ETV Bharat / state

ವಿಧಾನಸಭೆ ಚುನಾವಣೆ: ಎಲ್ಲೆಡೆ ಬಹುತೇಕ ಶಾಂತಿಯುತ ಮತದಾನ.. ಅಲ್ಲಲ್ಲಿ ಸಣ್ಣಪುಟ್ಟ ಗಲಾಟೆ

ವಿಧಾನಸಭೆ ಚುನಾವಣೆ ಮತದಾನ ಬಿರುಸಿನಿಂದ ಸಾಗಿದ್ದು, ಬಹುತೇಕ ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ನಡೆಯುತ್ತಿದೆ. ಆದ್ರೆ ಅಲ್ಲಲ್ಲಿ ಗಲಭೆ, ಮಾರಾಮಾರಿ ನಡೆದಿರುವುದರ ಬಗ್ಗೆ ವರದಿಯಾಗಿದೆ.

Karnataka assembly election  going on peaceful polling  peaceful polling in many constituency  ವಿಧಾನಸಭೆ ಚುನಾವಣೆ  ಎಲ್ಲೆಡೆ ಬಹುತೇಕ ಶಾಂತಿಯುತ ಮತದಾನ  ಅಲ್ಲಲ್ಲಿ ಗಲಭೆ  ವಿಧಾನಸಭೆ ಚುನಾವಣೆ ಮತದಾನ  ಬಹುತೇಕ ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ  ಗಲಾಟೆ ಕುರಿತಂತ ವರದಿಗಳು ಮುನ್ನೆಲೆಗೆ  ಕಲಬುರಗಿಯಲ್ಲಿ ಚುನಾವಣಾಧಿಕಾರಿ ಬದಲು  ಐಟಿ ಸೆಲ್​ ಮೇಲೆ ಕಾಂಗ್ರೆಸ್​ ದಾಳಿ  ರಾಯಚೂರಿನಲ್ಲಿ ಕಾಂಗ್ರೆಸ್​ ಬಿಜೆಪಿ ಮಧ್ಯೆ ಜಗಳ  ಚಿಕ್ಕಮಗಳೂರಿನಲ್ಲಿ ಮಾತಿನ ಚಕಮಕಿ  ಬಳ್ಳಾರಿಯಲ್ಲಿ ಕಾರ್ಯಕರ್ತರ ಮಧ್ಯೆ ಮಾರಾಮಾರಿ
ಎಲ್ಲೆಡೆ ಬಹುತೇಕ ಶಾಂತಿಯುತ ಮತದಾನ
author img

By

Published : May 10, 2023, 12:18 PM IST

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಬಹುತೇಕ ಶಾಂತಿಯುತ ಮತದಾನ ನಡೆಯುತ್ತಿದೆ. ಆದ್ರೆ ಅಲ್ಲಲ್ಲಿ ಗಲಾಟೆ ಕುರಿತಂತ ವರದಿಗಳು ಬಂದಿವೆ.

ಕಲಬುರಗಿಯಲ್ಲಿ ಚುನಾವಣಾಧಿಕಾರಿ ಬದಲು: ಬಿಜೆಪಿಗೆ ಮತ ಹಾಕುವಂತೆ ಚುನಾವಣಾಧಿಕಾರಿಯಿಂದ ಮತದಾರರಿಗೆ ಸೂಚನೆ ನೀಡುತ್ತಿದ್ದರು ಎಂಬ ಆರೋಪ ಕಲಬುರಗಿಯಿಂದ ಕೇಳಿ ಬಂದಿದೆ. ಕಲಬುರಗಿ ಜಿಲ್ಲೆ ಚಿತ್ತಾಪುರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಗೊಳಪಡುವ ಚಾಮನೂರು ಗ್ರಾಮದ ಮತಗಟ್ಟೆ ಸಂಖ್ಯೆ 178 ರಲ್ಲಿ ಚುನಾವಣೆ ಅಧಿಕಾರಿ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ.

ಮತದಾನ ಮಾಡಿದ ಗ್ರಾಮದ ಕೆಲ ಮತದಾರರು ಚುನಾವಣೆ ಅಧಿಕಾರಿ ಬಿಜೆಪಿಗೆ ಮತದಾನ ಮಾಡುವಂತೆ ಸೂಚನೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಹೀಗಾಗಿ178ರ ಮತಗಟ್ಟೆಯಲ್ಲಿ ಅಧಿಕಾರಿಗಳು ಕೆಲಕಾಲ ಮತದಾನ ಸ್ಥಗಿತ ಮಾಡಿ ತಕ್ಷಣ ಚುನಾವಣಾಧಿಕಾರಿಯನ್ನು ಬದಲಾಯಿಸಿದ್ದಾರೆ. ಇನ್ನು ಚುನಾವಣಾಧಿಕಾರಿಯ ವರ್ತನೆಗೆ ಚಿತ್ತಾಪುರ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಟ್ವಿಟರ್​ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಐಟಿ ಸೆಲ್​ ಮೇಲೆ ಕಾಂಗ್ರೆಸ್​ ದಾಳಿ: ಕಲಬುರಗಿ ನಗರದ ಸಂಗಮ್ ಚಿತ್ರಮಂದಿರ ಬಳಿಯ ಬಿಜೆಪಿ ಐಟಿ ಸೆಲ್ ಮೇಲೆ ದಾಳಿ ನಡೆದಿದ್ದು, ಪರವಾನಗಿ ಇದ್ದರೂ ಕಾಂಗ್ರೆಸ್​ನವರು ಸೋಲಿನ‌ ಭೀತಿಯಿಂದ ದಾಳಿ ಮಾಡಿದ್ದಾರೆ ಎಂದು ಶಾಸಕ, ಬಿಜೆಪಿ ಅಭ್ಯರ್ಥಿ ದತ್ತಾತ್ರೇಯ ಪಾಟೀಲ್ ರೇವೂರ್ ಪ್ರತಿಕ್ರಿಯೆ ನೀಡಿದ್ದಾರೆ. ಗುಲ್ಬರ್ಗ ದಕ್ಷಿಣ ಬಿಜೆಪಿ ಐಟಿ ಸೆಲ್ ಮೇಲೆ ಇಂದು ಬೆಳಗ್ಗೆ ಕಾಂಗ್ರೆಸ್ ಕಾರ್ಯಕರ್ತರು ದಾಳಿ ಮಾಡಿದ್ದಾರೆ.

ಕಮಿಷನರ್ ಕೂಡಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದು, ಮೇ 16 ರವರೆಗೆ ಪರವಾನಗಿ ಇರುವ ಬಗ್ಗೆ ತಿಳಿದು ಬಿಟ್ಟು‌ ಹೋಗಿದ್ದಾರೆ. ಆದರೆ ಉದ್ದೇಶ ಪೂರ್ವಕವಾಗಿ ಕಾಂಗ್ರೆಸ್​ನವರು ಗೊಂದಲ ಸೃಷ್ಟಿ ಮಾಡ್ತಿದ್ದಾರೆ. ಕಾಂಗ್ರೆಸ್​ನವರಿಗೆ ಸೋಲಿನ ಭೀತಿ ಶುರು ಆಗಿದೆ. ನಗರದಲ್ಲಿ ಕಾಂಗ್ರೆಸ್​ನವರು ನಮ್ಮ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡ್ತಿದ್ದಾರೆ ಎಂದು ರೇವೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಯಚೂರಿನಲ್ಲಿ ಕಾಂಗ್ರೆಸ್​-ಬಿಜೆಪಿ ಮಧ್ಯೆ ಜಗಳ: ಮಸ್ಕಿ ವಿಧಾನಸಭಾ ಕ್ಷೇತ್ರದ ಹರ್ವಾಪುರದ ಮತಗಟ್ಟೆ ಬಳಿ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ನಡುವೆ ಜಗಳ ನಡೆದಿರುವುದು ಬೆಳಕಿಗೆ ಬಂದಿದೆ. ಕಮಲ ಚಿನ್ಹೆ ಇರುವ ಮತ ಚೀಟಿ ನೀಡುತ್ತಿದ್ದ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಆಕ್ಷೇಪ ವ್ಯಕ್ತಿವಾಗಿದ್ದು, ಮಾತಿನ ಚಕಮಕಿ ನಡೆಯಿತು. ಇನ್ನು ಇವರ ಜಗಳ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಕೂಡಲೇ ಮಧ್ಯೆ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

ಚಿಕ್ಕಮಗಳೂರಿನಲ್ಲಿ ಮಾತಿನ ಚಕಮಕಿ: ಕಾಂಗ್ರೆಸ್ ಅಭ್ಯರ್ಥಿ ಹಾಗೂ ನಗರಸಭೆ ಅಧ್ಯಕ್ಷ ನಡುವೆ ಮಾತಿನ ಚಕಮಕಿ ನಡೆದಿರುವ ಘಟನೆ ಚಿಕ್ಕಮಗಳೂರಿನಲ್ಲಿ ಕಂಡು ಬಂತು. ಬಸವನಹಳ್ಳಿ ಮತಗಟ್ಟೆಯ ಮುಂದೆ ಕಾಂಗ್ರೆಸ್ ಅಭ್ಯರ್ಥಿ ಎಚ್​ಡಿ ತಮ್ಮಯ್ಯ ಮತ್ತು ಬಿಜೆಪಿ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ವೇಣುಗೋಪಾಲ್​ಗೆ ಕಾಂಗ್ರೆಸ್​ ಅಭ್ಯರ್ಥಿ ಎಚ್ಚರಿಕೆ ನೀಡಿದ ಪ್ರಸಂಗ ನಡೆಯಿತು.

ಬಳ್ಳಾರಿಯಲ್ಲಿ ಕಾರ್ಯಕರ್ತರ ಮಧ್ಯೆ ಮಾರಾಮಾರಿ: ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಸಂಜೀವರಾಯನಕೋಟೆ ಗ್ರಾಮದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆಯಂತೆ. ಮಾರಾಮಾರಿಯಲ್ಲಿ ಕಾಂಗ್ರೆಸ್ ಸ್ಥಳೀಯ ಮುಖಂಡ ಉಮೇಶ್ ಗೌಡ ತಲೆಗೆ ಪೆಟ್ಟಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತಿಚೆಗೆ ಉಮೇಶ್ ಗೌಡ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದರು. ಮತದಾನಕ್ಕೆ ತೆರಳುವೆ ವೇಳೆ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಈ ವೇಳೆ ಉಮೇಶ್ ಗೌಡ ಅವರಿಗೆ ತಲೆಗೆ ಕಲ್ಲೇಟು ಬಿದ್ದಿದ್ದು, ತಲೆಯಿಂದ ರಕ್ತ ಸುರಿದು, ಗಾಯವಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಳ್ಳಾರಿ ಗ್ರಾಮೀಣ ಪೋಲಿಸರ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಓದಿ: Live Updates: ರಾಜ್ಯದಲ್ಲಿ ಸರಾಗವಾಗಿ ಸಾಗುತ್ತಿರುವ ವೋಟಿಂಗ್ ಪ್ರಕ್ರಿಯೆ ​- ಈವರೆಗೆ 20.99% ಮತದಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.