ಬೆಂಗಳೂರು: ರಾಜ್ಯದಲ್ಲಿ ಇಂದು 28,270 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 1,374 ಮಂದಿಗೆ ಸೋಂಕು ದೃಢಪಟ್ಟಿದೆ. ಇಂದು 777 ಮಂದಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ ಒಟ್ಟು 39,37,950 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್ ಸೋಂಕಿಗೆ ಇಂದು ಮೂವರು ಮೃತಪಟ್ಟಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 7,296 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪ್ರಮಾಣ ಶೇ. 4.86 ರಷ್ಟಿದ್ದರೆ, ವಾರದ ಸೋಂಕಿತರ ಪ್ರಮಾಣ ಶೇ. 4.49 ರಷ್ಟಿದೆ. ವಾರದ ಸಾವಿನ ಪ್ರಮಾಣ ಶೇ. 0.09 ರಷ್ಟಿದೆ. ಈ ತನಕ ಒಟ್ಟು 6,73,76,829 ಜನರನ್ನು ಪರೀಕ್ಷಿಸಲಾಗಿದೆ.
ವಿಮಾನ ನಿಲ್ದಾಣದಲ್ಲಿ ಇಂದು 4,924 ಮಂದಿಯನ್ನು ತಪಾಸಣೆಗೊಳಪಡಿಸಲಾಗಿದ್ದು, ಈವರೆಗೂ 12,23,264 ಪ್ರಯಾಣಿಕರು ಕೋವಿಡ್ ತಪಾಸಣೆಗೆ ಒಳಪಟ್ಟಿದ್ದಾರೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಇಂದು ಒಟ್ಟು 1234 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 18,18,646 ಕ್ಕೆ ಏರಿಕೆ ಆಗಿದೆ. ಇಂದು 724 ಮಂದಿ ಡಿಸ್ಚಾರ್ಜ್ ಆಗಿದ್ದು, ಇದುವರೆಗೂ 17,94,969 ಮಂದಿ ಗುಣಮುಖರಾಗಿದ್ದಾರೆ. ಇಂದು ಬೆಂಗಳೂರಿನಲ್ಲಿ ಕೋವಿಡ್ಗೆ ಇಬ್ಬರು ಮೃತಪಟ್ಟಿದ್ದು, ಇನ್ನು 6,704 ಸಕ್ರಿಯ ಪ್ರಕರಣಗಳು ಇವೆ. ಇದುವರೆಗೂ ಕೋವಿಡ್ನಿಂದಾಗಿ 16,972 ಮಂದಿ ಮೃತಪಟ್ಟಿದ್ದಾರೆ.
ಓದಿ : ಬೆಂಗಳೂರಿನಲ್ಲಿದ್ರೂ ಸದಾ ಶಿಗ್ಗಾಂವಿ ಬಗ್ಗೆ ವಿಚಾರ ಮಾಡ್ತೇನೆ: ಸಿಎಂ ಬೊಮ್ಮಾಯಿ