ETV Bharat / state

RR ನಗರದಲ್ಲಿ ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ: ಸಿದ್ದರಾಮಯ್ಯ ಟಾಂಗ್​​ - Siddaramaiah latest news

ಮುನಿರತ್ನ ಅವರನ್ನು ಕತ್ತು ಹಿಡಿದು ನಾವು ಕಳುಹಿಸಿಲ್ಲ. ಮತದಾರರಿಗೆ ದ್ರೋಹ ಮಾಡಿ ಬಿಜೆಪಿಗೆ ಹೋಗಿದ್ದಾರೆ. ರಾಜಕೀಯವಾಗಿ ಬೆಳೆಸಿದ ಕಾಂಗ್ರೆಸ್ ಪಕ್ಷಕ್ಕೆ ಚೂರಿ ಹಾಕಿ ಹೋಗಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

vote campaign
ಕಾಂಗ್ರೆಸ್ ಅಭ್ಯರ್ಥಿ ಪರ ಸಿದ್ದರಾಮಯ್ಯ ಮತ ಪ್ರಚಾರ
author img

By

Published : Oct 27, 2020, 3:52 PM IST

Updated : Oct 27, 2020, 4:05 PM IST

ಬೆಂಗಳೂರು: ರಾಜರಾಜೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಆಟಕ್ಕುಂಟು ಲೆಕ್ಕಕಿಲ್ಲ. ನಾವು ಅವರ ಬಗ್ಗೆ ಮಾತನಾಡಲ್ಲ. ಇಲ್ಲಿ ನೇರ ಫೈಟ್ ಇರೋದು ಕಾಂಗ್ರೆಸ್ - ಬಿಜೆಪಿಗೆ ಮಾತ್ರ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ಪರ ಸಿದ್ದರಾಮಯ್ಯ ಮತ ಪ್ರಚಾರ

ರಾಜರಾಜೇಶ್ವರಿ ವಿಧಾನಸಭೆ ಕ್ಷೇತ್ರದ ಜೆ.ಪಿ.ಪಾರ್ಕ್ ವಾರ್ಡ್​​​ನಲ್ಲಿ ಇಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ರೋಡ್ ಶೋ ನಡೆಸಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಪರ ಮತಯಾಚಿಸಿದರು. ಈ ವೇಳೆ, ಮಾತನಾಡಿದ ಸಿದ್ದರಾಮಯ್ಯ, ಮುನಿರತ್ನ ಅವರನ್ನು ಕತ್ತು ಹಿಡಿದು ನಾವು ಕಳುಹಿಸಿಲ್ಲ. ಮತದಾರರಿಗೆ ದ್ರೋಹ ಮಾಡಿ ಬಿಜೆಪಿಗೆ ಹೋಗಿದ್ದಾರೆ. ರಾಜಕೀಯವಾಗಿ ಬೆಳೆಸಿದ ಕಾಂಗ್ರೆಸ್ ಪಕ್ಷಕ್ಕೆ ಚೂರಿ ಹಾಕಿ ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ಮುನಿರತ್ನ ಬಿಜೆಪಿಗೆ ಸುಮ್ಮನೆ ಹೋಗಿಲ್ಲ. ಒಬ್ಬರಿಗೆ 25 ರಿಂದ 30 ಕೋಟಿ ಕೊಟ್ಟಿದ್ದಾರೆ ಎಂದು ಆರೋಪಿಸಿದರು.

ನಾನು ಸಿಎಂ ಆಗಿದ್ದಾಗ ಹಲವು ಯೋಜನೆ ತಂದಿದ್ದೆ. ನನ್ನ ಅವಧಿಯಲ್ಲಿ ಬಡ ಜನರಿಗೆ ಉಚಿತವಾಗಿ 7 ಕೆಜಿ ಅಕ್ಕಿ‌ ನೀಡುತ್ತಿದ್ದೆ. ಬಿಜೆಪಿ ಸರ್ಕಾರ ನಾಲ್ಕು ಕೆಜಿ ಕೊಡುತ್ತಿದೆ. ಜನರ ತೆರಿಗೆ ದುಡ್ಡಿನಲ್ಲೇ ಯೋಜನೆ ರೂಪಿಸಿ ಅವರಿಗೆ ಸೌಲಭ್ಯ ಒದಗಿಸುವುದು. ಯಾರೂ ಕೂಡ ಅವರ ಮನೆಯಿಂದ ಹಣ ತಂದು ಜನರಿಗೆ ನೀಡೋದಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೆ ನಾವು 10 ಕೆಜಿ ಅಕ್ಕಿ ಕೊಡುತ್ತೇವೆ. 10 ಕೆಜಿ ಅಕ್ಕಿ ಬೇಕಾದ್ರೆ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ಈ ಹಿಂದೆ ಯಡಿಯೂರಪ್ಪ ಚೆಕ್ ಮೂಲಕ ಲಂಚ ತೆಗೆದುಕೊಳ್ಳುತ್ತಿದ್ದರು, ಸದ್ಯ ಆರ್​​ಟಿಜಿಎಸ್​​ ಮೂಲಕ ಲಂಚ ತೆಗದುಕೊಳ್ಳುತ್ತಿದ್ದಾರೆ. ಲಂಚ ತೆಗೆದುಕೊಳ್ಳುವುದರಲ್ಲಿ ಯಡಿಯೂರಪ್ಪ ಅಪ್ಡೇಟ್​​​ ಆಗಿದ್ದಾರೆ ಎಂದು ಆರೋಪಿಸಿದರು.

ಇನ್ನೂ ರೈತ ಮುಖಂಡ ಮಾರುತಿ ಮಾನ್ಪಡೆ ಸಾವಿಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಕಾರಣ ಎಂಬ ಸಚಿವ ಸದಾನಂದಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿ, ಇದೊಂದು ಬಾಲಿಶ ಹೇಳಿಕೆ. ಕಾನೂನು ತಂದವರು ನಾವಾ? ಹಾಗೆ ನೋಡೋದಾದರೆ ಯಡಿಯೂರಪ್ಪ, ಸದಾನಂದ ಗೌಡ, ಮೋದಿ ಕಾರಣ ಎಂದು ಆರೋಪಿಸಿದರು. ಎಪಿಎಂಸಿ ಮತ್ತು ಭೂಸುಧಾರಣಾ ತಿದ್ದುಪಡಿ ಕಾಯ್ದೆ ತಂದು ಮುಖಂಡರು ಬೀದಿಗೆ ಇಳಿಯುವಂತೆ ಆಯಿತು. ಅವರ ಸಾವಿಗೆ ನೇರ ಕಾರಣ ಬಿಜೆಪಿ ಕೇಂದ್ರ ಸರ್ಕಾರ ಎಂದು ಆರೋಪಿಸಿದರು.

ಶಿರಾದಲ್ಲಿ ಬಿಜೆಪಿ ಹಣ ಹಂಚಿಕೆ ವಿಚಾರ ಪ್ರಸ್ತಾಪಿಸಿ, ಕೆಆರ್ ಪೇಟೆಯಲ್ಲೂ ದುಡ್ಡು ಹಂಚಿದ್ದಾರೆ. ಆದ್ರೆ ಆರ್​ಆರ್ ನಗರ ಮತ್ತು ಶಿರಾದಲ್ಲಿ ಮತದಾರರು ಇವರಿಗೆ ಬುದ್ಧಿ ಕಲಿಸುತ್ತಿದ್ದಾರೆ. ಜನರು ಹಣದ ಆಮಿಷಕ್ಕೆ ಒಳಗಾಗುವುದಿಲ್ಲ ಎಂದು ತಿಳಿಸಿದರು.

Last Updated : Oct 27, 2020, 4:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.