ETV Bharat / state

ಸರ್ಕಾರದಿಂದ ಸುವರ್ಣಾವಕಾಶ: ನೀವೇ 'ನಮ್ಮ ಕ್ಲಿನಿಕ್‌' ಲೋಗೋ ವಿನ್ಯಾಸ ಮಾಡಿ! - ನಮ್ಮ ಕ್ಲಿನಿಕ್‌ ಲೋಗೋ ವಿನ್ಯಾಸ

ರಾಜ್ಯ ಸರ್ಕಾರವು 'ನಮ್ಮ ಕ್ಲಿನಿಕ್‌'ಗೆ ವಿಶಿಷ್ಟವಾದ ಲೋಗೋ ಆಹ್ವಾನಿಸಿದೆ. ಸಾರ್ವಜನಿಕರು ಲೋಗೋ ರಚಿಸಿ ಇಮೇಲ್​ ಮಾಡಬಹುದು.

ನಮ್ಮ ಕ್ಲಿನಿಕ್‌ ಲೋಗೋ ವಿನ್ಯಾಸ
ನಮ್ಮ ಕ್ಲಿನಿಕ್‌ ಲೋಗೋ ವಿನ್ಯಾಸ
author img

By

Published : Aug 5, 2022, 6:07 PM IST

ಬೆಂಗಳೂರು: ಜನತೆಯ ಆರೋಗ್ಯ ಸೇವೆಗೆ ರಾಜ್ಯ ಸರ್ಕಾರ ಶ್ರೀಘ್ರದಲ್ಲೇ ನಮ್ಮ ಕ್ಲಿನಿಕ್‌ ಆರಂಭಿಸಲಿದೆ. ಅದಕ್ಕೂ ಮುನ್ನ 'ನಮ್ಮ ಕ್ಲಿನಿಕ್‌'ಗೆ ಸೃಜನಾತ್ಮಕ ಮತ್ತು ನವೀನ ಲೋಗೋ ವಿನ್ಯಾಸ ಮಾಡಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ನಮ್ಮ ಕ್ಲಿನಿಕ್‌ನ ವಿಭಿನ್ನ ಮತ್ತು ಆಕರ್ಷಕ ಗುರುತು ಹೇಗಿರಬೇಕು ಎನ್ನುವುದನ್ನು ನೀವೇ ನಿರ್ಧರಿಸಬಹುದು.

ಸರ್ಕಾರದ ಮತ್ತು ಆರೋಗ್ಯ ಇಲಾಖೆಯ ಉದ್ದೇಶವನ್ನು ಬಿಂಬಿಸುವಂತೆ ಆಕರ್ಷಕ ಲೋಗೋ ವಿನ್ಯಾಸ ಮಾಡಿ 'logo4nammaclinic@gmail.com ' ಗೆ ಕಳುಹಿಸಬೇಕು. ಆಯ್ಕೆಯಾದ ವಿನ್ಯಾಸವನ್ನು ಡಿಸೈನ್‌ ಮಾಡಿದವರಿಗೆ ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರಿಂದ ವಿಶೇಷ ವೈಯಕ್ತಿಕ ಗೌರವ ಸಿಗಲಿವೆ. ಆಗಸ್ಟ್ 5 ರಿಂದ ಆಗಸ್ಟ್‌ 15ರ ಒಳಗೆ ಲೊಗೋ ವಿನ್ಯಾಸ ಕಳುಹಿಸುವಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಸುಮಾರು 436 ಕಡೆಗಳಲ್ಲಿ ನಮ್ಮ ಕ್ಲಿನಿಕ್‌ಗಳು ಆರಂಭವಾಗಲಿವೆ. ಇದು ರಾಜ್ಯದ ಆರೋಗ್ಯ ವ್ಯವಸ್ಥೆಗೆ ಹೊಸ ಸ್ಪರ್ಶ ನೀಡಲಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನಗರ ಪ್ರದೇಶಗಳಲ್ಲಿ ಈ ಕ್ಲಿನಿಕ್‌ ಕಾರ್ಯಾರಂಭಿಸಲಿದೆೆ.

ಇದನ್ನೂ ಓದಿ: ರಾಜ್ಯದಲ್ಲಿರುವುದು ಹಿಂದಿ ಮತ್ತು ಸಂಸ್ಕೃತಿ ಇಲಾಖೆಯೇ?: ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.