ETV Bharat / state

ರಾಜ್ಯಕ್ಕೆ ಮತ್ತೆ ಕೊರೊನಾಘಾತ: ಒಂದೇ ದಿನ 5 ಸಾವಿರ ದಾಟಿದ ಕೇಸ್, ಬೆಂಗಳೂರಲ್ಲೇ ಹೆಚ್ಚು!

ರಾಜ್ಯದಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ಹೆಚ್ಚಾಗಿದ್ದು, ಇಂದು 5 ಸಾವಿರಕ್ಕಿಂತ ಅಧಿಕ ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಸಾವಿನ ಸಂಖ್ಯೆಯೂ ಹೆಚ್ಚಾಗಿವೆ.

Karnataka Covid update
ಕರ್ನಾಟಕ ಕೋವಿಡ್ ಅಪ್ಢೇಟ್
author img

By

Published : Apr 5, 2021, 7:13 PM IST

ಬೆಂಗಳೂರು : ರಾಜ್ಯದಲ್ಲಿಂದು ಒಂದೇ ದಿನ 5,279 ಹೊಸ ಕೋವಿಡ್​ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 10,20,434 ಕ್ಕೆ ಏರಿಕೆ ಆಗಿದೆ.

ಇಂದು 32 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 12,657 ಕ್ಕ ತಲುಪಿದೆ. ಇಂದು‌ 1,856 ಮಂದಿ ಗುಣಮುಖರಾಗಿದ್ದು, ಇದುವರೆಗೆ 9,65,275 ಮಂದಿ ಕೋವಿಡ್​ ಸೋಂಕಿನಿಂದ ಮುಕ್ತರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 42,483ಕ್ಕೆ ಏರಿದೆ. 345 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌

ರಾಜ್ಯದಲ್ಲಿ ಕೋವಿಡ್​ ಪ್ರಕರಣಗಳು ಪ್ರಮಾಣ ಶೇಕಡ 5.39ರಷ್ಟು ಇದ್ದು, ಮೃತಪಟ್ಟವರ ಪ್ರಮಾಣ ಶೇ.0.60 ರಷ್ಟಿದೆ. ಇಂದು ಯುಕೆಯಿಂದ 300 ಮಂದಿ ರಾಜ್ಯಕ್ಕೆ ಆಗಮಿಸಿದ್ದು, ತಪಾಸಣೆಗೆ ಒಳಪಟ್ಟಿದ್ದಾರೆ.

ಒಂದೇ ವಾರದಲ್ಲಿ ಏರಿದ ಸೋಂಕಿತರ ಸಂಖ್ಯೆ :

ಸೋಂಕಿತರು ಮತ್ತು ಮೃತಪಟ್ಟವರ ಸಂಖ್ಯೆ

ಮಾರ್ಚ್ 28- 3082- 12
ಮಾರ್ಚ್ 31- 4225- 26
ಏಪ್ರಿಲ್ - 01- 4234- 18
ಏಪ್ರಿಲ್ - 02- 4991- 06
ಏಪ್ರಿಲ್ - 03 - 4373- 19
ಏಪ್ರಿಲ್ - 04 - 4553- 15
ಏಪ್ರಿಲ್ - 05 - 5279- 32

ಬೆಂಗಳೂರಲ್ಲಿ ಹೆಚ್ಚು ಪ್ರಕರಣ ದಾಖಲು :

ಬೆಂಗಳೂರು ನಗರದಲ್ಲಿ ಕೋವಿಡ್ ಎರಡನೇ ಅಲೆಯ ಅತಿ ಹೆಚ್ಚು ಪ್ರಕರಣಗಳು ಇಂದು ದಾಖಲಾಗಿವೆ. ನಗರದಲ್ಲಿ 3,728 ಜನರಲ್ಲಿ ಪಾಸಿಟಿವ್ ದೃಢಪಟ್ಟಿದ್ದು, 18 ಜನ ಮೃತಪಟ್ಟಿದ್ದಾರೆ. 1026 ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 4,50,759 ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 4,667 ಆಗಿದೆ. ಸದ್ಯ, 30,782 ಸಕ್ರಿಯ ಪ್ರಕರಣಗಳಿದ್ದು, 164 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.