ETV Bharat / state

ಕಂಬಾರರದು ಬದುಕಿನ ಕುರಿತು ಆಶಾಭಾವನೆ ಮೂಡಿಸುವ ನಾಟಕಗಳಾಗಿವೆ: ಟಿ ಎಸ್ ನಾಗಾಭರಣ

author img

By

Published : May 14, 2023, 9:08 PM IST

ಕಂಬಾರರು ಕ್ರಿಯಾಶೀಲರಾಗಿ ತಮ್ಮನ್ನು ತಾವು ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಲೇಖಕ ಮತ್ತು ರಂಗ ಚಿಂತಕ ನಾರಾಯಣ ರಾಯಚೂರ್ ಅವರು ತಿಳಿಸಿದ್ದಾರೆ.

ಟಿ ಎಸ್ ನಾಗಾಭರಣ
ಟಿ ಎಸ್ ನಾಗಾಭರಣ

ಬೆಂಗಳೂರು : ಕಂಬಾರರ ನಾಟಕ ಸಾಹಿತ್ಯದ ಭಾಷೆಯೇ ಭಿನ್ನ. ಅದರದ್ದೇ ಆದ ಪದಗತಿಯಲ್ಲಿ ವಿಶೇಷವೆನ್ನಿಸುತ್ತದೆ. ಭಾಷೆಯ ಒಳಗಿರುವ ಕಸುವನ್ನು ಇನ್ನೊಂದು ಭಾಷೆಯ ಜೊತೆಗೆ ಸಮೀಕರಿಸುವ ಕೆಲಸ ಮಾಡಲಾಗಿದೆ. ಬದುಕಿನ ಬಗ್ಗೆ ಆಶಾ ಭಾವನೆ ಮೂಡಿಸುವ, ನಾಳೆಗಳಿವೆ ಎಂದು ತಿಳಿಸುವ ನಾಟಕ ಕೃತಿಗಳಿವು ಎಂದು ಚಲನಚಿತ್ರ ನಿರ್ದೇಶಕ, ನಟ ಟಿ ಎಸ್ ನಾಗಾಭರಣ ತಿಳಿಸಿದರು.

ಅಂಕಿತ ಪುಸ್ತಕದ ವತಿಯಿಂದ ಭಾನುವಾರದಂದು ಹಮ್ಮಿಕೊಂಡಿದ್ದ ಹಿರಿಯ ಸಾಹಿತಿ ಚಂದ್ರಶೇಖರ್ ಕಂಬಾರ ಅವರ ‘ಸಾವಿರದ ಶರಣವ್ವ ಕನ್ನಡದ ತಾಯೇ’ ಮಕ್ಕಳಿಗಾಗಿ ಹನ್ನೆರಡು ಏಕಾಂಕ ನಾಟಕಗಳು, ‘ಕಿತ್ತೂರು ಚೆನ್ನಮ್ಮ ಮತ್ತು ಇತರ ಮಕ್ಕಳ ನಾಟಕಗಳು’, ‘ಅಮೋಘವರ್ಷ ನೃಪತುಂಗ ಮತ್ತು ಇತರ ನಾಟಕಗಳು’ ಕೃತಿಗಳ ಲೋಕಾರ್ಪಣಾ ಕಾರ್ಯಕ್ರಮವು ನಗರದ ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ನಡೆಯಿತು.

ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಚಲನಚಿತ್ರ ನಿರ್ದೇಶಕ, ನಾಗಾಭರಣ, ದೃಶ್ಯದ ವೈಭವವನ್ನು, ನಾಟಕದ ಲವಲವಿಕೆಯನ್ನು ಮಕ್ಕಳ ಮನೋರಂಗದಲ್ಲಿ ಆಗುವಂತಹ ಬೇರೆ ಬೇರೆ ರೀತಿಯ ಸೂಕ್ಷ್ಮ ವಿಚಾರಗಳನ್ನು ನಾಟಕಗಳಲ್ಲಿ ಗಮನಿಸಿದ್ದೇನೆ. ಎಲ್ಲರಲ್ಲಿ ಒಂದಾಗಿಸುವ, ಎಲ್ಲರಲ್ಲೂ ಒಳಗೊಳ್ಳುವ, ಎಲ್ಲರ ಜೊತೆಯನ್ನ ಮತ್ತೆ ಮತ್ತೆ ಸಮೀಕರಿಸಿಕೊಳ್ಳುವಂತಹ ನಾಟಕಗಳಾಗಿವೆ ಎಂದು ಹೇಳಿದರು.

ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಲೇಖಕ, ಸಂಸ್ಕೃತಿ ಚಿಂತಕ ಬಸವರಾಜ ಕಲ್ಗುಡಿ, ಕಂಬಾರರ ಹಾಗೆ ಪ್ರಕಾರದ ಮಿತಿಯನ್ನು ದಾಟಿದಂತವರು ಮತ್ತು ಪ್ರಕಾರವನ್ನು ಒಂದು ಸಂಗೋಪನ ಮಾಡಿದವರು ಕಡಿಮೆಯೇ. ಕನ್ನಡ ಸಂಸ್ಕೃತಿ, ಕನ್ನಡ ಸೃಜನಶೀಲತೆಗೆ ಸೇರಿದಂತೆ ಕಂಬಾರರ ಹುಡುಕಾಟ ದೊಡ್ಡದು ಎಂದು ಹೇಳಿದರು.

ನಮ್ಮ ಸಾಹಿತ್ಯದ ಶೈಲಿಯನ್ನು ಬಳಸಿಕೊಂಡು, ಆಧುನಿಕತೆಯ ಸಂದಿಗ್ಧತೆಯೊಂದಿಗೆ ಮುಖಾಮುಖಿಯಾಗಿಸುವ ಪರಿ ದೊಡ್ದದು. ಕಂಬಾರರು ಇಡೀ ಭಾರತೀಯ ಪ್ರಪಂಚದಲ್ಲಿ, ಆಧುನಿಕ ಭಾರತದ ಬರಹ ಪ್ರಪಂಚದ ಪರಂಪರೆಯಲ್ಲಿ ಒಂದು ಭಿನ್ನವಾದ ಮಾರ್ಗವನ್ನು ತುಳಿದವರು ಎಂದು ಬಣ್ಣಿಸಿದರು.

ಲೇಖಕ ಮತ್ತು ರಂಗ ಚಿಂತಕ ನಾರಾಯಣ ರಾಯಚೂರ್, ಮಕ್ಕಳ ಸಾಹಿತ್ಯವನ್ನು ಬರೆಯುವುದು ಅಷ್ಟು ಸುಲಭವಲ್ಲ. ಆದರೆ ಕಂಬಾರರು ಕ್ರಿಯಾಶೀಲರಾಗಿ ಮಕ್ಕಳ ಸಾಹಿತ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಬರವಣಿಗೆಯ ಶೈಲಿಯೇ ವಿಭಿನ್ನ. ಮಕ್ಕಳ ಕ್ರಿಯಾಶೀಲತೆ ಅಭಿವೃದ್ದಿ ಹೊಂದಬೇಕಾದರೆ ಮಕ್ಕಳ ರಂಗಭೂಮಿ ಕುರಿತ ನಾಟಕಗಳು ಮುಖ್ಯ. ಮಕ್ಕಳ ಸಾಹಿತ್ಯ ವಲಯಕ್ಕೆ ಕಂಬಾರರ ಕೊಡುಗೆ ಅಪೂರ್ವವಾದದ್ದು ಎಂದು ತಿಳಿಸಿದರು.

ಮಕ್ಕಳ ಗುಣವಿದ್ದರೆ ನಮಗೂ ಮೋಕ್ಷ ಖಂಡಿತ: ಕಾದಂಬರಿಕಾರ ಗಜಾನನ ಶರ್ಮ ಮಾತನಾಡಿ, ಯಾರಲ್ಲಿ ಬಾಲ್ಯದ ತುಂಟತನ ಮತ್ತು ಗುಣವಿರುತ್ತದೆಯೋ ಅವರು ಮಾತ್ರ ಮಕ್ಕಳ ನಾಟಕಗಳನ್ನು ಬರೆಯಬಹುದು ಹಾಗೂ ಅನುಭವಿಸಬಹುದು. ಇನ್ನು ಮಕ್ಕಳಿಗೆ ಮೋಕ್ಷವಿರುತ್ತದೆ ಎಂಬ ಮಾತಿನಂತೆ, 80-90ರ ದಶಕದಲ್ಲಿ ನಮ್ಮಲ್ಲಿಯೂ ಮಕ್ಕಳ ಗುಣವಿದ್ದರೆ ನಮಗೂ ಮೋಕ್ಷ ಖಂಡಿತ ದೊರೆಯುತ್ತದೆ ಎಂದರು.

ಮಕ್ಕಳಲ್ಲಿ ಸಾಹಿತ್ಯದ ಅರಿವನ್ನು ಮೂಡಿಸಬೇಕು ಹಾಗೂ ಅವರಿಗೆ ಏನನ್ನಾದರೂ ಕೊಡಬೇಕು ಎನ್ನುವ ನಿಟ್ಟಿನಲ್ಲಿ ಈ ಕೃತಿಗಳು ಮೂಡಿಬಂದಿದೆ. ಮಕ್ಕಳು ಸರ್ವತೋಮುಖವಾಗಿ ಬೆಳೆಯಬೇಕಾದರೆ ಅವರಿಗೆ ಸಾಹಿತ್ಯದ ಅಗತ್ಯತೆ ಹೆಚ್ಚಿದೆ. ಅದರಲ್ಲಿ ನಾಟಕವೂ ಒಂದಾಗಿದೆ ಎಂದು ಅಭಿಪ್ರಾಯಪಟ್ಟರು.

ಕತೆ ಇರುವುದೇ ಮಕ್ಕಳಿಗೋಸ್ಕರ: ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಮಾತನಾಡಿ, ಕತೆ ಇರುವುದೇ ಮಕ್ಕಳಿಗೋಸ್ಕರ. ಯಾಕೆಂದರೆ ದೊಡ್ಡವರಿಗೆ ಕತೆಗಳ ಮೇಲೆ ಆಸಕ್ತಿಯಿಲ್ಲ. ಮಕ್ಕಳ ಆಸಕ್ತಿಯನ್ನು ಮಾತ್ರ ಇಲ್ಲಿ ಕಾಣಬಹುದು. ದೊಡ್ಡವರ ಆಸಕ್ತಿಯ ಹಿಂದೆ ಸ್ವಾರ್ಥದ ಆಲೋಚನೆಯಿರುತ್ತದೆ ಎಂದರು.

ಇದನ್ನೂ ಓದಿ: 'ಅವಕಾಶಕ್ಕಾಗಿ ನಿರ್ದೇಶಕರ ಕಾಲು ಹಿಡಿದಿದ್ದೇನೆ': ವೀಕೆಂಡ್‌ ವಿತ್ ರಮೇಶ್‌ ಶೋದಲ್ಲಿ ಚಿನ್ನಿ ಮಾಸ್ಟರ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.