ್‌ನ ರೂಪಾಂತರದ ಮೇಲೆ ನಿರ್ಮಿಸಲಾಗಿದೆ. ಇದನ್ನು MQB 27 ಎಂದು ಕರೆಯಲಾಗುತ್ತದೆ.
ಸ್ಕೋಡಾ ಆಟೋ ಇಂಡಿಯಾ ಪ್ರಸ್ತುತ ತನ್ನ ಆರಂಭಿಕ ಬೆಲೆಯನ್ನು ಬಹಿರಂಗಪಡಿಸಿದೆ. ಈ ಕಾರನ ಬೆಲೆ ರೂ. 7.89 ಲಕ್ಷದಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ. ಇದರ ಬುಕಿಂಗ್ ಡಿಸೆಂಬರ್ 2, 2024 ರಿಂದ ಶುರುವಾಗಲಿದೆ. ಈ SUV ಜನವರಿ 17, 2025 ರಂದು ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಜನರಿಗೆ ಪರಿಚಯಿಸಲಾಗುವುದು. ಆದರೆ ಡೆಲಿವರಿ ಮಾತ್ರ ಜನವರಿ 27 ರಿಂದ ಆರಂಭವಾಗುತ್ತದೆ ಎಂದು ಕಂಪನಿ ತಿಳಿಸಿದೆ.
ಸ್ಕೋಡಾ ಕೈಲಾಕ್ ವಿನ್ಯಾಸ: ಇದರ ವಿನ್ಯಾಸದ ಬಗ್ಗೆ ಮಾತನಾಡುವುದಾದ್ರೆ, ಕೈಲಾಕ್ ಭಾರತದಲ್ಲಿ ಮೊದಲ ಸ್ಕೋಡಾ ಕಾರು. ಇದರಲ್ಲಿ ನ್ಯೂ ಮಾಡರ್ನ್ ಸಾಲಿಡ್ ಡಿಸೈನ್ ಲಾಂಗ್ವೆಜ್ ನೀಡಲಾಗಿದೆ. ಮುಂಭಾಗವು ಬಟರ್ಫ್ಲೈ ಗ್ರಿಲ್ ಅನ್ನು ಹೊಂದಿದೆ. ಇದು ಸ್ಲಿಮ್ ಎಲ್ಇಡಿ ಡಿಆರ್ಎಲ್ಗಳಿಂದ ಸುತ್ತುವರಿದಿದೆ. ಮುಖ್ಯ ಹೆಡ್‌ಲ್ಯಾಂಪ್‌ಗಳು ಕೆಳಮುಖವಾಗಿವೆ. ಆದರೆ ಬಂಪರ್ ಪ್ರಮುಖವಾದ ಸೆಂಟರ್ ಏರ್ ವೆಂಟ್ ಮತ್ತು ಇದರ ಕೆಳಭಾಗದಲ್ಲಿ ಫಾಕ್ಸ್ ಸಿಲ್ವರ್ ಸ್ಕಿಡ್ ಪ್ಲೇಟ್ ಅನ್ನು ನೀಡಲಾಗಿದೆ.
ಉನ್ನತ ಮಾದರಿಯು ಡ್ಯುಯಲ್-ಟೋನ್ ಅಲಾಯ್ ವ್ಹೀಲ್ಗಳನ್ನು ಹೊಂದಿದೆ. ಹಿಂಭಾಗದ ವಿನ್ಯಾಸವು ಕುಶಾಕ್‌ನೊಂದಿಗೆ ಕೆಲವು ಹೋಲಿಕೆಗಳನ್ನು ಹಂಚಿಕೊಳ್ಳುತ್ತದೆ. ಆದರೂ ಇದು ಬ್ಲ್ಯಾಕ್ ಟ್ರಿಮ್ ಸ್ಟ್ರಿಪ್‌ಗೆ ಜೋಡಿಸಲಾದ ಸರಳವಾಗಿ ಕಾಣುವ ಟೈಲ್‌ಲ್ಯಾಂಪ್‌ಗಳನ್ನು ಹೊಂದಿದೆ. ಹಿಂಭಾಗದ ಬಂಪರ್ ಬಹಳಷ್ಟು ಕ್ಲಾಡಿಂಗ್ ಮತ್ತು ಮೇನ್ ಸ್ಕಿಡ್ ಪ್ಲೇಟ್ ಅಂಶವನ್ನು ಪಡೆಯುತ್ತದೆ.
ಸ್ಕೋಡಾ ಕೈಲಾಕ್ ಇನ್ಡಿಸೈನ್: ಇದರ ಕ್ಯಾಬಿನ್ ವಿನ್ಯಾಸವು ಕುಶಾಕ್ ಅನ್ನು ಹೋಲುತ್ತದೆ. ಉನ್ನತ ಮಾದರಿಯು 10-ಇಂಚಿನ ಸೆಂಟರ್ ಟಚ್‌ಸ್ಕ್ರೀನ್, ಎರಡು-ಸ್ಪೋಕ್ ಸ್ಟೀರಿಂಗ್ ಮತ್ತು ವರ್ಟಿಕಲ್ ಓರಿಯೆಂಟೆಡ್ ಸೈಡ್ ವೆಂಟ್‌ಗಳನ್ನು ಪಡೆಯುತ್ತದೆ. ಇದು ಸ್ಕೋಡಾ ಸ್ಲಾವಿಯಾ ಮತ್ತು ಕುಶಾಕ್‌ನಲ್ಲಿರುವ ಇಂಟಿರಿಯರ್ ಅನ್ನು ಹೋಲುತ್ತದೆ.
ಇದರಲ್ಲಿ ಲಭ್ಯವಿರುವ ವೈಶಿಷ್ಟ್ಯಗಳ ಕುರಿತು ಮಾತನಾಡುವುದಾದ್ರೆ, ಹೊಸ ಸ್ಕೋಡಾ ಕೈಲಾಕ್ ಪವರ್-ಅಡ್ಜೆಸ್ಟಬಲ್ ಫ್ರಂಟ್ ಸೀಟುಗಳು, ಸನ್‌ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಉನ್ನತ ರೂಪಾಂತರದಲ್ಲಿ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಸ್ಕೋಡಾ ಕೈಲಾಕ್ ಆಕಾರ: ಅದರ ಆಕಾರದ ಬಗ್ಗೆ ಮಾತನಾಡುವುದಾದ್ರೆ, ಸ್ಕೋಡಾ ಕೈಲಾಕ್ ಉದ್ದ 3,995 ಎಂಎಂ, ಅಗಲ 1,783 ಎಂಎಂ ಮತ್ತು ಎತ್ತರ 1,619 ಎಂಎಂ ಮತ್ತು ಅದರ ವ್ಹೀಲ್‌ಬೇಸ್ 2,566 ಎಂಎಂ ಹೊಂದಿದೆ. ಈ ಎಸ್‌ಯುವಿಯ ಗ್ರೌಂಡ್ ಕ್ಲಿಯರೆನ್ಸ್ 189 ಎಂಎಂ ಮತ್ತು ಬೂಟ್ ಸ್ಪೇಸ್ 446 ಲೀಟರ್ ಎಂದು ಸ್ಕೋಡಾ ಮಾಹಿತಿ ನೀಡಿದೆ.
ಸ್ಕೋಡಾ ಕೈಲಾಕ್ ಪವರ್‌ಟ್ರೇನ್: ಪವರ್‌ಟ್ರೇನ್ ಕುರಿತು ಮಾತನಾಡುವುದಾದ್ರೆ, ಸ್ಕೋಡಾ ಕೈಲಾಕ್ VW ಗ್ರೂಪ್‌ನ 1.0-ಲೀಟರ್ TSI ಟರ್ಬೊ-ಪೆಟ್ರೋಲ್ ಎಂಜಿನ್‌ನಿಂದ ರನ್ ಆಗುತ್ತದೆ. ಈ ಎಂಜಿನ್ 114 bhp ಪವರ್ ಮತ್ತು 178 Nm ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಇದು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮೆಟಿಕ್ ಗೇರ್‌ಬಾಕ್ಸ್ ಅನ್ನು ನೀಡಲಾಗಿದೆ.
ಸ್ಕೋಡಾ ಕೈಲಾಕ್ ಅನ್ನು 1.0-ಲೀಟರ್ TSI ಟರ್ಬೊ-ಪೆಟ್ರೋಲ್ ಎಂಜಿನ್ ಜೊತೆಗೆ ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಮಾತ್ರ ನೀಡಲಾಗುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ, ಸ್ಕೋಡಾ ಕೈಲಾಕ್ ಮಾರುತಿ ಸುಜುಕಿ ಬ್ರೆಝಾ, ಕಿಯಾ ಸೋನೆಟ್, ಟಾಟಾ ನೆಕ್ಸಾನ್, ಹುಂಡೈ ವೆನ್ಯೂ ಮತ್ತು ಮಹೀಂದ್ರಾ XUV 3XO ನಂತಹ ಕಾರುಗಳೊಂದಿಗೆ ಸ್ಪರ್ಧಿಸಲಿದೆ.
ಓದಿ: ಆ್ಯಪಲ್, ಗೂಗಲ್ ತಮ್ಮ ಫೋನ್‌ಗಳ ಹಾರ್ಡ್ವೇರ್ಗೆ ಖರ್ಚು ಮಾಡಿರುವ ಹಣವೆಷ್ಟು?