ಬೆಂಗಳೂರು : ಕೂಡಲೇ ಶಾಲೆಗಳನ್ನು ಆರಂಭಿಸಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಬಸವರಾಜ ಹೊರಟ್ಟಿ, ತರಗತಿ ಇಲ್ಲದೆ ಮಕ್ಕಳು ಓದುವುದನ್ನೇ ಮರೆತಿದ್ದಾರೆ.
ಮಕ್ಕಳೇ ದೇವರಲ್ಲಿ ಬೇಡಿಕೊಳ್ತಿದ್ದಾರೆ. ಶಿಕ್ಷಣ ಸಚಿವ ಬಿ ಸಿ ನಾಗೇಶ್ ಕರೆದು ಮಾತನಾಡಿದ್ದೇನೆ. ಸಂಬಂಧಪಟ್ಟ ಅಧಿಕಾರಿಗಳನ್ನ ಕರೆದು ಶಾಲೆ ಆರಂಭಿಸಬೇಕು ಅಂತಾ ಸೂಚಿಸಿದ್ದೇನೆ ಎಂದಿದ್ದಾರೆ. ಜಿಲ್ಲಾಧಿಕಾರಿಗಳು, ಬಿಇಒ, ಡಿಡಿಪಿಐ ಎಲ್ಲರೂ ಶಾಲೆ ಆರಂಭಿಸುವಾಗ ಮಕ್ಕಳ ಆರೋಗ್ಯ, ಮುಂಜಾಗ್ರತಾ ಕ್ರಮಗಳ ಬಗ್ಗೆ ಜವಾಬ್ದಾರಿ ವಹಿಸಬೇಕು.
ಪೋಷಕರು ಮಕ್ಕಳನ್ನು ಹೊಲ, ಮನೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ನಾನು ಬಹಳ ಅಧ್ಯಯನ ಮಾಡಿದ್ದೇನೆ. ರೆಸಿಡೆನ್ಸ್ ಶಾಲೆಯಲ್ಲಿ ಓದುತ್ತಿರೋ ಮಕ್ಕಳ ಜೊತೆ ಪೋಷಕರ ಸಂಬಂಧ ಹಾಳಾಗಿದೆ. ಹೀಗಾಗಿ, ಶಾಲೆ ಆರಂಭಿಸುವುದು ಉತ್ತಮ. ನಾನೂ ಶಿಕ್ಷಣ ಸಚಿವನಾಗಿ ಕೆಲಸ ಮಾಡಿದ್ದೇನೆ. ಮಕ್ಕಳನ್ನ ಶಾಲೆಗೆ ಕರೆದುಕೊಂಡು ಹೋಗುವ ಕೆಲಸ ಆಗಬೇಕು ಎಂದಿದ್ದಾರೆ.
ಪೋಷಕರು ಶಾಲೆ ಆರಂಭಿಸುವ ಬಗ್ಗೆ ಒಲವು ಹೊಂದಿದ್ದಾರೆ. 3ನೇ ಅಲೆ ಬಂದರೂ ಅದಕ್ಕನುಸಾರವಾಗಿ ಹೊಂದಾಣಿಕೆ ಮಾಡಿ ಶಾಲೆಗಳನ್ನು ಮುಂದುವರಿಸಬೇಕು. ಶಾಲೆ ಆರಂಭವಾಗದಿದ್ದರಿಂದ ಮಕ್ಕಳ ಪ್ರಗತಿ ಕುಂಠಿತವಾಗಿದೆ. ಕಾಲ ಕಾಲಕ್ಕೆ ಏನು ಸಮಸ್ಯೆ ಎದುರಾಗುತ್ತೆ ಅದನ್ನು ಬಗೆಹರಿಸುವ ಕೆಲಸ ಸರ್ಕಾರದ್ದಾಗಿದೆ ಎಂದು ಹೇಳಿದ್ದಾರೆ.
ಓದಿ: ಮೇಕೆದಾಟು ಯೋಜನೆ ಬಗ್ಗೆ ಕರ್ನಾಟಕ ಬಿಜೆಪಿ ಸ್ಪಷ್ಟ: ಸಚಿವ ಅಶ್ವತ್ಥ ನಾರಾಯಣ