ಬೆಂಗಳೂರು: ಇಲಾಖಾವಾರು ಬಜೆಟ್ ಮಂಡನೆ ಬದಲು ವಲಯಾವಾರು ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ವಲಯಕ್ಕೆ 72093 ಕೋಟಿ ಹಣ ಮೀಸಲಿರಿಸಿದ್ದು, ಇದೇ ಮೊದಲ ಬಾರಿಗೆ ಬಜೆಟ್ ಗಾತ್ರದ ಶೇ.15.88 ರಷ್ಟು ಗಾತ್ರದ ಮಕ್ಕಳ ಬಜೆಟ್ ಅನ್ನು 37,783 ಕೋಟಿ ವೆಚ್ಚದಲ್ಲಿ ಮಂಡಿಸಿದ್ದಾರೆ.
ಪ್ರತ್ಯೇಕ ಕೃಷಿ ಬಜೆಟ್ ಮೂಲಕ ಹಿಂದೆ ಗಮನ ಸೆಳೆದಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದೀಗ ಮತ್ತೊಂದು ಹೊಸ ಪ್ರಯೋಗ ನಡೆಸಿದ್ದಾರೆ. ಕೇವಲ ಆರು ವಲಯಗಳಲ್ಲಿ ಎಲ್ಲಾ ಇಲಾಖೆಗಳ ಯೋಜನೆಗಳನ್ನು ಪ್ರಸ್ತಾಪಿಸುವ ಜೊತೆಗೆ ಮಕ್ಕಳ ಬಜೆಟ್ ಪ್ರಸ್ತಾಪಿಸಿ ಗಮನ ಸೆಳೆದಿದ್ದಾರೆ.
ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ವಲಯದ ಹೈಲೈಟ್ಸ್:
• ಎಸ್ಸಿ ,ಎಸ್ಟಿ ಕಲ್ಯಾಣಕ್ಕೆ ಕಡ್ಡಾಯವಾಗಿ ನೀಡಬೇಕಾದ ಅನುದಾನಕ್ಕಿಂತ ಹೆಚ್ಚಿನ ಅನುದಾನ ನೀಡಿಕೆಗೆ 26,930 ಕೋಟಿ ಮೀಸಲು
• ಎಸ್ಸಿ,ಎಸ್ಟಿ ಪಂಗಡದ ನಿರುದ್ಯೋಗಿ ಯುವಕ -ಯುವತಿಯರಿಗೆ ವಾಹನ ಚಾಲನಾ ತರಬೇತಿ ನೀಡಲು ಕೆಎಸ್ಆರ್ಟಿಸಿ ಮೂಲಕ ಬೆಳಗಾವಿ ವಿಭಾಗದಲ್ಲಿ ವ್ಯವಸ್ಥೆ
• ಎಸ್ಸಿ,ಎಸ್ಟಿ ಪಂಗಡದ ನಿರುದ್ಯೋಗಿ ಯುವಕ-ಯುವತಿಯರಿಗೆ ಸಣ್ಣ ಸರಕು ಸಾಗಣೆ ವಾಹನಗಳನ್ನು ಖರೀದಿಸಲು ಸಾಲಸೌಲಭ್ಯ
• ಎಸ್ಸಿ, ಎಸ್ಟಿ ಸಮುದಾಯದ ಜನರು ನಿರ್ವಹಿಸುತ್ತಿರುವ ಸಹಕಾರ ಸಂಘಗಳಿಗೆ ಆರ್ಥಿಕ ಚಟುವಟಿಕೆಗಳಿಗಾಗಿ ಷೇರು ಬಂಡವಾಳವನ್ನು 10 ಲಕ್ಷಗಳಿಂದ 20 ಲಕ್ಷ ರೂಗಳಿಗೆ ಹೆಚ್ಚಳ
• ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಎಸ್ಸಿ-ಎಸ್ಟಿ ಪಂಗಡದ ವಿದ್ಯಾರ್ಥಿಗಳಿಗೆ 1 ಲಕ್ಷ ನಗದು ಪ್ರಶಸ್ತಿ ಇದಕ್ಕಾಗಿ 60 ಲಕ್ಷ ನಿಗದಿ
• ರಾಜ್ಯದಲ್ಲಿರುವ ವಿವಿಧ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ 78 ಕೋಟಿ ರೂ. ಮೀಸಲು
• ಉಪ್ಪಾರ ಅಭಿವೃದ್ಧಿ ನಿಗಮಕ್ಕೆ 10 ಕೋಟಿ, ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ 25ಕೋಟಿ ,ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ 50ಕೋಟಿ, ಆರ್ಯವೈಶ್ಯ ಅಭಿವೃದ್ಧಿ ನಿಗಮಕ್ಕೆ ಅಧಿಕಾರ ಸಮುದಾಯದವರ ಅಭಿವೃದ್ದಿಗಾಗಿ 20 ಕೋಟಿ ಮತ್ತು ಗೊಲ್ಲರ ಸಮುದಾಯದವರ ಅಭಿವೃದ್ದಿಗಾಗಿ ಹತ್ತು ಕೋಟಿಗಳನ್ನು ಒದಗಿಸಲಾಗಿದೆ.
• ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವ ಕೊಳಚೆ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು 200 ಕೋಟಿ ಅನುದಾನ ಮೀಸಲು
• ಕ್ರೈಸ್ತ ಸಮುದಾಯದ ಸರ್ವತೋಮುಖ ಅಭಿವೃದ್ಧಿಯನ್ನು 200 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು
• ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಸಾವಿರ ಕೋಟಿ ರೂಗಳ ಹೆಚ್ಚುವರಿ ಆರ್ಥಿಕ ನೆರವು, 2 ಲಕ್ಷ ಮನೆಗಳನ್ನು 2,500 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸುವ ಭರವಸೆ
• ಪೂರ್ವ ಪ್ರಾಥಮಿಕ ತರಗತಿಗಳಿಂದ ಪದವಿ ಪೂರ್ವ ತರಗತಿವರೆಗೆ ಒಂದೇ ಸೂರಿನಡಿ ಶಿಕ್ಷಣ ನೀಡಲು 276 ಕರ್ನಾಟಕ ಪಬ್ಲಿಕ್ ಶಾಲೆಗಳ ಸೌಕರ್ಯಕ್ಕೆ 100 ಕೋಟಿ ಅನುದಾನ
• ನೆರೆ ಹಾನಿಯಿಂದ ಹಾನಿಗೀಡಾಗಿರುವ ಶಾಲಾ ಕೊಠಡಿಗಳ ಕಾಮಗಾರಿಯನ್ನು ನಬಾರ್ಡ್ ಸಹಾಯದೊಂದಿಗೆ 750 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ.
• ದಾವಣಗೆರೆ ,ಉಡುಪಿ ಮತ್ತು ದೊಡ್ಡಬಳ್ಳಾಪುರ ಸ್ಕೌಟ್ಸ್ ಮತ್ತು ಗೈಡ್ಸ್ ಕೇಂದ್ರಗಳಿಗೆ 4 ಕೋಟಿ ಅನುದಾನ
• 400 ಸರ್ಕಾರಿ ಉರ್ದು ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಕ್ಕೆ ಒಂದು ಕೋಟಿ ರೂ ಅನುದಾನ
• ಬೆಂಗಳೂರಿನಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜನ್ನು ಐಐಟಿ ಮಾದರಿಯಲ್ಲಿ ಸ್ವಚ್ಛಗೊಳಿಸಿ ಅಭಿವೃದ್ಧಿಪಡಿಸಲು 10 ಕೋಟಿ ಅನುದಾನ
• ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸರ್ಕಾರಿ ಆಸ್ಪತ್ರೆಯನ್ನು 200 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸುವುದು.
• ಶ್ರವಣ ದೋಷ ಮುಕ್ತ ಯೋಜನೆಗೆ 28 ಕೋಟಿ ಅನುದಾನ
• ರಾಜ್ಯದ ಆಯ್ದ ಐದು ಜಿಲ್ಲೆಗಳಲ್ಲಿ ಬಿಪಿಎಲ್ ಕಾರ್ಡ್ದಾರರಿಗೆ 5 ಕೋಟಿ ವೆಚ್ಚದಲ್ಲಿ ಉಚಿತ ಪೆರಿಟೋನಿಯಲ್ ಡಯಾಲಿಸಿಸ್ ಸೇವೆ
• ಕೆ ಸಿ ಜನರಲ್ ಆಸ್ಪತ್ರೆ ಮತ್ತು ಇತರ ಐದು ಆಸ್ಪತ್ರೆಗಳ ತುರ್ತು ವೈದ್ಯಕೀಯ ಚಿಕಿತ್ಸಾ ವಿಭಾಗ ಅಂತಾರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೇರಿಸಲು 5 ಕೋಟಿ ಅನುದಾನ
• ಹಾವೇರಿಯಲ್ಲಿ 20 ಹಾಸಿಗೆಗಳ ಆಯುಷ್ ಸಂಯುಕ್ತ ಆಸ್ಪತ್ರೆ 20 ಕೋಟೆ ರೂ. ವೆಚ್ಚದಲ್ಲಿ ಆರಂಭಿಸುವುದಾಗಿ ಘೋಷಣೆ
• ರಾಜ್ಯದ ಎಲ್ಲಾ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸಿಮುಲೇಶನ್ ಲ್ಯಾಬ್ ಮತ್ತು ತಲಾ 30 ಲಕ್ಷ ವೆಚ್ಚದಲ್ಲಿ ಮಾಲಿಕ್ಯುಲರ್ ಬಯಾಲಜಿ ಲ್ಯಾಬ್ ಸ್ಥಾಪನೆ
• ಮಹಿಳೆಯರ ಕಲ್ಯಾಣಕ್ಕಾಗಿ 953 ಕಾರ್ಯಕ್ರಮಗಳಿಗೆ 37783 ಕೋಟಿ ವೆಚ್ಚ
• ಮೊದಲ ಬಾರಿಗೆ ಮಕ್ಕಳ ಆಯವ್ಯಯ ಮಂಡನೆ 18 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಸಂಬಂಧಿಸಿದ 279 ಯೋಜನೆಗಳಿಗೆ 36340 ಕೋಟಿ ಅನುದಾನ
• 5.67 ಕೋಟಿ ವೆಚ್ಚದಲ್ಲಿ ಹೊಸದಾಗಿ 7 ಬಾಲಮಂದಿರಗಳ ಸ್ಥಾಪನೆ
• ಬಾಲ ಮಂದಿರದಿಂದ ಬಿಡುಗಡೆ ಹೊಂದಿದವರ ಜೀವನೋಪಾಯಕ್ಕಾಗಿ ಮೂರು ವರ್ಷದ ಅವಧಿಗೆ ತಿಂಗಳಿಗೆ 5 ಸಾವಿರ ರೂಗಳ ಆರ್ಥಿಕ ನೆರವು ನೀಡುವ ಉಪಕಾರ ಯೋಜನೆ ಜಾರಿ
• ರಾಜ್ಯಾದ್ಯಂತ ಟ್ರಾನ್ಸ್ಜೆಂಡರ್ ಮೂಲ ಹಂತದ ಸಮೀಕ್ಷೆಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ 70 ಲಕ್ಷ ಬಿಡುಗಡೆ
• ಕಲಬುರಗಿಯಲ್ಲಿ ಪ್ರೈಸ್ ಕಮ್ ಟಾಕಿಂಗ್ ಲೈಬ್ರರಿ 30 ಲಕ್ಷ ವೆಚ್ಚದಲ್ಲಿ ಸ್ಥಾಪನೆ. ಮೈಸೂರಿನ ಸರ್ಕಾರಿ ಬ್ರೈಲ್ ಮುದ್ರಣಾಲಯಕ್ಕೆ 80 ಲಕ್ಷ ವೆಚ್ಚದಲ್ಲಿ ಆಧುನಿಕ ಮುದ್ರಣ ಯಂತ್ರ ಖರೀದಿ
• ರಾಜ್ಯದ ಐದುನೂರು ಅಂಧ ವಿದ್ಯಾರ್ಥಿಗಳಿಗೆ ತಲಾ 25 ಸಾವಿರ ರೂಗಳ ಕಿಟ್ ವಿತರಣೆ
• ಕಟ್ಟಡ ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರುಗಳಿಗೆ ಮುಖ್ಯಮಂತ್ರಿಗಳ ಆರೋಗ್ಯ ಸುರಕ್ಷಾ ಯೋಜನೆಯಡಿ ಅನುಮೋದಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಉಚಿತ ಪ್ರೀತಿ ಹೆಲ್ತ್ ಕಾರ್ಡ್ ವಿತರಣೆ
• ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರಿಗೆ ವನಿತಾ ಸಂಗಾತಿ ಯೋಜನೆಯಡಿ ಮಾಸಿಕ ಬಸ್ ಪಾಸ್ ನೀಡಲು 25 ಕೋಟಿ ಅನುದಾನ
• ನಗರ ಪ್ರದೇಶದಲ್ಲಿನ ಕಟ್ಟಡ ಕಾರ್ಮಿಕರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಮೊಬೈಲ್ ಕ್ಲಿನಿಕ್ ಆರಂಭ
• ಕಟ್ಟಡ ಕಾರ್ಮಿಕರ ಅನುಕೂಲಕ್ಕಾಗಿ ಹತ್ತು ಸಂಚಾರಿ ಶಿಶುಪಾಲನಾ ಕೇಂದ್ರ ಸೇರಿ 110 ಕಿತ್ತೂರು ರಾಣಿಚೆನ್ನಮ್ಮ ಶಿಶುಪಾಲನಾ ಕೇಂದ್ರ ಸ್ಥಾಪನೆ
• ಒಟ್ಟಾರೆ ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ವಲಯಕ್ಕೆ ಒಟ್ಟಾರೆಯಾಗಿ 72093 ಕೋಟಿ ರೂಗಳ ಅನುದಾನವನ್ನುಮೀಸಲಿರಿಸುವುದಾಗಿ ಸಿಎಂ ಬಜೆಟ್ನಲ್ಲಿ ಘೋಷಣೆ ಮಾಡಿದ್ದಾರೆ.