ETV Bharat / state

ಸಿದ್ದರಾಮಯ್ಯ ಒಬ್ಬರೆ ಸೈಟ್​ ಪಡೆದಿಲ್ಲ, ಸಿಬಿಐಗೆ ಕೊಟ್ರೆ ಎಲ್ಲ ಪಕ್ಷದವರ ಹೆಸರು ಹೊರಗೆ ಬರುತ್ತೆ: ಬಸನಗೌಡ ಪಾಟೀಲ್ ಯತ್ನಾಳ್​ - MLA BASANAGOWDA PATIL YATNAL

ಸಿದ್ದರಾಮಯ್ಯ ಅವರೇ ಎಲ್ಲರನ್ನು ರಕ್ಷಣೆ ಮಾಡುತ್ತಿದ್ದಾರೆ. ಎಂತಹ ಒಳ್ಳೆಯ ಮನುಷ್ಯ ಸಿದ್ದರಾಮಯ್ಯ. ಅಡ್ಜಸ್ಟ್​ಮೆಂಟ್​ಗಾಗಿ ಸಿದ್ದರಾಮಯ್ಯ ಬಲಿ ಆಗುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಹೇಳಿದರು.

MLA Basanagowda Patil Yatnal
ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ (ETV Bharat)
author img

By ETV Bharat Karnataka Team

Published : Nov 16, 2024, 6:50 PM IST

Updated : Nov 16, 2024, 7:46 PM IST

ಹುಬ್ಬಳ್ಳಿ: "ಮುಡಾ ಪ್ರಕರಣವನ್ನು ಸಿಬಿಐಗೆ ಕೊಟ್ಟರೆ ಎಲ್ಲಾ ಪಕ್ಷದವರ ಹೆಸರುಗಳೂ ಹೊರಗೆ ಬರುತ್ತವೆ. ಎಲ್ಲ ಪಕ್ಷದಲ್ಲೂ ಕಳ್ಳರಿದ್ದಾರೆ ಯಾರೂ ಹರಿಶ್ಚಂದ್ರನ ಎರಡನೇ ಸಂತತಿಯವರು ಇಲ್ಲ" ಎಂದು ಬಸನಗೌಡ ಪಾಟೀಲ್​ ಯತ್ನಾಳ್​ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿಎಂ ಸಿದ್ದರಾಮಯ್ಯ ಒಬ್ಬರೇ ಸೈಟ್ ತಗೊಂಡಿಲ್ಲ. ಎಲ್ಲ ಪಕ್ಷದವರು ಸೈಟ್​ ತೆಗೆದುಕೊಂಡಿದ್ದಾರೆ. ಎಲ್ಲ ಪಕ್ಷದವರು ಅಂತ ಹೇಳಿದ ಮೇಲೆ ಬಿಜೆಪಿ ಬೇರೆ ಇರುತ್ತಾ?" ಎಂದು ಪ್ರಶ್ನೆ ಮಾಡಿದರು.

ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ (ETV Bharat)

"ಸಿದ್ದರಾಮಯ್ಯ ಅವರೇ ಎಲ್ಲರನ್ನು ರಕ್ಷಣೆ ಮಾಡುತ್ತಿದ್ದಾರೆ. ಎಂತಹ ಒಳ್ಳೆಯ ಮನುಷ್ಯ ಸಿದ್ದರಾಮಯ್ಯ. ಅಡ್ಜಸ್ಟ್​ಮೆಂಟ್​ಗಾಗಿ ಸಿದ್ದರಾಮಯ್ಯ ಬಲಿ ಆಗುತ್ತಿದ್ದಾರೆ" ಎಂದು ಹೇಳಿದರು.

ಆಪರೇಷನ್ ಕಮಲ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, "ಸಿದ್ದರಾಮಯ್ಯ ಅವರ ಬಳಿ ಆಧಾರ ಏನಿದೆ? ರೆಕಾರ್ಡಿಂಗ್ ಇದೆಯಾ? ಹಾಗೇನಾದರೂ ಇದ್ದರೆ ಅರೆಸ್ಟ್ ಮಾಡಿಸಲಿ. ನಮಗೆ ಕಾಂಗ್ರೆಸ್ ಸರ್ಕಾರದಲ್ಲಿರುವ ಎಂಎಲ್ಎ, ಮಂತ್ರಿ ಯಾರೂ ಬೇಡ. ಇವರನ್ನು ತಗೊಂಡು ನಾವು ಸರ್ಕಾರ ಮಾಡಿದ್ರೆ ಮುಗೀತು. ಕಾಂಗ್ರೆಸ್ ಸರ್ಕಾರ ಈಗಲೇ ಪತನ ಆದರೆ, ಬಿಜೆಪಿ 150 ಸೀಟ್ ಬರುತ್ತೆ. ನಾವ್ಯಾಕೆ ಆಪರೇಷನ್​ದಂತಹ ಹಲ್ಕಾ ಕೆಲಸ ಮಾಡೋದು" ಎಂದರು.

"ಯಾವುದೇ ಕಾರಣಕ್ಕೂ ಆಪರೇಷನ್ ಕಮಲ ಮಾಡೋದು ಬೇಡ ಅಂತ ಹೈಕಮಾಂಡ್ ನಾಯಕರಿಗೆ ನಾನು ಹೇಳಿದ್ದೇನೆ. ಬಿಜೆಪಿಯಲ್ಲಿ ಯಾರಿಗೆ ಮುಖ್ಯಮಂತ್ರಿ ಆಗಬೇಕೋ ಅವರಿಗೆ ಗಡಿಬಿಡಿ ಇದೆ, ನಮಗಿಲ್ಲ. ನಾನು ಶಾಸಕನಾಗಿ ಕೆಲಸ ಮಾಡುತ್ತೇನೆ" ಎಂದರು.

"ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಇಬ್ಬರೂ ನಾಟಕ ಕಂಪನಿ ಮಾಡಿದ್ರು ನನ್ನ ಜೊತೆ. ನಿಮ್ಮನ್ನು ಮಂತ್ರಿ ಮಾಡುತ್ತೇವೆ ಎಂದು ಬೊಮ್ಮಾಯಿ ಹೇಳುತ್ತಿದ್ದರು. ಆಪರೇಷನ್ ಕಮಲಕ್ಕೆ ನನ್ನದಂತೂ ಒಪ್ಪಿಗೆ ಇಲ್ಲ" ಎಂದರು.

ಇದನ್ನೂ ಓದಿ: ನನ್ನನ್ನು ಮುಟ್ಟಿದರೆ ಸಮ್ಮನೆ ಇರಲ್ಲ ಎಂಬ ಸಿಎಂ ಹೇಳಿಕೆ ನಮಗಲ್ಲ, ಡಿಕೆಶಿಗೆ ಹೇಳಿರುವುದು ಎಂದ ಯತ್ನಾಳ್

Last Updated : Nov 16, 2024, 7:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.