ETV Bharat / state

ಐಟಿ ದಾಳಿ ಪ್ರಕರಣ: ಡಿಕೆಶಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ - ಮಾಜಿ ಸಚಿವ ಡಿ.ಕೆ.ಶಿವಕುಮಾರ್

ಐಟಿ ದಾಳಿ ಪ್ರಕರಣದಿಂದ ತಮ್ಮನ್ನು ಕೈಬಿಡುವಂತೆ ಕೋರಿ ಮಾಜಿ ಸಚಿವ ಡಿ ಕೆ ಶಿವಕುಮಾರ್ ಅರ್ಜಿ ಸಲ್ಲಿಸಿದ್ದರು. ಸಿಟಿ ಸಿವಿಲ್ ನ್ಯಾಯಲಯದ ನ್ಯಾ.ರಾಮಚಂದ್ರ ಹುದ್ದಾರ್ ಅವರ ಪೀಠ ಈ ಅರ್ಜಿ ವಿಚಾರಣೆಯನ್ನ ಮುಂದೂಡಿದ್ದಾರೆ.

ಡಿಕೆಶಿ
author img

By

Published : Aug 19, 2019, 8:15 PM IST

ಬೆಂಗಳೂರು: ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮುಂದೂಡಿದೆ.

ಐಟಿ ದಾಳಿ ಪ್ರಕರಣದಿಂದ ತಮ್ಮನ್ನು ಕೈಬಿಡುವಂತೆ ಕೋರಿ ಡಿಕೆಶಿ ಅರ್ಜಿ ಸಲ್ಲಿಸಿದ್ದರು. ಸಿಟಿ ಸಿವಿಲ್ ನ್ಯಾಯಲಯದ ನ್ಯಾ.ರಾಮಚಂದ್ರ ಹುದ್ದಾರ್ ಅವರ ಪೀಠ ಈ ಅರ್ಜಿ ವಿಚಾರಣೆಯನ್ನ ಮುಂದೂಡಿದ್ದಾರೆ.

ಡಿಕೆಶಿ ಪರ ವಕೀಲ ಶ್ಯಾಂ ಸುಂದರ್ ವಾದ ಮಂಡನೆ ಮಾಡಿ, 2 ನೇ ಆರೋಪಿ ವಿರುದ್ಧ ಪ್ರಾಷಿಕ್ಯೂಷನ್ ಗೆ ಹೈಕೋರ್ಟ್ ತಡೆ ನೀಡಿದೆ. ನ್ಯಾಯಾಲಯದಲ್ಲಿ ಸಾಕ್ಷ್ಯ ವಿಚಾರಣೆ ವೇಳೆ ಎಲ್ಲಾ ಆರೋಪಿಗಳು ಹಾಜರಿರಬೇಕು. ಆದರೆ‌, 2 ನೇ ಆರೋಪಿ ಸಚಿನ್ ನಾರಾಯಣ್ ಗೈರುಹಾಜರಿ ಇರುವಾಗ ವಿಚಾರಣೆ ನಡೆಸುವುದು ಬೇಡ. ಹೀಗಾಗಿ ಸಾಕ್ಷಿಗಳ ವಿಚಾರಣೆ ಮುಂದೂಡುವಂತೆ ವಕೀಲ ಶ್ಯಾಂ ಸುಂದರ್ ಮನವಿ ಮಾಡಿದರು.

ವಾದ ಆಲಿಸಿದ ನ್ಯಾಯಾಲಯ‌ 4 ವಾರಗಳ ಕಾಲ ವಿಚಾರಣೆ ಮುಂದೂಡಿದೆ. ಆಗಸ್ಟ್ 2017ರಲ್ಲಿ ಸಚಿವ ಡಿ.ಕೆ.ಶಿವಕುಮಾರ್ ದೆಹಲಿ ನಿವಾಸದ ಮೇಲೆ ಹಾಗೂ ಕರ್ನಾಟಕದ ನಿವಾಸದ ಮೇಲೂ ಐಟಿ ದಾಳಿಯಾಗಿತ್ತು. ಈ ಸಂದರ್ಭದಲ್ಲಿ ಐಟಿ ಅಧಿಕಾರಿಗಳು ಪ್ರಕರಣ ದಾಖಲಿಸಿ, ತನಿಖೆ ಮುಂದುವರೆಸಿದ್ದರು.

Intro:ಡಿಕೆ ಶಿ ಐಟಿ ಪ್ರಕರಣ
ಜನಪ್ರತಿನಿಧಿಗಳ ನ್ಯಾಯಲಯದಿಂದ ವಿಚಾರಣೆ ಮುಂದೂಡಿಕೆ

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧದ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಅರ್ಜಿಯ ಮುಂದುವರಿದಿದ್ದು ನ್ಯಾಯಾಲಯದ ಮುಂದೆ ಡಿಕೆ ಶಿವಕುಮಾರ್ ಹಾಜರಾಗಿದ್ದರು.

ಐಟಿ ದಾಳಿ ಪ್ರಕರಣದಿಂದ ಕೈಬಿಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸಿಟಿ ಸಿವಿಲ್ ನ್ಯಾಯಲಯದ ನ್ಯಾಯಧೀಶ ರಾಮಚಂದ್ರ ಹುದ್ದಾರ್ ಅವ್ರ ಪೀಠದಲ್ಲಿ‌ನಡೆಯಿತು.

ಡಿಕೆಶಿ ಪರ ವಕೀಲ ಶ್ಯಾಂ ಸುಂದರ್ ವಾದ ಮಂಡನೆ ಮಾಡಿ
2ನೇ ಆರೋಪಿ ವಿರುದ್ದ ಪ್ರಾಷಿಕ್ಯೂಷನ್ ಗೆ ಹೈಕೋರ್ಟ್ ತಡೆ ನೀಡಿದೆ. ನ್ಯಾಯಲಯದಲ್ಲಿ ಸಾಕ್ಷ್ಯ ವಿಚಾರಣೆ ವೇಳೆ ಎಲ್ಲಾ ಆರೋಪಿಗಳು ಹಾಜರಿರಬೇಕು .ಆದರೆ‌ 2 ನೇ ಆರೋಪಿ ಸಚಿನ್ ನಾರಯಣ್ ಗೈರಿನಲ್ಲಿ ಇರುವಾಗ ವಿಚಾರಣೆ ನಡೆಸುವುದು ಬೇಡ ಹೀಗಾಗಿ ಸಾಕ್ಷಿಗಳ ವಿಚಾರಣೆ ಮುಂದೂಡುವಂತೆ ವಕೀಲ ಶ್ಯಾಂ ಸುಂದರ್ ವಾದ ಮನವಿ ಮಾಡಿದ್ರು.ವಿಚಾರಣೆ ಆಲಿಸಿದ ನ್ಯಾಯಲಯ‌ ನಾಲ್ಕು ವಾರಗಳ ಕಾಲ ವಿಚಾರಣೆ ಮುಂದೂಡಿಕೆ ಮಾಡಿದೆ

ಆಗಸ್ಟ್ 2017ರಲ್ಲಿ ಸಚಿವ ಡಿ.ಕೆ.ಶಿವಕುಮಾರ್ ದೆಹಲಿ ನಿವಾಸ ಮೇಲೆ ಹಾಗೂ ಕರ್ನಾಟಕದ ನಿವಾಸದ ಮೇಲೂ ಐಟಿ ದಾಳಿಯಾಗಿತ್ತು. ಈ ಸಂಧರ್ಭದಲ್ಲಿ ಐಟಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿತ್ತು. Body:KN_BNG_05_DK_7204498Conclusion:KN_BNG_05_DK_7204498

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.