ಬೆಂಗಳೂರು: ಎಂಇಎಸ್ ನಿಷೇಧಿಸಬೇಕು ಎಂದು ಇಂದು ಕರೆಕೊಟ್ಟಿದ್ದ ಕರ್ನಾಟಕ ಬಂದ್ ಅನ್ನು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಸಂಘಟನೆಗಳು ಹಿಂಪಡೆದಿವೆ.
ಬಂದ್ ರದ್ದು ಮಾಡಿದ ಸಂಘಟನೆಗಳು ಟೌನ್‌ಹಾಲ್ ಬಳಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದೇವೆ ಎಂದು ಹೇಳಿವೆ. ಇಂದಿನ ಬದಲು ಬೇಡಿಕೆ ಈಡೇರಿಸದಿದ್ದರೆ ಜನವರಿ 22ಕ್ಕೆ ಕರ್ನಾಟಕ ಬಂದ್ ಆಗಲಿದೆ ಎಂದು ನಿನ್ನೆ ಸಿಎಂ ಜೊತೆ ನಡೆದ ಸಂಧಾನ ಸಭೆಯ ಬಳಿಕ ಘೋಷಿಸಿದ್ದಾರೆ.
ಇದನ್ನೂ ಓದಿ: ಪಿಎಸ್ಐ ಮೇಲೆ ಹಲ್ಲೆ ನಡೆಸಿದ್ದ ರೌಡಿಶೀಟರ್ ಕಾಲಿಗೆ ಗುಂಡು ಹೊಡೆದ ಪೊಲೀಸರು
ವಾಟಾಳ್ ನಾಗರಾಜ್ ಜೊತೆಗಿನ ಸಿಎಂ ಸಂಧಾನ ಸಭೆ ಬುಧವಾರ ಸಂಜೆ ಯಶಸ್ವಿಯಾಗಿತ್ತು. ಇಂದು ನಡೆಯಬೇಕಿದ್ದ ಕರ್ನಾಟಕ ಬಂದ್ ಗಡುವು ನೀಡಿ ಜನವರಿ 22ಕ್ಕೆ ಮುಂದೂಡಲಾಗಿದೆ ಎಂದು ಸಭೆಯ ಬಳಿಕ ಸಾ.ರಾ ಗೋವಿಂದ್ ಹೇಳಿದ್ದರು.
ಹಲವು ಸಂಘಟನೆಗಳ ವಿರೋಧ:
ಈ ಮೊದಲು ಕೂಡಾ ಕೊರೊನಾ ಸಮಯದಲ್ಲಿ ಬಂದ್ ಬೇಡ ಎಂದು ಹಲವು ಸಂಘಟನೆಗಳು ಹೇಳಿದ್ದವು. ಆದರೆ, ಈ ವಿರೋಧದ ನಡುವೆ ಬಂದ್ಗೆ ಮುಂದಾಗಿದ್ದ ವಾಟಾಳ್ ಮನವೊಲಿಸಲು ಹಲವು ಸಂಘಟನೆಗಳ ಕಾರ್ಯಕರ್ತರು, ಮುಖಂಡರು ಯತ್ನಿಸಿದ್ದರು. ಇದಾದ ಬಳಿಕ, ಸಿಎಂ ಬೊಮ್ಮಾಯಿ ಜೊತೆಗಿನ ಚರ್ಚೆ ನಡೆದು ಅವರು ಬಂದ್ ಹಿಂಪಡೆದುಕೊಂಡರು.