ಬೆಂಗಳೂರು: ಐಟಿ ಡಿಜಿ ಬಿ.ಆರ್.ಬಾಲಕೃಷ್ಣನ್ ನೇತೃತ್ವದಲ್ಲಿ ಮೂವರು ಪ್ರಮುಖ ಮುಸ್ಲಿಂ ಉದ್ಯಮಿಗಳ ಮನೆ, ಕಚೇರಿಗಳ ಮೇಲೆ ಐಟಿ ದಾಳಿ ನಡೆಸಿದೆ.
ಇಂದು ಬೆಳಿಗ್ಗೆ 6 ಗಂಟೆಯಿಂದ 20ಕ್ಕೂ ಹೆಚ್ಚು ಕಡೆಗಳಲ್ಲಿ ಐಟಿ ಅಧಿಕಾರಿಗಳು ಶೋಧ ಕಾರ್ಯ ಮುಂದುವರೆಸಿದ್ದು, ಪ್ರತಿಷ್ಠಿತ ಮುಸ್ಲಿಂ ಉದ್ಯಮಿ ಅಮಾನುಲ್ಲಾ ಖಾನ್, ಕಮಲ್ ಪಾಷಾ, ನಯೀಜ್ ಖಾನ್ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಅಮಾನುಲ್ಲಾ ಖಾನ್ ಬೆಂಗಳೂರು ಅರಮನೆ ಅಲಂಕಾರ ವಹಿವಾಟು ನಡೆಸುತ್ತಿದ್ದು, ಕಮಲ್ ಪಾಷಾರಿಯಲ್ ಗೋಲ್ಡನ್ ಆರ್ಚರಿಯ ಮಾಲೀಕರಾಗಿದ್ದಾರೆ. ಇನ್ನೂ ನಯೀಜ್ ಖಾನ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದು,ಇವರೆಲ್ಲರೂ ಕೂಡ ಬೆಂಗಳೂರು ಕೇಂದ್ರ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಆಪ್ತರಾಗಿದ್ದಾರೆ.
ಈ ಮೂವರ ಕಚೇರಿ, ಮನೆಗಳ ಮೇಲೆ 100ಕ್ಕೂ ಹೆಚ್ಚು ಅಧಿಕಾರಿಗಳು ರೇಡ್ ಮಾಡಿ ಅಪಾರ ಪ್ರಮಾಣದ ನಗದು, ಪತ್ರಗಳು ವಶಪಡಿಸಿದ್ದಾರೆ. ಇನ್ನು ಕೂಡ ದಾಳಿ ಮುಂದುವರೆದಿದೆ.