ಬೆಂಗಳೂರು : ಹೈಕೋರ್ಟ್ಗಳಲ್ಲಿ ನ್ಯಾಯಮೂರ್ತಿಗಳನ್ನು ಸಂಬೋಧಿಸುವಾಗ 'ಮೈ ಲಾರ್ಡ್' ಅಥವಾ 'ಯುವರ್ ಲಾರ್ಡ್‌ಶಿಪ್' ಬದಲಿಗೆ 'ಸರ್' ಪದ ಬಳಕೆ ಮಾಡುವುದು ಸೂಕ್ತ ಎಂದು ಹೈಕೋರ್ಟ್ ನ್ಯಾಯಮೂರ್ತಿ ಪಿ. ಕೃಷ್ಣ ಭಟ್ ಸಲಹೆ ನೀಡಿದ್ದಾರೆ.
ಸದ್ಯದ ಭಾರತೀಯ ಸನ್ನಿವೇಶದಲ್ಲಿ ಮೈಲಾರ್ಡ್ ಅಥವಾ ಯುವರ್ ಲಾರ್ಡ್ ಶಿಪ್ ಎಂದು ಬಳಕೆ ಮಾಡುವುದು ಸೂಕ್ತವಲ್ಲ. 'ಸರ್' ಎಂದು ಕರೆಯುವುದು ಘನತೆ ಮತ್ತು ಗೌರವದಿಂದ ಕೂಡಿದೆ. ಅದೇ ಪದ ಬಳಕೆ ಸೂಕ್ತ ಎನಿಸುತ್ತದೆ ಎಂದು ನ್ಯಾಯಮೂರ್ತಿಗಳು ವಕೀಲರಿಗೆ ಸಲಹೆ ನೀಡಿದ್ದಾರೆ.
ನ್ಯಾಯಾಲಯದ ಪ್ರತಿದಿನದ ಕಲಾಪದ ವಿವರ ಪ್ರಕಟಿಸುವ ಕಾಸ್ ಲಿಸ್ಟ್ನಲ್ಲಿಯೂ ನ್ಯಾಯಮೂರ್ತಿಗಳು ಇದೇ ಅಂಶವನ್ನು ಪ್ರಸ್ತಾಪಿಸಿದ್ದಾರೆ. ಅಲ್ಲದೆ, ನ್ಯಾಯಾಲಯಕ್ಕೆ ಆಗಮಿಸಿದ ವಕೀಲರಿಗೂ ಸಹ ಮೈಲಾರ್ಡ್ ಎಂದು ಕರೆಯಬೇಡಿ ಎಂದು ಮೌಖಿಕವಾಗಿ ತಿಳಿಸಿದರೆಂದು ವಕೀಲರು ಹೇಳಿದ್ದಾರೆ.