ಬೆಂಗಳೂರು: ತುಳುವರ ಹೆಸರಿನಲ್ಲಿ ಟ್ರೋಲ್ ಪೇಜ್ ತೆರೆದು ಅವಹೇಳಕಾರಿ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ಕನ್ನಡ ಸಂಘಟನೆ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿ ಆರೋಪಿಗಳ ಪತ್ತೆಗೆ ಒತ್ತಾಯಿಸಿದ್ದಾರೆ.
ತುಳುವರ ಹೆಸರಲ್ಲಿ ನಕಲಿ ಟ್ರೋಲ್ ಪೇಜ್ ಆರಂಭಿಸಿದ ಕಿಡಿಗೇಡಿಗಳು ಆ ಪೇಜ್ನಲ್ಲಿ ಕರ್ನಾಟಕ ಬಾವುಟವನ್ನು ಟಾಯ್ಲೆಟ್ ಪೇಪರ್ಗೆ ಹೋಲಿಕೆ, ಕುವೆಂಪುರವರ ಕೇಶವಿನ್ಯಾಸವನ್ನು ಅಶ್ಲೀಲವಾಗಿ ಬಿಂಬಿಸುವುದು ಮತ್ತು ಸುಧಾ ಮೂರ್ತಿಯವರ ಬಗ್ಗೆ ಕೀಳು ಪದಪ್ರಯೋಗ ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದ್ದು. ಸೈಬರ್ ಕ್ರೈಂ ಠಾಣೆಯಲ್ಲಿ ಕರವೇ ಅಧ್ಯಕ್ಷ ಜಯರಾಜ್ ನಾಯ್ಡು ತಂಡ ದೂರು ನೀಡಿದ್ದಾರೆ.