ETV Bharat / state

ಪುನೀತ್​ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ: ವಿಧಾನಸೌಧದತ್ತ ಅಭಿಮಾನಿಗಳ ದೌಡು - ಪುನೀತ್ ರಾಜ್​​ಕುಮಾರ್ ಅಭಿಮಾನಿಗಳು

ಪುನೀತ್ ರಾಜ್​​ಕುಮಾರ್​ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು ವಿಧಾನಸೌಧದತ್ತ ಅಭಿಮಾನಿಗಳು ದೌಡಾಯಿಸುತ್ತಿದ್ದಾರೆ.

Karnataka Ratna award ceremony start
Karnataka Ratna award ceremony start
author img

By

Published : Nov 1, 2022, 2:41 PM IST

ಬೆಂಗಳೂರು: ದಿವಂಗತ ಡಾ. ಪುನೀತ್ ರಾಜ್​​ಕುಮಾರ್​​ಗೆ ಇಂದು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದೆ. ವಿಧಾನಸೌಧ ಮುಂಭಾಗದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು, ಅಭಿಮಾನಿಗಳು ದೌಡಾಯಿಸುತ್ತಿದ್ದಾರೆ. ಬೆಂಗಳೂರು ಮಾತ್ರವಲ್ಲದೇ ರಾಜ್ಯದ ವಿವಿಧ ಜಿಲ್ಲೆ, ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದಲೂ ಅಪ್ಪು ಅಭಿಮಾನಿಗಳು ದೌಡಾಯಿಸುತ್ತಿದ್ದಾರೆ.

ವಿಧಾನಸೌಧದತ್ತ ಅಭಿಮಾನಿಗಳ ದೌಡು

ಕಾರ್ಯಕ್ರಮಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ನಟ ಎನ್​ಟಿಆರ್​ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದು, ಇವರ ಅಭಿಮಾನಿಗಳು ಸಹ ವಿಧಾನಸೌಧ ಮುಂಭಾಗದ ಬಳಿ ಜಮಾವಣೆಯಾಗುತ್ತಿದ್ದಾರೆ‌. ತಮ್ಮ ನೆಚ್ಚಿನ ನಟ ಪುನೀತ್ ಹೆಸರನ್ನು ತಮ್ಮ ಹಣೆ ಹಾಗೂ ಮುಖದ ಮೇಲೆ ಅಪ್ಪು ಬಾಸ್ ಎಂದು ಬರೆಯಿಸಿಕೊಳ್ಳುವ ಮೂಲಕ ಅಭಿಮಾನ ಮೆರೆಯುತ್ತಿದ್ದಾರೆ.

'ಪವರ್​​ಸ್ಟಾರ್ ಪುನೀತ್ ರಾಜ್​​ಕುಮಾರ್​ಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡುತ್ತಿರುವುದು ಸಂತೋಷವಾಗಿದೆ. ಅವರು ಅಭಿನಯಿಸಿದ ಎಲ್ಲ ಚಿತ್ರಗಳನ್ನು ನೋಡಿದ್ದೇ‌ನೆ. ನಾನು ಎನ್​ಟಿಆರ್ ಅಭಿಮಾನಿಯಾಗಿದ್ದೇ‌ನೆ.‌ ಪುನೀತ್ ಅವರ ಸರಳತೆ ನೋಡಿ ಬಳಿಕ ಅವರ ಆಭಿಮಾನಿ ಕೂಡ ಆದೆ. ದೊಡ್ಡ ಸ್ಟಾರ್ ಆದರೂ ತುಂಬಾ ಸರಳತೆಯಿಂದ ನಮ್ಮೆಲ್ಲರ ಮನಸು ಅವರು ಗೆದ್ದಿದ್ದಾರೆ ಎಂದು ಕುಪ್ಪಂನಿಂದ ಬೆಂಗಳೂರಿಗೆ ಆಗಮಿಸಿದ ಅಪ್ಪು ಅಭಿಮಾನಿಗಳು ಪುನೀತ್ ರಾಜ್​​ಕುಮಾರ್​ ಅವರನ್ನು ಕೊಂಡಾಡಿದ್ದಾರೆ.

ಇದನ್ನೂ ಓದಿ: ನಟಿ ರಂಭಾ ಕಾರು ಅಪಘಾತ: ಮಗಳ ಚೇತರಿಕೆಗೆ ಪ್ರಾರ್ಥಿಸುವಂತೆ ಅಭಿಮಾನಿಗಳನ್ನು ಕೇಳಿಕೊಂಡ ತಾರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.